Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗರಮಾಗರಂ ಅವರೆಕಾಳು ನಿಪ್ಪಟ್ಟು

ಆದರೇನಂತೆ, ಚಳಿಗಾಲ ಮುಗಿಯುವ ಮೊದಲೇ ಬೆಚ್ಚನೆಯ ಸಂಜೆಗಳಿಗಾಗಿ ಅವರೆಕಾಯಿಯಂತೂ ಸಜ್ಜಾಗಿ ನಿಂತಿದೆ. ಬೆಂಗಳೂರಿನಲ್ಲೂ ಜ.7ರಿಂದ 11 ದಿನಗಳ ಕಾಲ ಅವರೆಸಂತೆ ತನ್ನ ಗದ್ದಲವನ್ನು ಎಬ್ಬಿಸಲಿದೆ. ಅವರೆಕಾಳಿನಿಂದ ನಾನಾಬಗೆಯ ತಿಂಡಿಗಳನ್ನು ಮಾಡಬಹುದೆಂದು ಅವರೆಸಂತೆ ಲೇಖನದಲ್ಲಿ ಓದಿಯಾಗಿದೆ. ಇನ್ನೇಕೆ ತಡ ಅವರೆಕಾಳಿನ ನಿಪ್ಪಟ್ಟನ್ನು ತಯಾರಿಸಿಬಿಡೋಣ.
ಈ ಪದಾರ್ಥಗಳನ್ನು ರೆಡಿಯಾಗಿಟ್ಟುಕೊಳ್ಳಿ :
ಸಂತೆಯಿಂದ ತಂದ ಎಳೆ ಅವರೆಕಾಳು 1 ಲೋಟ
ಅಕ್ಕಿಹಿಟ್ಟು 1 ಪಾವು
ಚಿರೋಟಿ ರವೆ 1 ಚಮಚ
ಮೈದಾಹಿಟ್ಟು 1 ಚಮಚ
ಹುರಿದ ಎಳ್ಳು 1 ಚಮಚ
ಚಿಟಿಕೆ ಜೀರಿಗೆ
ಕಾರದ ಪುಡಿ
ಒಣಕೊಬ್ಬರಿ ಅರ್ಧ ಲೋಟ
ಮತ್ತು ಕರಿಯಲು ಖಾದ್ಯತೈಲ
ತಯಾರಿಸುವ ವಿಧಾನ :
ಎಳೆ ಅವರೆಕಾಳುಗಳನ್ನು ಒಂದು ಲೋಟದಷ್ಟು ನೀರಿನಲ್ಲಿ ಬೇಯಿಸಿಟ್ಟುಕೊಳ್ಳಿ. ನಂತರ ಅಕ್ಕಿಹಿಟ್ಟು ಮತ್ತು ಚಿರೋಟಿ ರವೆಯನ್ನು ಮಿಲಾಯಿಸಿ ಅದಕ್ಕೆ ಒಂದೇ ಒಂದು ಚಮಚದಷ್ಟು ಕಾದ ಎಣ್ಣೆ ಸುರಿದು ಹದವಾಗಿ ಕೈಯಾಡಿಸಿಕೊಳ್ಳಿ. ಅದಕ್ಕೆ ಬೇಯಿಸಿದ ಅವರೆಕಾಳು, ಮೈದಾಹಿಟ್ಟು, ಜೀರಿಗೆ, ಕಾರದ ಪುಡಿ, ಎಳ್ಳು ಮತ್ತು ಒಣಕೊಬ್ಬರಿ ಮತ್ತು ಉಪ್ಪನ್ನು ಬೆರೆಸಿ ಒಂದಿಷ್ಟು ನೀರಿನೊಂದಿಗೆ ಚೆನ್ನಾಗಿ ಕಲಿಸಿಟ್ಟುಕೊಳ್ಳಿ. ಇಷ್ಟು ಮಾಡಿಟ್ಟುಕೊಂಡರೆ ಕರಿಯಲು ಅವರೆಕಾಳು ನಿಪ್ಪಟ್ಟಿನ ಹಿಟ್ಟು ರೆಡಿಯಾದಂತೆ.
ಇಷ್ಟಾದನಂತರ ಒಂದು ಬಾಣಲೆಯಲ್ಲಿ ಕರಿಯಲು ಬೇಕಾಗುವಷ್ಟು ಖಾದ್ಯತೈಲವನ್ನು ಸುರುವಿ ಚೆನ್ನಾಗಿ ಕಾಯಿಸಿ. ಪ್ಲಾಸ್ಟಿಕ್ ಹಾಳೆಯ ಮೇಲೋ ಅಥವಾ ಬಾಳೆಎಲೆಯ ಮೇಲೋ ಕಲಿಸಿಟ್ಟುಕೊಂಡ ಹಿಟ್ಟನ್ನು ಕೈಯಿಂದ ತಟ್ಟಿ ಅದನ್ನು ಕಾದ ತೈಲದಲ್ಲಿ ತೇಲಿಬಿಡಿ. ತೂತುತೂತಿನ ಜಾಲರಿಯಿಂದ ಎಣ್ಣೆಯನ್ನು ತೇಲಿಬಿಟ್ಟ ಹಿಟ್ಟಿನ ಮೇಲೆ ಹರಡುತ್ತಿರಿ. ತಟ್ಟಿದ ಹಿಟ್ಟು ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಬಾಣಲೆಯಿಂದ ತೆಗೆದುಬಿಡಿ. ಅಷ್ಟೇ, ಗರಮಾಗರಂ ಅವರೆಕಾಳು ನಿಪ್ಪಟ್ಟು ರೆಡಿ.
ಬೇಕಿದ್ದರೆ ಬಿಸಿಬಿಸಿಯಿರುವಾಗಲೇ ಕಾಫಿ ಅಥವಾ ಚಹಾದೊಡನೆ ಸಂಜೆಯನ್ನು ಸಂತಸದಿಂದ ಕಳೆಯಿರಿ. ಇಲ್ಲದಿದ್ದರೆ, ಒಂದು ಡಬ್ಬದಲ್ಲಿ ಒಂದರ ಮೇಲೊಂದು ಪೇರಿಸಿಟ್ಟುಕೊಂಡರೆ ಹತ್ತುದಿನಗಳವರೆಗೆ ಗರಮಾಗರಂ ಅಲ್ಲದ ಕುರುಕುರು ನಿಪ್ಪಟ್ಟನ್ನು ಯಾವಾಗಬೇಕೆಂದಾಗ ಮೆಲ್ಲಬಹುದು.



Click it and Unblock the Notifications
