Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ಯಾಪ್ಸಿಕಂ ಬೋಂಡಾದ ರೆಸಿಪಿ
ಮಳೆಗಾಲದಲ್ಲಿ ಬಜ್ಜಿ, ಬೋಂಡಾ ಇವುಗಳನ್ನು ಮಾಡಿ ತಿನ್ನಬೇಕೆಂದು ಅನಿಸಿದಾಗ ಈ ಕ್ಯಾಪ್ಸಿಕಂ ಬೋಂಡಾ ಏಕೆ ಟ್ರೈ ಮಾಡಬಾರದು? ಕ್ಯಾಪ್ಸಿಕಂ ಬೋಂಡಾ ತಯಾರಿಸಿ ಅದರೊಳಗೆ ಮಸಾಲೆ ತುಂಬಿ ತಿನ್ನಲು ತುಂಬಾ ರುಚಿಯಾಗಿರುತ್ತದೆ.
ಈರುಳ್ಳಿ ಮಸಾಲೆ ತುಂಬಿ ಮಾಡುವ ಕ್ಯಾಪ್ಸಿಕಂ ಬೋಂಡಾದ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
ಕ್ಯಾಪ್ಸಿಕಂ 3-4
ಕಡಲೆ ಹಿಟ್ಟು ಅರ್ಧ ಕಪ್
ಮೆಣಸಿನ ಪುಡಿ ಕಾಲು ಚಮಚ
ಅರಿಶಿಣ ಪುಡಿ 1/4 ಚಮಚ
ಸ್ವಲ್ಪ ಉಪ್ಪು
ಎಣ್ಣೆ
ಕ್ಯಾಪ್ಸಿಕಂ ಒಳಗೆ ತುಂಬಲು
ಈರುಳ್ಳಿ
ಸ್ವಲ್ಪ ಚಾಟ್ ಮಸಾಲ
ಕ್ಯಾರೆಟ್ 1 (ತುರಿದಿರಬೇಕು)
ಚಿಟಿಕೆಯಷ್ಟು ಉಪ್ಪು
ನಿಂಬೆ ರಸ ಅರ್ಧ ಚಮಚ
ತಯಾರಿಸುವ ವಿಧಾನ
* ಇಡೀ ಕ್ಯಾಪ್ಸಿಕಂ ಅನ್ನು ಕುದಿಯುವ ನೀರಿಗೆ ಹಾಕಿ 5 ನಿಮಿಷ ಬೇಯಿಸಿ, ನಂತರ ನೀರಿನಿಂದ ತೆಗೆದು ಒಂದು ಬಟ್ಟಲಿನಲ್ಲಿ ಹಾಕಿಡಿ.
* ಕ್ಯಾಪ್ಸಿಕಂ ಒಳಗೆ ತುಂಬಲು ಹೇಳಿರುವ ಸಾಮಾಗ್ರಿಗಳನ್ನು ಮಿಕ್ಸ್ ಮಾಡಿ ಇಡಿ.
* ಒಂದು ಬಟ್ಟಲಿಗೆ ಕಡಲೆ ಹಿಟ್ಟು ಹಾಕಿ ಅದಕ್ಕೆ ಖಾರದ ಪುಡಿ, ಅರಿಶಿಣ ಪುಡಿ, ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿ.
* ಈಗ ಡೀಪ್ ಫ್ರೈ ಗೆ ಸಾಕಾಗುವಷ್ಟು ಎಣ್ಣೆಯನ್ನು ಬಾಣಲೆಗೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಕ್ಯಾಪ್ಸಿಕಂ ಅನ್ನು ಕಡಲೆ ಹಿಟ್ಟಿನ ಮಿಶ್ರಣಕ್ಕೆ ಅದ್ದಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆಯಿರಿ.
* ಈಗ ಕರಿದ ಕ್ಯಾಪ್ಸಿಕಂ ಅನ್ನು 4 ಪೀಸ್ ಮಾಡಿ, ಆದರೆ ಸಂಪೂರ್ಣವಾಗಿ ಕಟ್ ಮಾಡಬೇಡಿ, ಕ್ಯಾಪ್ಸಿಕಂ ಒಳಗೆ ಮಸಾಲೆ ತುಂಬುವಂತೆ ಕಟ್ ಮಾಡಿ, ಅದರಲ್ಲಿ ಕ್ಯಾಪ್ಸಿಕಂ ಒಳಗೆ ತುಂಬಲು ಹೇಳಿದ ಸಾಮಾಗ್ರಿಗಳನ್ನು ಹಾಕಿದರೆ ರುಚಿ ರುಚಿಯಾದ ಕ್ಯಾಪ್ಸಿಕಂ ಬೋಂಡಾ ರೆಡಿ.



Click it and Unblock the Notifications
