Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಥತ್, ನಿನಗೆ ಕೆಂಪು ಸೀರೆ ಇಷ್ಟವೆಂದು ಗೊತ್ತಿರಲೇ ಇಲ್ಲ

ಊಫ್..! ಎರಡು ವರುಷ, ಎರಡು ನಿಮಿಷದಂತೆ ಕಳೆದು ಹೋಯಿತು. ನಾ ಬರೆದ ಕೆಟ್ಟ ಪದ್ಯಗಳನ್ನು ತಿದ್ದಿದೆ ಜೊತೆಜೊತೆಗೆ ನನ್ನ ಬದುಕನ್ನು. ನನಗೆ ಸತತ ಸೋಲಿನ ನಂತರ ಕೊನೆಗೂ ಕೆಲಸ ಸಿಕ್ಕಾಗ, ಸ್ವರ್ಗದಲ್ಲಿರುವ ನನ್ನ ಅಮ್ಮ ಬಿಟ್ಟರೆ ಹೆಚ್ಚು ಸಂತೋಷ ಪಟ್ಟಿದ್ದು ನೀನೆ. ಹೊಸದಾಗಿ ಶಾಲೆಗೆ ಸೇರುವ ಪುಟ್ಟ ಮಗುವಿನ ಹಾಗೆ ನನ್ನನು ಬಟ್ಟೆ ಅಂಗಡಿಗೆ ಕರೆದೊಯ್ದೊದೆ, ಶ್ರದ್ದೆಯಿಂದ ಆರಿಸಿ ಬಟ್ಟೆ ಕೊಡಿಸಿದೆ, ಸಿಹಿ ತಿನಿಸಿ ನನ್ನ ಗೆಲುವಿನಲ್ಲಿ ನೀನು ಭಾಗವಾದೆ. ಮೊದಲ ಸಂಬಳದಲ್ಲಿ ನಿನಗೆ ಪ್ರೀತಿಯಿಂದ ತಂದ ಸೀರೆಯನ್ನು ಸ್ವೀಕರಿಸಲು ಎಷ್ಟೊಂದು ಹಠಮಾಡಿದೆ ನೀನು... ಕೊನೆಗೆ ನಾನು ಗಂಡಸು ಎಂಬ ಅಹಂಕಾರ ಬಿಟ್ಟು ಕಣ್ಣೀರು ಹಾಕಿದಾಗಲೇ ನೀನು ಸೀರೆ ಸ್ವೀಕರಿಸಿ ಜೊತೆಗೆ ಬೋರಾಗುವಷ್ಟು ಉಳಿತಾಯದ ಪಾಠ ಮಾಡಿದೆ.
ಕ್ಷಮಿಸು! ಆ ದಿನ ಗೊತ್ತಾಗದೆ ಪೆದ್ದು ಪೆದ್ದಾಗಿ ಸೀಮಂತಕ್ಕೆ ತರುವ ಹಾಗೆ... ಹಸಿರು ಸೀರೆ ತಂದಿದ್ದೆ. ಎಷ್ಟೋ ದಿನಗಳ ನಂತರ ನನಗೆ ಗೊತ್ತಾಗಿದ್ದು ನಿನಗೆ ಕೆಂಪು ಬಣ್ಣ ಇಷ್ಟವೆಂದು. ಅದರೂ ನಿನ್ನ ಪ್ರೀತಿ ದೊಡ್ಡದು, ಸಂತೋಷದಿಂದ ಅದನ್ನುಟ್ಟು ನನ್ನೊಟ್ಟಿಗೆ ಸಂಭ್ರಮಿಸಿದೆ. ಆದರೂ ನಾನಾಗಿಯೇ ಒತ್ತಾಯ ಮಾಡಿ ಕೇಳುವವರೆಗೂ ಒಂದೇ ಒಗೆತಕ್ಕೆ ಸೀರೆ ಬಣ್ಣ ಬಿಟ್ಟಿದ್ದು, ಅರ್ಧಕ್ಕೆ ಅರ್ಧ ಶ್ರಿಂಕಾಗಿದ್ದು ನನಗೆ ಹೇಳಲೇ ಇಲ್ಲ. ಈಗಲೂ ನನ್ನ ಕಡೆಯಿಂದ ನಿನಗೆ ಒಂದು ಹಸಿರು... ಅಲ್ಲಲ್ಲ ಕೆಂಪು ಸೀರೆ ಬಾಕಿಯಿದೆ.



Click it and Unblock the Notifications
