Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಆಹಾ! ಉದ್ದಿನ ವಡೆ

ಇಡ್ಲಿ .. ವಡೆ.. ಸಾಂಬರ್ ರುಚಿಯಾಗಿ ಮಾಡೋ ಬಟ್ಲರ್, ನಾನೇ ಆಲ್ಸೋ ಸಿಂಗರ್, ಈ ನಾಡಿಗೆ ನಾನೇ ಸೂಪರ್ ಎಂದು ಹಾಸ್ಯನಟ ದಿನೇಶ್ ಪ್ರಚಂಡ ಪುಟಾಣಿಗಳು ಚಿತ್ರದಲ್ಲಿ ಹಾಡಿ ಕುಣಿದಿದ್ದರು. ವಡೆ ಒಂದು ಸ್ವಾದಿಷ್ಟ ಹಾಗೂ ಪೌಷ್ಟಿಕ ಆಹಾರ. ಸಾಮಾನ್ಯವಾಗಿ ಬ್ರಾಹ್ಮಣರ ಮನೆಯಲ್ಲಿ ತಿಥಿಯ (ಶ್ರಾದ್ಧ) ದಿನ ಹಿರಿಯರ ಪ್ರಸಾದ ಎಂದು ಮಾಡುತ್ತಿದ್ದ ಈ ತಿನಿಸು ಇಂದು ಇಡ್ಲಿಯ ಜತೆ ಒಳ್ಳೇ ಕಾಂಬಿನೇಷನ್. ಕರ್ನಾಟಕದ ಎಲ್ಲ ಹೋಟೆಲ್‌ಗಳಲ್ಲೂ ದೊರಕುವ ದಿನನಿತ್ಯದ ತಿಂಡಿ.
ವಡೆ - ಪಾಯಸ ಕೂಡ ಸೊಗಸಾದ ಕಾಂಬಿನೇಷನ್. ಗರಿಗರಿಯಾದ ವಡೆ ತಿನ್ನಲು ರುಚಿಯೋ ರುಚಿ. ವಡೆಯಾಂದಿಗೆ, ಕಾಯಿ ಚಟ್ನಿ, ಒಳ್ಳೆ ಈರುಳ್ಳಿ ಸಾಂಬರ್ ಇದ್ದರಂತೂ ಅದರ ಗಮ್ಮತ್ತೇ ಬೇರೆ. ಬಾಯಿಯಲ್ಲಿ ನೀರೂರಿತೆ? ತಡವೇಕೆ, ವಡೆ ಮಾಡಲು ತಯಾರಾಗಿ.
ವಡೆ ತಯಾರಿಕೆಗೆ ಬೇಕಾಗುವ ಸಾಮಾನು : ಅರ್ಧ ಕೆ.ಜಿ. ಉದ್ದಿನ ಬೇಳೆ, ಹದವಾಗಿ ಉಪ್ಪು, ಒಂದು ಪುಟ್ಟ ಹಿಡಿ ಮೆಣಸು, ಚಿಟಿಕೆ ಅಡಿಗೆ ಸೋಡ, ಕರೆಯಲು ಪುಟ್ಟ ಬಾಣಲೆ ತುಂಬ ಎಣ್ಣೆ.
ಮಾಡುವ ವಿಧಾನ : ಮೊದಲು ಉದ್ದಿನಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಮೂರ್ನಾಲ್ಕು ಗಂಟೆ ನೀರಿನಲ್ಲಿ ನೆನೆಸಿ. ಬಳಿಕ ನೀರನ್ನು ಬೇರೆ ಪಾತ್ರೆಗೆ ಬಸಿದು ಆ ನೀರನ್ನು ಹೊರಗೆ ಚೆಲ್ಲಿ. (ಮನೆಯ ಸಿಂಕ್ ಅಥವಾ ಬಚ್ಚಲಲ್ಲಿ ಉದ್ದಿನಬೇಳೆ ನೆನೆಹಾಕಿ ತೊಳೆದ ನೀರು ಚೆಲ್ಲ ಬೇಡಿ. ಉದ್ದಿನ ಬೇಳೆ ತೊಳೆದ ನೀರು ದುರ್ವಾಸನೆ ಬೀರುತ್ತದೆ).
ನೀರು ಬಸಿದ ನಂತರ ನೆನೆದ ಉದ್ದಿನ ಬೇಳೆಗೆ ಹದವಾಗಿ ಉಪ್ಪು ಬೆರೆಸಿ. ಆನಂತರ ಮಿಕ್ಸಿಯಲ್ಲಿ ಇಲ್ಲವೇ ಟಿಲ್‌ಟಿಂಗ್ ವೆಟ್ ಗ್ರೆೃಂಡರ್ ಅಥವಾ ಒರಳುಕಲ್ಲಿನಲ್ಲಿ ಚೆನ್ನಾಗಿ, ನುಣುಪಾಗಿ ರುಬ್ಬಿ. ಆಗ ಹದವಾದ ಹಿಟ್ಟು ಸಿದ್ಧವಾಗುತ್ತದೆ. ಅದಕ್ಕೆ ಕಾಳು ಮೆಣಸು , ಸೋಡಾ ಹಾಕಿ ಕಲಸಿಡಿ. (ಕುಟ್ಟಿ ಪುಡಿ ಮಾಡಿ ಹಾಕಿದರೂ ಅಡ್ಡಿ ಇಲ್ಲ).
ಒಲೆಯ ಮೇಲೆ ಬಾಣಲೆ ಇಟ್ಟು, ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ, ಹಿಟ್ಟನ್ನು ಗುಂಡಗೆ ಮಾಡಿ, ಮಧ್ಯ ರಂಧ್ರ ಕೊರೆದು, ಎಣ್ಣೆಯಲ್ಲಿ ಹಾಕಿ ಕರಿಯಿರಿ. ಜಾಲರಿಯ ಸೌಟಿನಲ್ಲಿ ಕರಿದ ವಡೆ ತೆಗೆದು, ಎಣ್ಣೆ ಜರಡಿ ಪಾತ್ರೆಯಲ್ಲಿ ಹಾಕಿ. ವಡೆ ಸ್ವಲ್ಪ ಆರಿದ ನಂತರ ಹಾಗೂ ಎಣ್ಣೆ ಇಳಿದ ನಂತರ, ಸಾಂಬರ್‌ನೊಂದಿಗೆ ಇಲ್ಲವೇ ಕಾಯಿಚಟ್ನಿಯಾಂದಿಗೆ ತಿನ್ನಲು ತಯಾರಾಗಿ.
ಎಚ್ಚರ! ವಡೆ ತಿನ್ನುವುದು ಮಜ. ನೆಪ್ಪಿಡಿ, ಅದು ವಾಯು!!



Click it and Unblock the Notifications
