Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಳೆಗಾಲದ ಸಂಜೆ ದೊಡ್ಡಪತ್ರೆ ಬೋಂಡಾ

* ನಿವೇದಿತಾ ಪ್ರಭಾಕರ್
ಬೇಕಾಗುವ ಪದಾರ್ಥಗಳು
ದೊಡ್ಡಪತ್ರೆ ಎಲೆಗಳು 15ರಿಂದ 20
ಈರುಳ್ಳಿ 2ರಿಂದ 3
ಕಡಲೆ ಹಿಟ್ಟು 1 ಬಟ್ಟಲು
ಮೈದಾ ಹಿಟ್ಟು ಕಾಲು ಬಟ್ಟಲು
ಅಕ್ಕಿ ಹಿಟ್ಟು ಕಾಲು ಬಟ್ಟಲು
ಮೊಸರು ಅರ್ಧ ಬಟ್ಟಲು
ಖಾರದ ಪುಡಿ 1 ಚಮಚ
ಕೊತ್ತಂಬರಿ ಮತ್ತು ಕರಿಬೇವು
ಜೀರಿಗೆ, ಇಂಗು, ಅರಿಷಿಣ, ತಿನ್ನುವ ಸೋಡಾ, ಉಪ್ಪು, ಕರಿಯಲು ಎಣ್ಣೆ
ಮಾಡುವ ವಿಧಾನ
ದೊಡ್ಡಪತ್ರೆ ಎಲೆಗಳನ್ನು ನೀರಿನಲ್ಲಿ ತೊಳೆದಿಟ್ಟುಕೊಳ್ಳಿ. ಈರುಳ್ಳಿಗಳನ್ನು ಉದ್ದುದ್ದಕ್ಕೆ ಹೆಚ್ಚಿ ಒಂದು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ (ಈರುಳ್ಳಿಯನ್ನು ನೀರಲ್ಲಿ ಕೆಲಕಾಲ ನೆನೆಸಿ ಹೆಚ್ಚಿದರೆ ಕಣ್ಣೀರು ಬರುವುದಿಲ್ಲವಂತೆ, ಪ್ರಯೋಗಿಸಿದೆ. ಆದರೂ ಸ್ವಲ್ಪ ಕಣ್ಣೀರು ಬಂದೇ ಬಿಟ್ಟಿತು. ಕಣ್ಣೀರು ಬರದಿರಲು ಮತ್ತೇನಾದರೂ ಉಪಾಯವಿದ್ದರೆ ತಿಳಿಸಿ.)
ನಂತರ ಕಡಲೆ, ಮೈದಾ ಮತ್ತು ಅಕ್ಕಿ ಹಿಟ್ಟುಗಳನ್ನು ಸೇರಿಸಿ ಅದಕ್ಕೆ ಚಿಟಿಕೆಯಷ್ಟು ಜೀರಿಗೆ, ಇಂಗು, ಅರಿಷಿಣ, ತಿನ್ನುವ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಅದಕ್ಕೆ ನೀರು ಹಾಕಿ ತೀರಾ ಅಳ್ಳಕಾಗದ ಹಾಗೆ ಕಲಿಸಿಟ್ಟುಕೊಳ್ಳಿ. ಈ ಮಿಶ್ರಣಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನೂ ಬೆರೆಸಿರಿ.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕುದಿಯಲು ಬಿಟ್ಟು, ಕುದಿಬಂದ ನಂತರ ದೊಡ್ಡಪತ್ರೆ ಎಲೆಗಳನ್ನು ಹಿಟ್ಟಿನ ಮಿಶ್ರಣದಲ್ಲಿ ಒಂದೊಂದಾಗಿ ಅದ್ದಿ ನಾಲ್ಕಾರಂತೆ ಕರಿಯಿರಿ. ಕಂದುಬಣ್ಣಕ್ಕೆ ಬಂದನಂತರ ಎಣ್ಣೆಯನ್ನು ಸೋಸಿ ಬಿಸಿಯಿರುವಂತೆಯೇ ಮಳೆಗಾಲದ ಸಂಜೆ ಹೊತ್ತಿನ ತಣ್ಣನೆ ವಾತಾವರಣದಲ್ಲಿ ಕಾಫಿ ಅಥವಾ ಚಹಾದೊಂದಿಗೆ ಸೇವಿಸಿ.



Click it and Unblock the Notifications
