Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮುಂಬಯಿ ಶೈಲಿಯ ವಡಪಾವ್ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
* 8 ಪಾವ್
* 4-5 ಆಲೂಗೆಡ್ಡೆ (ಬೇಯಿಸಿದ ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿರಬೇಕು)
* ಹಸಿ ಮೆಣಸಿನ ಕಾಯಿ
* ಒಂದೂವರೆ ಕಪ್ ತೆಂಗಿನ ತುರಿ
* ಒಂದು ಚಮಚ ಸಾಸಿವೆ
* ಚಿಟಿಕೆಯಷ್ಟು ಇಂಗು
* ಸ್ವಲ್ಪ ಕರಿಬೇವಿನ ಎಲೆ
* ಅರ್ಧ ಚಮಚ ಕರಿಮೆಣಸಿನ ಪುಡಿ
* ಒಂದು ಚಮಚ ಎಣ್ಣೆ
* 3/4 ಕಪ್ ಕಡಲೆ ಹಿಟ್ಟು
* 1/4 ಚಮಚ ಅರಿಶಿಣ ಪುಡಿ
* ಚಿಟಕೆಯಷ್ಟು ಅಡುಗೆ ಸೋಡಾ
* ರುಚಿಗೆ ತಕ್ಕ ಉಪ್ಪು
* ಹಸಿಮೆಣಸಿನ ಕಾಯಿ ಸಾಸ್
ತಯಾರಿಸುವ ವಿಧಾನ:
* ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಇವುಗಳನ್ನು ಮಿಕ್ಸಿಯಲ್ಲಿ ಅರೆದು ಪೇಸ್ಟ್ ಮಾಡಿಡಬೇಕು.
* ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಚಿಟಿಕೆಯಷ್ಟು ಇಂಗು ಮತ್ತು ಕರಿಬೇವಿನ ಎಲೆಯನ್ನು ಹಾಕಬೇಕು. ಈಗ ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿ ಇವುಗಳನ್ನು ಹಾಕಿ ತಯಾರಿಸಿದ ಪೇಸ್ಟ್ ಹಾಕಿ 2 ನಿಮಿಷ ಸೌಟುನಿಂದ ಆಡಿಸುತ್ತಾ ಹುರಿಯಬೇಕು. ಈಗ ಆಲೂಗೆಡ್ಡೆ, ಅರಿಶಿಣ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ ಉರಿಯಿಂದ ತೆಗೆದು ಆರಲು ಇಡಬೇಕು.
* ಈಗ ಈ ಮಿಶ್ರಣದಿಂದ 6-7 ಚಿಕ್ಕ ಉಂಡೆಗಳನ್ನು ಕಟ್ಟಿ.
* ಈಗ ಕಡಲೆ ಹಿಟ್ಟು, ಅರಿಶಿಣ ಪುಡಿ, ಚಿಟಿಕೆಯಷ್ಟು ಅಡುಗೆ ಸೋಡಾ,ತೆಂಗಿನಕಾಯಿ ತುರಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ ಸ್ವಲ್ಪ ನೀರು ಹಾಕಿ ಬೋಂಡಕ್ಕೆ ಮಾಡುವಾಗೆ ಮಿಶ್ರಣವನ್ನು ಹದವಾಗಿ ಕಲೆಸಿ.
* ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ
* ಈಗ ಆಲೂಗೆಡ್ಡೆ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಕುದಿಯುತ್ತಿರುವ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರೆಯಬೇಕು.
ವಡಾ ಪಾವ್ ಮಾಡುವ ಕೊನೆಯ ಹಂತ:
ಪಾವ್ ಅನ್ನು ಎರಡು ಸಮ ಭಾಗಗಳಾಗಿ ಕತ್ತರಿಸಿ ಬೇಕು. ನಂತರ ತವಾವನ್ನು ಉರಿಯಲ್ಲಿ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಪಾವ್ ನ ಎರಡೂ ಬದಿಯನ್ನು ಸ್ವಲ್ಪ ಬಿಸಿ ಮಾಡಿ ಅದರ ಮೇಲೆ ಹಸಿಮೆಣಸಿನ ಕಾಯಿ ಸಾಸ್ ಸವರಿ , ವಡಾವನ್ನು ಪಾವ್ ಮಧ್ಯೆದಲ್ಲಿಟ್ಟರೆ ಸವಿರುಚಿಯಾದ ವಡಾಪಾವ್ ರೆಡಿ. (ಹಸಿಮೆಣಸಿನ ಕಾಯಿ ಸಾಸ್ ಮತ್ತು ಟೊಮೆಟೊ ಸಾಸ್ ಸವರಬಹುದು)
ಸಲಹೆ: ವಡಾ ಪಾವ್ ಸಿಗದಿದ್ದರೆ ಸ್ವಲ್ಪ ದಪ್ಪ ಬ್ರೆಡ್ ನಡುವೆ ಕೂಡ ವಡಾ ಇಟ್ಟು ತಿನ್ನಬಹುದು.



Click it and Unblock the Notifications
