Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನೇಂದ್ರ ಬಾಳೆ ಹಣ್ಣಿನ ಬಜ್ಜಿ ತಿನ್ನಲು ಬಲುರುಚಿ

ಈ ಬಜ್ಜಿಗೆ ನೇಂದ್ರ ಬಾಳೆ ಹಣ್ಣನ್ನು ಉಪಯೋಗಿಸಬೇಕು. ಈ ಬಾಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿ ಬಜ್ಜಿ ಮಾಡುವ ಸುಲಭ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* ನೇಂದ್ರ ಬಾಳೆ ಹಣ್ಣು 4
* ಕಡಲೆ ಹಿಟ್ಟು 2 ಕಪ್
* ಅಕ್ಕಿ ಹಿಟ್ಟು ಅರ್ಧ ಲೋಟ
* ಕೆಂಪು ಮೆಣಸಿನ ಪುಡಿ ಒಂದೂವರೆ ಚಮಚ
* ರುಚಿಗೆ ತಕ್ಕ ಉಪ್ಪು
* ಚಿಟಿಕೆಯಷ್ಟು ಅರಿಶಿಣ
* ಎಣ್ಣೆ
ತಯಾರಿಸುವ ವಿಧಾನ:
1. ನೇಂದ್ರ ಬಾಳೆ ಹಣ್ಣನ್ನು ಉದ್ದುದ್ದವಾಗಿ ಕತ್ತರಿಸಿದರೆ ಒಂದು ಬಾಳೆ ಹಣ್ಣಿನಲ್ಲಿ 4 ಬಜ್ಜಿ ಕರಿಯಬಹುದು, ಇಲ್ಲದಿದ್ದರೆ ಬಾಳೆ ಹಣ್ಣನ್ನು ಸಮ ಅರ್ಧ ಭಾಗವಾಗಿ ಕತ್ತರಿಸಿ ನಂತರ ಅರ್ಧ ಬಾಳೆ ಹಣ್ಣನ್ನು ಉದ್ದುದ್ದವಾಗಿ 4 ಪೀಸ್ ಮಾಡಿದರೆ 8 ಬಜ್ಜಿ ಕರಿಯಬಹುದು.
2. ಕಡಲೆಹಿಟ್ಟು,ಅಕ್ಕಿ ಹಿಟ್ಟು, ಅರಿಶಿಣ, ಕೆಂಪು ಮೆಣಸಿನ ಹುಡಿ, ಉಪ್ಪು ಮತ್ತು ನೀರು ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು. ಮಿಶ್ರಣವು ಸ್ವಲ್ಪ ಗಟ್ಟಿಯಿರುವಂತೆ ಕಲೆಸಬೇಕು.
3. ನಂತರ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕುದಿಸಬೇಕು, ಈಗ ಕತ್ತರಿಸಿದ ಬಾಳೆಹಣ್ಣನ್ನು ಕಡಲೆ ಹಿಟ್ಟಿನ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಕರಿದರೆ ನೇಂದ್ರ ಬಾಳೆ ಹಣ್ಣಿನ ಬಜ್ಜಿ ರೆಡಿ. ಇದನ್ನು ಬಿಸಿಬಿಸಿಯಾಗಿರುವಾಗಲೇ ತಿಂದರೆ ತುಂಬಾ ರುಚಿಕರವಾಗಿರುತ್ತದೆ.
ಸಲಹೆ: ನೇಂದ್ರ ಬಾಳೆ ಹಣ್ಣು ಬಳಸುವ ಬದಲು , ಸಾರು ಬಾಳೆ ಕಾಯಿಯಿಂದ ಕೂಡ ತಯಾರಿಸಬಹುದು.



Click it and Unblock the Notifications
