Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪೂರಿ ಹಿಟ್ಟಿನಿಂದ ರುಚಿಕರ ಆಲೂ ಕಚೋರಿ

ಸೂಚನೆ: ಪೂರಿಯ ಮಿಶ್ರಣವನ್ನು ಮಾಡಿಡಬೇಕು.
ಬೇಕಾಗುವ ಸಾಮಾಗ್ರಿಗಳು:
1. ಆಲೂಗೆಡ್ಡೆ 8-10 (ಬೇಯಿಸಿದ್ದು)
2. ಆರ್ರೋರೂಟ್ 100 ಗ್ರಾಂ
3. ತುರಿದ ತೆಂಗಿನ ಕಾಯಿ 1 ಕಪ್
4. ಹೆಸರು ಬೇಳೆ (ರಾತ್ರಿಯಲ್ಲಿ ನೆನೆ ಹಾಕಿರಬೇಕು)
5. ಹಸಿಮೆಣಸಿ ಕಾಯಿ 5-6
6. ಒಣಗಿದ ಮಾವಿನ ಹಣ್ಣಿನ ಪುಡಿ 1 ಚಮಚ
7. ಚಿಟಿಕೆಯಷ್ಟು ಇಂಗು
8. ಎಣ್ಣೆ 1 ಕಪ್
9. ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಹೆಸರು ಬೇಳೆ ಮತ್ತು ಆಲೂಗೆಡ್ಡೆಯನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು. ಈಗ ಆಲೂಗೆಡ್ಡೆಯನ್ನು ಸೌಟ್ ನಿಂದ ಹಿಸುಕಬೇಕು.
2. ಆರ್ರೋರೂಟ್ ಅನ್ನು 2 ಗ್ಲಾಸ್ ನೀರಿನಲ್ಲಿ ಕಲಿಸಿ ಅದರಲ್ಲಿ ಚೆನ್ನಾಗಿ ಹಿಸುಕಿದ ಆಲೂಗೆಡ್ಡೆ ಹಾಕಿ ಚಿಟಿಕೆಯಷ್ಟು ಇಂಗು ಹಾಕಿ ಚೆನ್ನಾಗಿ ಕಲೆಸಬೇಕು.
3. ಈಗ ತುರಿದ ತೆಂಗಿನ ಕಾಯಿಯನ್ನು ಬೇಯಿಸಿದ ಹೆಸರು ಬೇಳೆ ಜೊತೆ ಮಿಶ್ರ ಮಾಡಿ, ಹಸಿಮೆಣಸಿನ ಕಾಯಿ ಕತ್ತರಿಸಿ ಹಾಕಬೇಕು.
4. ಈಗ ಪೂರಿಯ ಮಿಶ್ರಣದಿಂದ ಚಿಕ್ಕ ಪೂರಿ ರೀತಿ ಮಾಡಿ ಅದಕ್ಕೆ ಆಲೂಗೆಡ್ಡೆ ಮಿಶ್ರಣವನ್ನು ಹಾಕಿ ಹರಡಬೇಕು, ನಂತರ ಒಂದು ಚಮಚದಷ್ಟು ಬೇಯಿಸಿದ ಬೇಳೆ ಮತ್ತು ತುರಿದ ತೆಂಗಿನಕಾಯಿ ಮಿಶ್ರಣವನ್ನು ಹಾಕಿ ಉಂಡೆ ಕಟ್ಟಬೇಕು.
5. ಬಾಣಲೆಯನ್ನು ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು. ಎಣ್ಣೆ ಕುದಿ ಬರಲಾರಂಭಿಸಿದಾಗ ಅದರಲ್ಲಿ ಈ ಉಂಡೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
ಈಗ ರುಚಿಕರವಾದ ಆಲೂ ಕಚೋರಿ ರೆಡಿ. ಇದು ಬಿಸಿಯಾಗಿರುವಾಗ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
