Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗೋಬಿಯಲ್ಲ ವೆಜಿಟೇಬಲ್ ಮಂಚೂರಿ

ಬೇಕಾಗುವ ಸಾಮಾಗ್ರಿಗಳು:
1. ಕತ್ತರಿಸಿದ ಎಲೆಕೋಸು 2
2. ಕತ್ತರಿಸಿದ ಕ್ಯಾರೆಟ್ 2
3. ಈರುಳ್ಳಿ 1
4. ಕತ್ತರಿಸಿದ ಹಸಿಮೆಣಸು 2
5. ಚೆನ್ನಾಗಿ ಜಜ್ಜಿದ ಬೆಳ್ಳುಳ್ಳಿ 3-4 ಎಸಳು
6. ಕಡಲೆ ಇಟ್ಟು 2 ಚಮಚ
7. ಸೋಯಾ ಸಾಸ್ 1 ಚಮಚ
8. ಸಕ್ಕರೆ 1 ಚಮಚ
9. ರುಚಿಗೆ ತಕ್ಕಷ್ಟು ಉಪ್ಪು
10. ಕರಿಮೆಣಸು 1 ಚಮಚ
11. ಅಜಿನೊಮೊಟೊ
12. ಕೊತ್ತಂಬರಿ ಸೊಪ್ಪು
13. ಎಣ್ಣೆ
ಮಾಡುವ ವಿಧಾನ:
1. ಎಲೆಕೋಸು ಚೆನ್ನಾಗಿ ತೊಳೆದು ನೀರು ಬಸಿದು ಅದಕ್ಕೆ ಕಡಲೆಹಿಟ್ಟು, ಉಪ್ಪು, ಹಸಿ ಮೆಣಸು ಹಾಕಿ ಚೆನ್ನಾಗಿ ಬೆರೆಸಿ ಅದನ್ನು ಮಂಚೂರಿಯ ಆಕಾರದಲ್ಲಿ ಉಂಡೆ ಕಟ್ಟಬೆಕು.
2. ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಈ ಉಂಡೆಯನ್ನು ಹಾಕಿ ಕಂದು ಬಣ್ಣ ಬರುವರೆಗೆ ಹುರಿಯಿರಿ, ನಂತರ ಅದನ್ನು ಎಣ್ಣೆಯಿಂದ ತೆಗೆದು ಇಡಿ.
3. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಅದಕ್ಕೆ ಬೆಳ್ಳುಳ್ಳಿ, ಹಸಿಮೆಣಸು, ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು. ನಂತರ ಉಪ್ಪು, ಕರಿಮೆಣಸು, ಸಕ್ಕರೆ, ಸೋಯಾ ಸಾಸ್, ಅಜಿನೊಮಿಟೊ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಕುದಿಸಿ ಗಟ್ಟಿ ಗ್ರೇವಿಯನ್ನು ತಯಾರಿಸಬೇಕು.
4. ನಂತರ 1 ಚಮಚ ಕಡಲೆ ಹಿಟ್ಟಿಗೆ ನೀರು ಹಾಕಿ ಅದನ್ನು ಮಂಚೂರಿ ಉಂಡೆ ಮೇಲೆ ಚಿಮುಕಿಸಬೇಕು.ನಂತರ ಅ ಉಂಡೆಯನ್ನು ಗ್ರೇವಿಯಲ್ಲಿ ಹಾಕಿ 5-6 ನಿಮಿಷ ಕಾಯಿಸಬೇಕು.
ನಂತರ ಅದಕ್ಕೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಅದನ್ನು ಟೊಮೆಟೊ ಕೆಚಪ್ ಅಥವಾ ಕೊತ್ತಂಬರಿ ಚಟ್ನಿಯೊಂದಿಗೆ ತಿನ್ನಲು ಮನೆಗೆ ಬಂದ ಅತಿಥಿಗಳಿಗೆ ಕೊಟ್ಟು ನೋಡಿ ಅವರು ಹೊಗಳದಿದ್ದರೆ ಮತ್ತೆ ಕೇಳಿ.



Click it and Unblock the Notifications
