Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಭಲೇ ಭಲೇ ರವೆ ಕೋಡುಬಳೆ!

* ರೇಖಾ ಆರ್. ಸೇಲಂ (ಒರೆಗಾನ್)
ಅಕ್ಕಿಹಿಟ್ಟಿನಿಂದ ಮಾಡಿದ ಕೋಡುಬಳೆ ನಿಮಗೆ ಗೊತ್ತಿರಬಹುದು, ನೀವೂ ಮಾಡಿ ತಿಂದಿರಬಹುದು. ಅಕ್ಕಿಹಿಟ್ಟಿನ ಬದಲು ರವೆಯನ್ನುಪಯೋಗಿಸಿ ಕೋಡುಬಳೆ ಮಾಡುವ ವಿಧಾನ ಇಲ್ಲಿದೆ, ನೀವೂ ಒಮ್ಮೆ ಮಾಡಿನೋಡಿ.
ಬೇಕಾಗುವ ಸಾಮಗ್ರಿಗಳು :
2 ಲೋಟ ಸಣ್ಣರವೆ (ಚಿರೋಟಿ ರವೆ)
1/2 ಹೋಳು ಹಸಿಕಾಯಿತುರಿ
ಜೀರಿಗೆ 2 ಚಮಚ
5-6 ಎಸಳು ಬೆಳ್ಳುಳ್ಳಿ (ಇದು ಐಚ್ಛಿಕ; ಹಾಕದಿದ್ರೂ ಪರವಾಗಿಲ್ಲ)
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ ಅಥವ ಕಾರದಪುಡಿ, ಉಪ್ಪು (ರುಚಿಗೆ ತಕ್ಕಷ್ಟು)
ಬೆಣ್ಣೆ 1/4 ಕಪ್(ನಿಮ್ಮ ಡಯಟ್‌ಗೆ ಅನುಗುಣವಾಗಿ)
ಚಿಟಿಕೆ ಇಂಗು
ಕರಿಯಲು ಎಣ್ಣೆ
ಮಾಡುವ ವಿಧಾನ :
ಮಾಡಬೇಕಾಗಿರುವುದು ಇಷ್ಟೇ : ಮೊದಲು ರವೆಯನ್ನು ಸ್ವಲ್ಪ ಕೆಂಪಗಾಗುವ ತನಕ ಹುರಿಯಿರಿ.
ಕಾಯಿತುರಿ, ಜೀರಿಗೆ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಇಂಗು ಎಲ್ಲವನ್ನೂ ನುಣ್ಣಗೆ ರುಬ್ಬಿ. (ನೀರು ಜಾಸ್ತಿ ಹಾಕಬೇಡಿ). ರುಬ್ಬಿದ ಮಿಶ್ರಣವನ್ನು ರವೆಗೆ ಹಾಕಿ. ಬೆಣ್ಣೆಯನ್ನು ಬಿಸಿಮಾಡಿ ಎಲ್ಲವನ್ನೂ ಸೇರಿಸಿ ಗಟ್ಟಿಯಾಗಿ ಕಲಸಿ. ಹಿಟ್ಟು 1 ಗಂಟೆ ನೆನೆದ ನಂತರ, ಕೋಡುಬಳೆ ಆಕಾರ ಮಾಡಿ ಎಣ್ಣೆಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ.
ಗರಿಗರಿಯಾಗಿ ರುಚಿರುಚಿಯಾಗಿ ನೀವು ಮಾಡಿದ ಈ ಕೋಡುಬಳೆಗಳನ್ನು ಚಹ ಕುಡಿಯುವಾಗ ಮೆಲ್ಲಲು ನಿಮ್ಮ ಯಜಮಾನ್ರೂ ಇಷ್ಟ ಪಡ್ತಾರೆ ನೋಡಿ. ಹಾಗೂ ನಿಮ್ಮ ಅಡುಗೆ ಕೌಶಲ್ಯದ ಬಗ್ಗೆ, ಕಡೇಪಕ್ಷ ಕೋಡುಬಳೆ ಎಕ್ಸ್‌ಪರ್ಟೈಸ್ ಬಗ್ಗೆ ಕೋಡು ಮೂಡಿಸಿಕೊಳ್ಳಿ!



Click it and Unblock the Notifications
