Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬಿಸಿಬಿಸಿಯಾಗಿ ತಿನ್ನಲು ಆಲೂ ಪನ್ನೀರ್ ಟಿಕ್ಕಿ

ಬೇಕಾಗುವ ಸಾಮಾಗ್ರಿಗಳು:
* ಆಲೂಗಡ್ಡೆ 4
* ಜೋಳದ ಹಿಟ್ಟು ( ಕಾರ್ನ್ ಫ್ಲಾರ್) 1/2 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಕರಿಯಲು ಎಣ್ಣೆ
ಹೂರಣಕ್ಕೆ:
* ಒಂದು ಚಮಚ ಎಣ್ಣೆ
* ಅರ್ಧ ಕಪ್ ಪನ್ನೀರ್
* ಎರಡು ದೊಡ್ಡ ಚಮಚ ನೆನಸಿದ ಕಡಲೆ ಬೇಳೆ
* ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಒಂದೊಂದು ಚಮಚ
* ಹಸಿಮೆಣಸಿನ ಕಾಯಿ ಪೇಸ್ಟ್ ಒಂದು ಚಮಚ
ತಯಾರಿಸುವ ವಿಧಾನ:
1. ಬೇಯಿಸಿದ ಆಲೂಗಡ್ಡೆಯನ್ನು ಸಿಪ್ಪೆ ಸುಲಿದು ಅದನ್ನು ಚೆನ್ನಾಗಿ ಹಿಸುಕಿ ಅದಕ್ಕೆ ಜೋಳದ ಹಿಟ್ಟು ಮತ್ತು ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ( ನೀರು ಹಾಕದೇ) ಕಲೆಸಬೇಕು.
2. ನಂತರ ಬಾಣಲೆಯನ್ನು ಎಣ್ಣೆಗೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ , ಹಸಿಮೆಣಸಿನ ಕಾಯಿ ಪೇಸ್ಟ್ ಹಾಕಿ ಕಡಲೆ ಬೇಳೆ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು. ನಂತರ ಪನ್ನೀರ್ ಅನ್ನು ಪುಡಿ ಮಾಡಿ ಅದಕ್ಕೆ ಸೇರಿಸಿ ಎರಡು ನಿಮಿಷದ ಬಿಸಿ ಮಾಡಿ ನಂತರ ಉರಿಯಿಂದ ತೆಗೆಯಬೇಕು. ತಣಿದ ಮೇಲೆ ಉಪ್ಪು ಸೇರಿಸಿ ಮಿಶ್ರ ಮಾಡಬೇಕು. ಹೀಗೆ ಮಾಡಿದರೆ ಹೂರಣ ರೆಡಿ.
3. ಆಲೂಗಡ್ಡೆಯ ಹಿಟ್ಟನ್ನು ಒಂದು ಪೂರಿಗಾಗುವಷ್ಟು ಕೈಯಲ್ಲಿ ತೆಗೆದುಕೊಂಡು ತಟ್ಟಿ ಅದರೊಳಗೆ ಒಂದೂವರೆ ಚಮಚ ಹೂರಣವನ್ನು ಹಾಕಿ ಉಂಡೆ ಕಟ್ಟಿ ನಂತರ ತಟ್ಟಿ ಚಪ್ಪಟೆ ಮಾಡಬೇಕು.
4. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದರಲ್ಲಿ ಈ ಟಿಕ್ಕಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿದರೆ ಬಾಯಲ್ಲಿ ನೀರೂರಿಸುವ ರುಚಿಯ ಟಿಕ್ಕಿ ರೆಡಿ.
ಇದನ್ನು ಬಿಸಿಬಿಸಿಯಾಗಿ ಟೊಮೆಟೊ ಸಾಸ್ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.



Click it and Unblock the Notifications
