Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಕೆಸುವಿನಷ್ಟೇ ರುಚಿ ಎಲೆಕೋಸಿನ ಪತ್ರೊಡೆ

ಈ ಪದಾರ್ಥಗಳನ್ನು ಹೊಂಚಿಕೊಳ್ಳಿ
*ಸಣ್ಣಗೆ ತುರಿದ ಕ್ಯಾಬೇಜ್ ಕಾಲು ಕೆಜಿ
*ಒಂದು ಸ್ಪೂನ್ ಕೊತ್ತಂಬರಿ ಬೀಜ
*ಒಂದು ಸ್ಪೂನ್ ಮೆಂತ್ಯ
*ಉದ್ದಿನ ಬೇಳೆ ಒಂದು ಸ್ಪೂನ್
*ಐದು ಕೆಂಪು ಮೆಣಸು
*ಹುಣಸೆ ಹಣ್ಣು, ಒಂದು ನಿಂಬೆಯಷ್ಟು
*ನಾಲ್ಕು ಬೆರಳಿನಷ್ಟಗಲದ ಬೆಲ್ಲದ ತುಂಡು
*ಭರ್ತಿ ಒಂದು ಚಿಟಿಕೆ ಅರಿಶಿಣ
*ಒಂದು ಕಪ್ ಕಾಯಿ ತುರಿ
*ಅರ್ಧ ಕಪ್ ಅಕ್ಕಿಯ ಸೋಜಿ
*ಉಪ್ಪು : ನಿಮ್ಮ ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೆಣಸು, ಮೆಂತ್ಯ ಮತ್ತು ಉದ್ದಿನ ಬೇಳೆಯನ್ನು ಸ್ವಲ್ಪ ಹುರಿಯಬೇಕು. ತೆಂಗಿನ ಕಾಯಿ, ಕೊತ್ತಂಬರಿ ಬೀಜ, ಹುಣಸೇ, ಬೆಲ್ಲ , ಅರಿಶಿಣ ಮತ್ತು ಹುರಿದ ಈ ಮಿಶ್ರಣವನ್ನು ಅರೆಯಿರಿ. ಉಪ್ಪು ಸೇರಿಸಿ ಇನ್ನೊಂದು ಸುತ್ತು ಮಿಕ್ಸಿ ತಿರುಗಿಸಿ. ಈ ಮಿಶ್ರಣ, ಅಕ್ಕಿ ಸೋಜಿ ಮತ್ತು ಕತ್ತರಿಸಿಟ್ಟಿರುವ ಕ್ಯಾಬೇಜ್ ಜೊತೆ ಚೆನ್ನಾಗಿ ಕಲೆಸಿ. ಕಡಿಮೆ ನೀರು ಸೇರಿಸಬೇಕು. ನಂತರ ಮಿಶ್ರಣವನ್ನು ಲಡ್ಡುವಿಗಿಂತ ಸ್ವಲ್ಪ ದೊಡ್ಡ ಸೈಜಿನಲ್ಲಿ ಉಂಡೆ ಮಾಡಿ ಅರ್ಧ ಗಂಟೆ ಕಾಲ ಹಬೆಯಲ್ಲಿ ಬೇಯಿಸಿ.
ಒಂದು ಬಾಣಲೆಯಲ್ಲಿ ಎರಡು ಸ್ಪೂನ್ ಎಣ್ಣೆ, ಎರಡು ಚಿಟಿಕೆಯಷ್ಟು ಉದ್ದಿನ ಬೇಳೆ , ಸಾಸಿವೆ, ಕರಿಬೇವಿನಸೊಪ್ಪು ಮತ್ತು ಕೆಂಪು ಮೆಣಸನ್ನು ಹುರಿಯಿರಿ. ಬೆಂದ ಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಗ್ಗರಣೆ ಬಾಣಲೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಿಹಿಯಾಗಿರಬೇಕಿದ್ದರೆ ಬೆಲ್ಲ ಒಂದಿಷ್ಟು ಹೆಚ್ಚು, ಖಾರ ಬೇಕಿದ್ರೆ ಎರಡು ಮೆಣಸು ಜಾಸ್ತಿ .. ಹೀಗೆ ಪತ್ರೊಡೆ ಪರಿಣತರಾಗುತ್ತಿದ್ದಂತೆ ನಿಮ್ಮದೇ ಆದ ಕೈಗುಣದ ಛಾಪು ಒತ್ತಿರುತ್ತೀರಿ.
ಕ್ಯಾಬೇಜ್ ಬದಲಿಗೆ ಕೆಸುವಿನೆಲೆ ಅಥವಾ ತಗತ್ತೆ ಸೊಪ್ಪನ್ನೂ ಹೆಚ್ಚಿ ಪತ್ರೊಡೆ ಮಾಡಬಹುದು. ನಿಮ್ಮ ಅಡುಗೆ ಕ್ಯಾಲ್ಕ್ಯುಲೇಷನ್‌ಗಳು ಒಂದು ಹದಕ್ಕೆ ಬಂದ ಮೇಲೆ ನಿಮಗೇ ಅಂದಾಜಾಗುತ್ತದೆ. ಆಲ್ ದ ಬೆಸ್ಟ್.



Click it and Unblock the Notifications
