Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರುಚಿಕರವಾಗಿರುವ ಬಟಾಣಿ ಸ್ಯಾಂಡ್ ವಿಚ್ ರೆಸಿಪಿ
ಬಟಾಣಿ ಸ್ಯಾಂಡ್ ವಿಚ್ ರೆಸಿಪಿ ಸವಿಯಲು ತುಂಬಾ ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಇದರ ಮತ್ತೊಂದು ವಿಶೇಷವೆಂದರೆ ಇದನ್ನು ಬೆಳಗಿನ ತಿಂಡಿಯಾಗಿಯೂ ತಯಾರಿಸಬಹುದು, ಸಾಯಾಂಕಾಲದ ತಿಂಡಿಯಾಗಿಯೂ ತಯಾರಿಸಬಹುದು. ಈ ಸ್ಯಾಂಡ್ ವಿಚ್ ಅನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

1. ಬೇಕಾಗುವ ಸಾಮಗ್ರಿಗಳು:
6-12 ಪೀಸ್ ಬ್ರೌನ್ ಬ್ರೆಡ್
ಬೇಯಿಸಿದ ಬಟಾಣಿ ಒಂದು ಕಪ್
ಚೀಸ್ ಅರ್ಧ ಕಪ್ (ತುರಿದಿರಬೇಕು)
ಬೆಣ್ಣೆ ಅರ್ಧ ಕಪ್
ಕರಿಮೆಣಸಿನ ಪುಡಿ 2 ಚಮಚ
ರುಚಿಗೆ ತಕ್ಕ ಉಪ್ಪು
2. ಸಾಮಾಗ್ರಿಗಳು:
ಮೊಸರು 2 ಕಪ್
ಈರುಳ್ಳಿ 2 (ಕತ್ತರಿಸಿದ್ದು)
ಟೊಮೆಟೊ 1 (ಕತ್ತರಿಸಿದ್ದು)
ಕತ್ತರಿಸಿದ ದುಂಡು ಮೆಣಸಿನ ಕಾಯಿ 1 (ಕತ್ತರಿಸಿದ್ದು)
ಟೊಮೆಟೊ ಸಾಸ್ 2 ಚಮಚ
ಹಸಿಮೆಣಸಿನಕಾಯಿ ಸಾಸ್ 1 ಚಮಚ
ಕೆಂಪು ಮೆಣಸಿನ ಪುಡಿ 1 ಚಮಚ
ಜೀರಿಗೆ 2 ಚಮಚ
ತಯಾರಿಸುವ ವಿಧಾನ:
1. ಒಂದು ಬಟ್ಟಲಿನಲ್ಲಿ ಮೊಸರು ಹಾಕಿ ಚೆನ್ನಾಗಿ ಕದಡಬೇಕು. ನಂತರ ಮೊಸರಿನಲ್ಲಿ ಎರಡನೇ ಸಾಮಾಗ್ರಿಗಳ ಲಿಸ್ಟ್ ನಲ್ಲಿ (2. ಸಾಮಾಗ್ರಿಗಳು) ಹೇಳಿರುವ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಬೇಯಿಸಿದ ಬಟಾಣಿಯನ್ನು ಸೌಟ್ ನಿಂದ ಚೆನ್ನಾಗಿ ಹಿಸುಕಿ ಸ್ವಲ್ಪ ಪೇಸ್ಟ್ ರೀತಿ ಮಾಡಿ ಈ ಮೊಸರಿನ ಮಿಶ್ರಣಕ್ಕೆ ಹಾಕಬೇಕು.ನಂತರ ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗಿರಬೇಕು.
2. ತವಾವನ್ನು ಬಿಸಿ ಮಾಡಿ ಬೆಣ್ಣೆ ಹಾಕಿ ಬ್ರೆಡ್ ನ ಎರಡೂ ಕಡೆ ಬಿಸಿ ಮಾಡಬೇಕು. ನಂತರ ತುರಿದ ಚೀಸ್ ಹಾಕಿ ಅದರ ಮೇಲೆ ಬಟಾಣಿ ಹಾಕಿರುವ ಮೊಸರಿನ ಮಿಶ್ರಣ ಹಾಕಿ ಅದರ ಮೇಲೆ ಕರಿಮೆಣಸಿನ ಪುಡಿ ಉದುರಿಸಿ ನಂತರ ಮತ್ತೊಂದು ಬ್ರೆಡ್ ತುಂಡನ್ನು ಅದರ ಮೇಲೆ ಇಟ್ಟು ಮತ್ತೊಮ್ಮೆ ರೋಸ್ಟ್ ಮಾಡಿದರೆ ಬಟಾಣಿ ಸ್ಯಾಂಡ್ ವಿಚ್ ರೆಡಿ.
ಈ ಸ್ಯಾಂಡ್ ವಿಚ್ ಅನ್ನು ಹಣ್ಣಿನ ಜ್ಯೂಸ್ ಜೊತೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಅಲ್ಲದೆ ಈ ಸ್ಯಾಂಡ್ ವಿಚ್ ತುಂಬಾ ಆರೋಗ್ಯಕರವಾದ ತಿಂಡಿ ಕೂಡ.



Click it and Unblock the Notifications
