Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹೆಸರು ಬೇಳೆಯ ಧೋಕ್ಲಾ ರೆಸಿಪಿ
ಆರೋಗ್ಯದ ದೃಷ್ಟಿಯಿಂದ ಕಡಿಮೆ ಕ್ಯಾಲೋರಿಯ ಆಹಾರಗಳನ್ನು ತಿನ್ನುವುದು ತುಂಬಾ ಒಳ್ಳೆಯದು. ಆದರೆ ತುಂಬಾ ಕಡಿಮೆ ಕ್ಯಾಲೋರಿಯ ಅಡುಗೆಗಳು ಅಷ್ಟೇನು ರುಚಿ ಇರುವುದಿಲ್ಲ, ಆದ್ದರಿಂದ ತಿನ್ನಲು ಇಷ್ಟವಾಗುವುದಿಲ್ಲ. ಆದ್ದರಿಂದ ಅಂತಹ ಪದಾರ್ಥಗಳನ್ನು ತಿನ್ನಲು ಇಷ್ಟವಾಗುವುದಿಲ್ಲ.
ಆದರೆ ಧೋಕ್ಲಾ ಕಡಿಮೆ ಕ್ಯಾಲೋರಿ ತಿಂಡಿಯಾಗಿದ್ದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇಲ್ಲಿ ನಾವು ಹೆಸರುಬೇಳೆ ಹಾಕಿ ತಯಾರಿಸುವ ಧೋಕ್ಲಾದ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು:
* ಹೆಸರು ಬೇಳೆ 1 ಕಪ್ (ನೀರಿನಲ್ಲಿ ನೆನೆ ಹಾಕಿರಬೇಕು)
* ಕಡಲೆ ಬೇಳೆ 1 ಚಮಚ
* ಹಸಿ ಮೆಣಸಿನ ಕಾಯಿ 3-4
* ಕೊತ್ತಂಬರಿ ಬೀಜ 1 ಚಮಚ
* ಮೊಸರು 2 ಚಮಚ
* ಅರಿಶಿಣ ಪುಡಿ 1 ಚಮಚ
* ರುಚಿಗೆ ತಕ್ಕ ಉಪ್ಪು
* ಅಡುಗೆ ಸೋಡಾ ಅರ್ಧ ಚಮಚ
ಒಗ್ಗರಣೆಗೆ
* ಎಣ್ಣೆ 1 ಚಮಚ
* ಸಾಸಿವೆ ಅರ್ಧ ಚಮಚ
* ಚಿಟಿಕೆಯಷ್ಟು ಇಂಗು
* ಕರಿಬೇವಿನ ಎಲೆ7-8
* ಹಸಿ ಮೆಣಸಿನಕಾಯಿ 2 (ಚಿಕ್ಕದಾಗಿ ಕತ್ತರಿಸಿದ್ದು)
ತಯಾರಿಸುವ ವಿಧಾನ:
1. ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಅದಕ್ಕೆ ಹಸಿಮೆಣಸಿನ ಕಾಯಿ, ಕಡಲೆ ಬೇಳೆ ಮತ್ತು ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣನೆ ರುಬ್ಬಬೇಕು.
2. ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಮೊಸರು, ಕೊತ್ತಂಬರಿ ಬೀಜ, ಅರಿಶಿಣ ಪುಡಿ ಮತ್ತು ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಬೇಕು.
3. ನಂತರ ಒಂದು ತಟ್ಟೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಈ ಮಿಶ್ರಣವನ್ನು ಸುರಿದು ಆವಿಯಲ್ಲಿ ಬೇಯಿಸಬೇಕು (ತಟ್ಟೆ ಇಡ್ಲಿ ಮಾಡುವ ರೀತಿಯಲ್ಲಿ ಬೇಯಿಸಿ).
4. ನಂತರ ಅದನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು.
5. ಪಾತ್ರೆ ಬಿಸಿ ಮಾಡಿ ಅದರಲ್ಲಿ ಒಂದು ಚಮಚ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ, ಕರಿ ಬೇವಿನ ಎಲೆ, ಇಂಗು ಹಾಕಿ ನಂತರ ಕತ್ತರಿಸಿದ ತುಂಡುಗಳನ್ನು ಅದರಲ್ಲಿ ಹಾಕಿ ಮಿಶ್ರಣ ಮಾಡಿ ಉರಿಯಿಂದ ತೆಗೆದರೆ ಧೋಕ್ಲಾ ರೆಡಿ.
ಇದನ್ನು ಚಟ್ನಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
