Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಿಮ್ಮ ಹುಡುಗನಿಗೆ ಹೇಳಲೇಬಾರದ 4 ವಿಷಯಗಳಿವು

ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಿಕೊಂಡರೆ ಬಾಳಿನಲ್ಲಿ ಹೊಂದಾಣಿಕೆ ಇರುತ್ತದೆ. ಆದರೆ ಸಂಬಂಧದಲ್ಲಿ ಹೆಚ್ಚಿನ ತಕರಾರು ಉಂಟಾಗುವುದನ್ನು ತಡೆಯಲು ಕೆಲವೊಂದು ವಿಷಯಗಳನ್ನು ಹೇಳದೆ ಇರುವುದೇ ಒಳ್ಳೆಯದು. ಆ ವಿಷಯಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.
1. ಮಾಜಿ ಪ್ರಿಯತಮನ ಬಗ್ಗೆ: ಯಾವುದೇ ಗಂಡಸಿಗೆ ತನ್ನ ಹೆಣ್ಣು ಈ ಮೊದಲು ಬೇರೊಂದು ಹುಡುಗನನ್ನು ಇಷ್ಟಪಟ್ಟಿದ್ದಳು ಎಂದು ತಿಳಿಯಲು ಇಷ್ಟವಿರುವುದಿಲ್ಲ. ಒಂದು ವೇಳೆ ನಿಮಗೆ ಈ ಹಿಂದೆ ಲವ್ ಇದ್ದು ಅದು ಮುರಿದು ಬಿದ್ದ ವಿಷಯ ಎಲ್ಲಾ ಗೊತ್ತಾಗಿ ನಿಮ್ಮನ್ನು ಮದುವೆಯಾಗಿದ್ದರೂ ಮಾಜಿ ಪ್ರೇಮಿಯ ಬಗ್ಗೆ ಯಾವುದೇ ವಿಷಯವನ್ನು ಹೇಳದಿರುವುದು ಒಳ್ಳೆಯದು. ಯಾವುದೇ ಕಾರಣಕ್ಕೆ ಗಂಡನನ್ನು ಮಾಜಿ ಪ್ರೇಮಿ ಜೊತೆ ಹೋಲಿಕೆ ಮಾಡದಿರುವುದು ಒಳ್ಳೆಯದು.
2. ನೀನು ಅಮ್ಮನ ಮಗ: ಗಂಡು ಮಕ್ಕಳಿಗೆ ಅಮ್ಮನ ಬಗ್ಗೆ ಬೇರೆಯವರು ದೂರುವುದು ಇಷ್ಟವಾಗುವುದಿಲ್ಲ. ಒಂದು ವೇಳೆ ನಿಮ್ಮ ಗಂಡ ಅಮ್ಮ ಹೇಳಿದ ಮಾತಿಗೆ ಹೆಚ್ಚು ಒತ್ತು ನೀಡುತ್ತಿದ್ದರೆ ಬೇಜಾರು ಮಾಡಿಕೊಳ್ಳದೆ ನಿಮ್ಮ ಭಾವನೆಗನ್ನು ನಿಧಾನಕ್ಕೆ ಅವನಿಗೆ ಅರ್ಥೈಸಿಕೊಳ್ಳುವಂತೆ ಮಾಡಬೇಕು. ಮದುವೆಯಾದ ಕೂಡಲೇ ಗಂಡ ನನ್ನ ಮಾತು ಕೇಳಬೇಕು ಅಂತ ಹೆಣ್ಣು ಮಕ್ಕಳು ಬಯಸುವುದು ತಪ್ಪು. ನಿಮಗೆ ಗಂಡನಾಗುವ ಮುಂಚೆ ಅವನು ಅಮ್ಮನಿಗೆ ಮಗ ಎಂಬ ವಿಷಯ ಮರೆಯಬಾರದು.
3.ನಿನ್ನ ಫ್ರೆಂಡ್ಸ್ ನನಗೆ ಇಷ್ಟವಾಗಲ್ಲ: ಗಂಡ ಅಥವಾ ಬಾಯ್ ಫ್ರೆಂಡ್ ಗೆಳೆಯರ ಜೊತೆ ಸೇರಿದರೆ ಹೆಂಡತಿ ಅಥವಾ ಭಾವಿ ಪತ್ನಿ ಬಗ್ಗೆ ಮರೆತೆ ಹೋಗುತ್ತಾರೆ. ಅವನ ಜೊತೆ ಸುತ್ತಾಡಬೇಕೆಂದಾಗ ಅವನ ಫ್ರೆಂಡ್ಸ್ ಬಂದು ಅವನನ್ನು ಕರೆದು ಕೊಂಡು ಪಾರ್ಟಿ ಮಾಡಲು ಹೋದರೆ 'ನಿನ್ನ ಫ್ರೆಂಡ್ಸ್ ನನಗೆ ಇಷ್ಟವಿಲ್ಲ' ಅಂತ ಕಿರುಚಬೇಕೆಂದು ಅನೇಕ ಸಲ ಅನಿಸಬಹುದು, ಆದರೆ ಹೇಳದೆ ಇರುವುದೆ ಜಾಣತನ. ಅವರದ್ದೇ ಆದ ಸಂತೋಷಕ್ಕೆ ಅಡ್ಡ ಪಡಿಸದಿದ್ದರೆ ನಿಮ್ಮ ಪ್ರೀತಿ ಮತ್ತಷ್ಟು ಬಲವಾಗುತ್ತದೆ.
4. ಬೇರೆ ಹುಡುಗಿಯನ್ನು ನೋಡಲು ಹೇಳುವುದು: ಬೇರೆ ಹುಡುಗಿಯನ್ನು ತೋರಿಸಿ ಅವಳು ನನಗಿಂತ ಚೆನ್ನಾಗಿ ಇದ್ದಾಳಾ ಅಂತ ಕೇಳುವುದು ಅನೇಕ ಹುಡುಗಿಯರ ಅಭ್ಯಾಸವಾಗಿರುತ್ತದೆ. ಆದರೆ ಹಾಗೇ ಕೇಳದೆ ಇರುವುದೇ ಒಳ್ಳೆಯದು. ಈ ರೀತಿ ಪ್ರಶ್ನೆಗೆ ಉತ್ತರಿಸಲು ಹುಡುಗರು ಎರಡು ಬಾರಿ ಯೋಚಿಸುತ್ತಾರೆ. ಒಂದು ವೇಳೆ ಅವಳು ನಿನಗಿಂತ ಚೆನ್ನಾಗಿ ಇದ್ದಾಳೆ ಅಂದರೆ ಅವನನ್ನು ಫ್ಲರ್ಟ್ ಅಂತ ತಪ್ಪು ಭಾವಿಸುವುದು ಅಥವಾ ನೀನೆ ಚೆಂದ ಅಂತ ಹೇಳಿದರೂ ಅದಕ್ಕೂ ಏನಾದರೂ ಹೇಳುವುದು ಇವೆಲ್ಲಾ ವಿನಾಕಾರಣ ಜಗಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇಂತಹ ವಿಷಯಗಳ ಬಗ್ಗೆ ಹೇಳದೆ ಇರುವುದೆ ಒಳ್ಳೆಯದು.



Click it and Unblock the Notifications
