Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಇವತ್ತು ಅಡುಗೆ ಏನಪ್ಪಾ? ಅವರೆಕಾಳು ಹುಳಿಯಪ್ಪ!
ಅವರೆ ಬೇಳೆಯ ಮುಂದೆ ಬೇರೆ ಯಾವ ಬೇಳೆಯ ಬೇಳೆಕಾಳು ಬೇಯುವುದಿಲ್ಲ.. ಅಡುಗೆಮನೆಯಿಂದ ಘಂ ಎನ್ನುವ ಪರಿಮಳ ಬರುತ್ತಿದೆ. ಎಲ್ಲಾರು ಊಟಕ್ಕೆ ಬನ್ನಿ..
ಬೇಕಾಗುವ ಪದಾರ್ಥ : ಸುಲಿದು, ಆರಿಸಿದ 2 ಪಾವಿನಷ್ಟು ಅವರೆಕಾಳು, 1 ಹೋಳು ತೆಂಗಿನಕಾಯಿ, 1 ಈರುಳ್ಳಿ, 1 ಚಮಚ ಜೀರಿಗೆ, ಒಂದೊಂದು ಚಮಚದಷ್ಟು ಕೊತ್ತಂಬರಿಬೀಜ, ಗಸಗಸೆ, ಅಕ್ಕಿ ಹಾಗೂ ಸಾಂಬಾರು ಪುಡಿ.
ಮಾಡುವ ವಿಧಾನ : ಚೆನ್ನಾಗಿ ಆರಿಸಿದ ಅವರೆಕಾಳಿಗೆ ಮೂರು ಲೋಟದಷ್ಟು ನೀರು ಹಾಕಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಆನಂತರ ತೆಂಗಿನಕಾಯಿ ತುರಿ, ಈರುಳ್ಳಿ, ಜೀರಿಗೆ, ಕೊತ್ತಂಬರಿ ಬೀಜ, ಗಸಗಸೆ, ಅಕ್ಕಿ, ಸಾಂಬಾರು ಪುಡಿ ಇವಿಷ್ಟನ್ನೂ ಹಸಿಯಾಗಿಯೇ ನುಣ್ಣಗೆ ರುಬ್ಬಿ ಬೆಂದ ಅವರೆಕಾಳಿಗೆ ಸೇರಿಸಿ.
ನಿಮ್ಮ ರುಚಿಗೆ ಅನುಗುಣವಾಗಿ ಕಲ್ಲುಪ್ಪು ಹಾಕಿ ಮತ್ತೊಂದು ಕುದಿ ಕುದಿಸಿ, ಕೆಳಗಿಳಿಸಿದ ತರುವಾಯ ಇಂಗು- ಸಾಸಿವೆ , ಕರಿಬೇವು ಒಗ್ಗರಣೆ ಹಾಕಿದರೆ, ಸೊಗಸಾದ ಅವರೆಕಾಳು ಹುಳಿ ಸಿದ್ಧ. ಹುಳಿ ದಪ್ಪನಾಗಿರಬಾರದು, ಸ್ಪಲ್ಪ ನೀರು ಜಾಸ್ತಿ ಹಾಕಿ ತೆಳ್ಳಗೆ ಮಾಡಿ. ಮುದ್ದೆ ಯ ಜತೆಗೆ ಅನ್ನದ ಜತೆಗೆ ಜೂಂಂಂ!



Click it and Unblock the Notifications
