Latest Updates
-
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ
ಮಸಾಲೆ ತುಂಬಿದ ಮೊಟ್ಟೆ ತಿನ್ನಲು ಬಲುರುಚಿ

ಬೇಕಾಗುವ ಸಾಮಾಗ್ರಿಗಳು:
* ಬೇಯಿಸಿದ ಮೊಟ್ಟೆ 4
* 1 ಚಮಚ ತುಪ್ಪ/ಎಣ್ಣೆ
* ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 1/2 (ಚಿಕ್ಕ ಈರುಳ್ಳಿ ಆಗಿದ್ದರೆ 1)
* ಹಸಿಮೆಣಸು 1 (ಕತ್ತರಿಸಿದ್ದು)
* 1/2 ಚಮಚದಷ್ಟು ಶುಂಠಿ (ಚಿಕ್ಕದಾಗಿ ಕತ್ತರಿಸಿರಬೇಕು)
* 1 ಚಮಚ ಟೊಮೆಟೊ ರಸ
* 1 ಚಮಚ ಜೋಳದ ಪುಡಿ
* 1 ಮೊಟ್ಟೆ ( ಕದಡಿದ)
* 1 ನಿಂಬೆ ಹಣ್ಣು
* 1 ಬ್ರೆಡ್ ತುಂಡಿನ ಚೂರುಗಳು
* ಎಣ್ಣೆ
* ಉಪ್ಪು ರುಚಿಗೆ ತಕ್ಕ
* ಕತ್ತರಿಸಿದ ಕೊತ್ತಂಬರಿ ಸೊಪ್ಪು 1 ಚಮಚ
ತಯಾರಿಸುವ ವಿಧಾನ:
1. ಬಾಣಲೆಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಅದಕ್ಕೆ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
2. ಈಗ ಹಸಿಮೆಣಸು, ಉಪ್ಪು, ಕೊತ್ತಂಬರಿ, ಶುಂಠಿ, ಟೊಮೆಟೊ ರಸ ಮತ್ತು ನಿಂಬೆ ರಸ ಹಾಕಿ 3-4 ನಿಮಿಷ ಫ್ರೈ ಮಾಡಬೇಕು.
3. ಬೇಯಿಸಿದ ಮೊಟ್ಟೆಗಳನ್ನು 2 ಸಮಭಾಗವಾಗಿ ಕತ್ತರಿಸಬೇಕು.
4. ಅದರ ಹಳದಿಯನ್ನು ತೆಗೆದು, ಅದನ್ನು ಈ ಫ್ರೈ ಮಾಡುತ್ತಿರುವ ಮಿಶ್ರಣದ ಜೊತೆ ಸೇರಿಸಿ ಪುಡಿ ಪುಡಿ ಮಾಡಬೇಕು.
5. ಈಗ ಈ ಮಿಶ್ರಣವನ್ನು ಕತ್ತರಿಸದ ಮೊಟ್ಟೆ ತುಂಡುಗಳಲ್ಲಿ ತುಂಬಬೇಕು.
7. ಈಗ ಕದಡಿದ ಮೊಟ್ಟೆಗೆ ಸ್ವಲ್ಪ ಜೋಳದ ಪುಡಿ ಹಾಕಿ, ಚಿಟಿಕಿಯಷ್ಟು ಉಪ್ಪು ಹಾಕಿ ಚೆನ್ನಾಗಿ ತಿರುಗಿಸಬೇಕು.
8. ಬ್ರೆಡ್ ಚೂರುಗಳನ್ನು ಒಂದು ಪ್ಲೇಟ್ ನಲ್ಲಿ ಹಾಕಿಡಿ.
9. ಬಾಣಲೆಯಲ್ಲಿ ಎಣ್ಣೆ ಹಾಕಿ ಕುದಿಸಿ.
10. ಮಸಾಲೆ ತುಂಬಿದ ಮೊಟ್ಟೆ ತುಂಡುಗಳನ್ನು ಸೇರಿಸಿ, ಅದನ್ನು ಒಂದು ಮೊಟ್ಟೆಯಾಕಾರದಲ್ಲಿ ಹಿಡಿದು ಅದನ್ನು ಜೋಳದ ಪುಡಿ ಮತ್ತು ಮೊಟ್ಟೆ ಹಾಕಿರುವ ಮಿಶ್ರಣದಲ್ಲಿ ಮುಳುಗಿಸಬೇಕು.
11. ನಂತರ ಅದನ್ನು ಬ್ರೆಡ್ ಚೂರುಗಳ ಮೇಲೆ ಅದ್ದಬೇಕು.
12. ಈಗ ಮಸಾಲೆ ತುಂಬಿದ ಮೊಟ್ಟೆಯನ್ನು ಕುದಿಯುತ್ತಿರುವ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆಯಬೇಕು.
13. ಹೀಗೆ ಮಾಡಿದರೆ ಮಸಾಲ ಎಗ್ ರೆಡಿ. ಇದನ್ನು ತಟ್ಟೆಯಲ್ಲಿ ಇಟ್ಟು ಸೌತೆಕಾಯಿ ಮತ್ತು ಈರುಳ್ಳಿ ಕತ್ತರಿಸಿ, ಒಂದು ತುಂಡು ನಿಂಬೆ ಹಣ್ಣು ಇಟ್ಟು ತಿನ್ನಲು ಕೊಡಿ.



Click it and Unblock the Notifications
