Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಂಜೆಯ ಸ್ನ್ಯಾಕ್ಸ್ ರೆಸಿಪಿ: ಚಿಕನ್ ಈರುಳ್ಳಿ ಪಕೋಡಾ!
ಸಂಜೆಯ ಟೀಯೊಂದಿಗೆ ಆರೋಗ್ಯಕರವಾಗಿರುವ ಕುರುಕಲು ಟೀಯ ಸ್ವಾದವನ್ನು ಹೆಚ್ಚಿಸುತ್ತದೆ. ಬರೀ ಟೀ ಸಂಜೆಯ ವಾತಾವರಣವನ್ನು ಸಪ್ಪೆಯಾಗಿಸುವುದೂ ಖಂಡಿತ. ಆದರೆ ಲೈಟ್ ಆದ ಸ್ನ್ಯಾಕ್ಸ್ ಟೀ ಜೊತೆಗಿದ್ದರೆ ಅದರ ಮಜವೇ ಬೇರೆ ಅಲ್ಲವೇ...
ಅದಕ್ಕಾಗಿ ನಿಮ್ಮ ಇಂದಿನ ಸಂಜೆಯ ಸ್ವಾದವನ್ನು ಹೆಚ್ಚಿಸಲು ನಾವು ಬರುತ್ತಿದ್ದೇವೆ ಗರಿಗರಿಯಾದ ಚಿಕನ್ ಹಾಗೂ ಈರುಳ್ಳಿ ಪಕೋಡಾದೊಂದಿಗೆ. ಸುಲಭದಲ್ಲೇ ತಯಾರಿಸಬಹುದಾದ ಈ ಸ್ನ್ಯಾಕ್ಸ್ ಅನ್ನು ನಿಮ್ಮ ಮನೆಯವರು ಖಂಡಿತ ಇಷ್ಟಪಡುತ್ತಾರೆ.

ಪ್ರಮಾಣ: 4
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು
ನೀವು ಮಂಗಳೂರು ಬನ್ಸ್ ರೆಸಿಪಿಯ ರುಚಿ ನೋಡಿದಿರಾ?
ಸಾಮಾಗ್ರಿಗಳು:
. ಚಿಕನ್ (ಬೋನ್‌ಲೆಸ್) 200 ಗ್ರಾಂ (ಸಣ್ಣದಾಗಿ ಕತ್ತರಿಸಿದ್ದು)
.ಈರುಳ್ಳಿ ರಿಂಗ್‌ಗಳು - 100 ಗ್ರಾಂ
.ಹಸಿಮೆಣಸು - 4 (ಕತ್ತರಿಸಿದ್ದು)
.ಕೊತ್ತಂಬರಿ ಸೊಪ್ಪು - 2 ಎಸಳು (ಕತ್ತರಿಸಿದ್ದು)
.ಕಡಲೆ ಹಿಟ್ಟು - 1 ಕಪ್
.ಕಬಾಬ್ ಮಸಾಲಾ - 1 ಸ್ಪೂನ್
.ಫೆನ್ನಲ್ ಬೀಜಗಳು - 1/2 ಸ್ಪೂನ್
.ಉಪ್ಪು - ರುಚಿಗೆ ತಕ್ಕಷ್ಟು
.ಎಣ್ಣೆ - 3 ಕಪ್‌ಗಳು
ರುಚಿ ರುಚಿಯಾದ ಕಡ್ಲೆಬೇಳೆ ಆಂಬೋಡೆ ರೆಸಿಪಿ!
ಮಾಡುವ ವಿಧಾನ:
1. ಕಡಲೆಹಿಟ್ಟನ್ನು ನೀರು, ಉಪ್ಪು ಹಾಗೂ ಕಬಾಬ್ ಮಸಾಲಾದೊಂದಿಗೆ ಮಿಶ್ರ ಮಾಡಿಕೊಳ್ಳಿ.
2. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಮತ್ತು ಗಂಟುಗಳು ಇರದಂತೆ ನೋಡಿಕೊಳ್ಳಿ.
3. ನಂತರ ಹಸಿಮೆಣಸು, ಫೆನ್ನಲ್ ಸೀಡ್ಸ್ ಹಾಗೂ ಕೊತ್ತಂಬರಿ ಸೊಪ್ಪನ್ನು ಮಿಶ್ರಣಕ್ಕೆ ಹಾಕಿ.
4. ಕೊನೆಗೆ ಚಿಕನ್ ತುಂಡುಗಳು ಹಾಗೂ ಈರುಳ್ಳಿ ರಿಂಗ್ ಅನ್ನು ಹಿಟ್ಟಿಗೆ ಹಾಕಿ
5. ಬಾಣಲೆಗೆ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಿ.
6. ಈಗ ಹಿಟ್ಟಿನಲ್ಲಿ ಅದ್ದಿದ ಚಿಕನ್ ತುಂಡುಗಳು ಮತ್ತು ಈರುಳ್ಳಿ ರಿಂಗ್ ಅನ್ನು ಎಣ್ಣೆಗೆ ಹಾಕಿ.
7. ಉರಿಯನ್ನು ಕಡಿಮೆಗೊಳಿಸಿ ಮತ್ತು ಪಕೋಡಾ ಚಿನ್ನ ಮಿಶ್ರಿತ ಕಂದು ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.
8. ಈ ಗರಿಗರಿಯಾದ ಚಿಕನ್ ಈರುಳ್ಳಿ ಪಕೋಡಾವನ್ನು ಸಂಜೆಯ ಕಾಫಿ ಅಥವಾ ಟೀಯೊಂದಿಗೆ ನಿಮಗೆ ಸವಿಯಬಹುದು.



Click it and Unblock the Notifications
