Latest Updates
-
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ -
ಎಚ್ಚರ! ಬೆಂಗಳೂರಿನಲ್ಲಿ ಶಿಶು ಆಹಾರದ ಮೇಲೆ FSSAI ದಾಳಿ: ನಿಮ್ಮ ಮಗುವಿನ ಆಹಾರ ಸುರಕ್ಷಿತವೇ? -
ಇಂದಿನ ಪೆಟ್ರೋಲ್, ಡೀಸೆಲ್ ದರ ಸ್ಥಿರ: ನಿಮ್ಮ ನಗರದ ಬೆಲೆ ತಿಳಿಯಿರಿ ಮತ್ತು ಮಳೆಗಾಲದ ಮೈಲೇಜ್ ಟಿಪ್ಸ್ ಇಲ್ಲಿದೆ -
ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಕ್ರಮಗಳನ್ನು ಮರೆಯದಿರಿ! -
ರಾಜಸ್ಥಾನ UCC: ಲಿವ್-ಇನ್ ಮತ್ತು ಮದುವೆ ಜೋಡಿಗಳೇ ಎಚ್ಚರ, ಈ ದಾಖಲೆಗಳು ಸಿದ್ಧವಿರಲಿ!
ಬಾಯಿಯಲ್ಲಿ ನೀರೂರಿಸುವ ಭಾರತೀಯ ಶೈಲಿಯ ನೂಡಲ್ಸ್
ಜಗತ್ತಿನಾದ್ಯಂತ ತುಂಬಾ ಜನಪ್ರಿಯವಾಗಿರುವ ಒಂದು ಚೈನೀಸ್ ಡಿಶ್ ಆಗಿದೆ ನೂಡಲ್ಸ್. ಸ್ಥಳಿಯ ರುಚಿಗನುಗುಣವಾಗಿ ಈ ಡಿಶ್ ಅನ್ನು ತಯಾರಿಸಬಹುದು. ಹೆಚ್ಚಿನ ತಿನಿಸುಗಳ ತಯಾರಿಯಲ್ಲಿ ಭಾರತೀಯ ಮಸಾಲೆ ಪದಾರ್ಥಗಳಾದ ಬೆಳ್ಳುಳ್ಳಿ ಮತ್ತು ಕೆಂಪು ಮೆಣಸುಗಳನ್ನು ಬಳಸಿಕೊಂಡು ನೂಡಲ್ಸ್ ಅನ್ನು ಸಿದ್ಧಪಡಿಸಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಕ್ಕಾ ರೈಸ್ ನೂಡಲ್ಸ್: ಚೈನೀಸ್ ರೆಸಿಪಿ
ಭಾರತೀಯ ಅಡುಗೆಯಲ್ಲೂ ಸ್ಥಳೀಯ ರುಚಿ ಮತ್ತು ಮಸಾಲೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ವಿವಿಧ ರೀತಿಯ ಚೈನೀಸ್ ನೂಡಲ್ಸ್‌ಗಳನ್ನು ತಯಾರಿಸಿರುವುದು ನಿಮಗೆ ತಿಳಿದುಬರಬಹುದು. ಇಂದು ಏನನ್ನು ತಯಾರಿಸಬೇಕೆಂಬ ಗೊಂದಲ ನಿಮ್ಮಲ್ಲಿ ಮೂಡಿದ್ದರೆ, ಇಲ್ಲಿದೆ ಸರಳ ನೂಡಲ್ಸ್ ರೆಸಿಪಿ.

ಮುಖ್ಯ ತಿನಿಸಾಗಿ ಸಿದ್ಧಪಡಿಸಬಹುದಾದ ಭಾರತೀಯ ಶೈಲಿಯ ಬೆಳ್ಳುಳ್ಳಿ ನೂಡಲ್ಸ್ ಒಂದು ಸರಳ ಮತ್ತು ತ್ವರಿತ ರೆಸಿಪಿಯಾಗಿದೆ. ಹಾಗಿದ್ದರೆ ತಡ ಏಕೆ? ನಿಮಗೆ ಹೊಸ ರೀತಿಯ ನೂಡಲ್ಸ್ ತಯಾರಿಸಬೇಕೆಂಬ ಆಸೆ ಇದ್ದಲ್ಲಿ ಈ ರೆಸಿಪಿಯನ್ನು ಪ್ರಯತ್ನಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸೊಪ್ಪಿನ ಪಲ್ಯ-ಬ್ಯಾಚುಲರ್ ರೆಸಿಪಿ
ಪ್ರಮಾಣ - 3-4 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ - 10 ನಿಮಿಷಗಳು
ಅಡುಗೆಗೆ ತಗಲುವ ಸಮಯ - 35-40 ನಿಮಿಷಗಳು
ಸಾಮಾಗ್ರಿಗಳು
1.ನೂಡಲ್ಸ್ - ಮೀಡಿಯಂ ಆಕಾರದ ಪ್ಯಾಕೇಟ್
2.ಬೆಳ್ಳುಳ್ಳಿ - 10-15 ಎಸಳುಗಳು
3.ಹಸಿಮೆಣಸು - 3-4 (ಸೀಳಿದ್ದು)
4.ಈರುಳ್ಳಿ - 2 (ಹೆಚ್ಚಿದ್ದು)
5.ಕ್ಯಾರೇಟ್ - 1 (ಹೆಚ್ಚಿದ್ದು)
6.ಸೋಯಾ ಸಾಸ್ - 1 ಸ್ಪೂನ್
7.ಕೆಂಪು ಮೆಣಸು - 2 (ಹುಡಿ ಮಾಡಿದ್ದು)
8.ಉಪ್ಪು - ರುಚಿಗೆ ತಕ್ಕಷ್ಟು
9.ಎಣ್ಣೆ - 2 ಸ್ಪೂನ್
ಮಾಡುವ ವಿಧಾನ
1.ಆಳವಿರುವ ಪ್ಯಾನ್‌ನಲ್ಲಿ ನೀರು ಕಾಯಿಸಿಕೊಳ್ಳಿ. ನೀರು ಕುದಿಯಲು ಪ್ರಾರಂಭಗೊಳ್ಳುತ್ತಿದ್ದಂತೆ, ನೂಡಲ್ಸ್‌ಗಳನ್ನು ಆ ನೀರಿಗೆ ಹಾಕಿ ಮತ್ತು ಸ್ವಲ್ಪ ಉಪ್ಪು ಚಿಮುಕಿಸಿ.
2.ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಮತ್ತು ನೂಡಲ್ಸ್ ಚೆನ್ನಾಗಿ ಬೇಯಲಿ. ಎಣ್ಣೆ ಮತ್ತು ಉಪ್ಪನ್ನು ಸೇರಿಸುವುದು ನೂಡಲ್ಸ್ ಒಂದಕ್ಕೊಂದು ಅಂಟಿಕೊಳ್ಳುವುದನ್ನು ತಡೆಯುತ್ತದೆ.
3.ಒಮ್ಮೆ ಆದ ನಂತರ, ನೂಡಲ್ಸ್ ಅನ್ನು ಬಸಿಯಿರಿ ಮತ್ತು ಸ್ವಲ್ಪ ತಣ್ಣೀರನ್ನು ಹುಯ್ಯಿರಿ. ಫೋರ್ಕ್ ಬಳಸಿ ನೂಡಲ್ಸ್ ಅನ್ನು ಬೇರ್ಪಡಿಸಿ.
4.ಇನ್ನು ಪ್ಯಾನ್‌ನಲ್ಲಿ ಉಳಿದ ಎಣ್ಣೆಯನ್ನು ಬಿಸಿಮಾಡಿಕೊಳ್ಳಿ. ಹುಡಿಮಾಡಿದ ಕೆಂಪು ಮೆಣಸಿನೊಂದಿಗೆ ಒಗ್ಗರಣೆ ಮಾಡಿ.
5.ಸಣ್ಣ ಉರಿಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಎರಡು ನಿಮಿಷಗಳ ಕಾಲ ಹುರಿಯಿರಿ.
6.ಈಗ ಕ್ಯಾರೇಟ್, ಹಸಿಮೆಣಸನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಕ ಚಕ ಮಾಡಬಹುದು ಈ ಚೈನೀಸ್ ಬೇಲ್
7.ರುಚಿಗೆ ತಕ್ಕಂತೆ ಉಪ್ಪು ಚಿಮುಕಿಸಿ. ನೀರುಳ್ಳಿ ಕೆಂಪಾದಂತೆ ಕಂಡುಬರುತ್ತಿದ್ದಂತೆ, ಸೋಯಾ ಸಾಸ್ ಅನ್ನು ಸೇರಿಸಿ ಮತ್ತು ಮಿಶ್ರ ಮಾಡಿಕೊಳ್ಳಿ.
8.ನೂಡಲ್ಸ್ ಅನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಇದರಿಂದ ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಮಿಶ್ರಗೊಳ್ಳುತ್ತದೆ.
ಭಾರತೀಯ ಶೈಲಿಯ ಬೆಳ್ಳುಳ್ಳಿ ನೂಡಲ್ಸ್ ಸವಿಯಲು ಸಿದ್ಧಗೊಂಡಿದೆ. ಟೊಮೇಟೊ ಸಾಸ್ ಅಥವಾ ಮಂಚೂರಿಯನ್‌ನೊಂದಿಗೆ ಬಿಸಿಯಾಗಿ ಬಡಿಸಿ.



Click it and Unblock the Notifications