Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸರ್ವ ಪಿಂಡಿ ರೆಸಿಪಿ: ಅಕ್ಕಿ ಹಿಟ್ಟಿನಿಂದ ಮಾಡುವ ಈ ಬ್ರೇಕ್ಫಾಸ್ಟ್ ಸಕತ್ ಟೇಸ್ಟಿ
ಸರ್ವ ಪಿಂಡಿ ಟೇಸ್ಟ್ ಮಾಡಿದ್ದೀರಾ? ಇದು ತೆಲಂಗಾಣದ ಸಾಂಪ್ರದಾಯಕವಾದ ಅಡುಗೆಯಾಗಿದೆ, ಅಕ್ಕಿಹಿಟ್ಟು, ಜೊತೆ ಇತರ ಸಾಮಗ್ರಿ ಮಿಕ್ಸ್ ಮಾಡಿ ಮಾಡುವ ಇದು ಅಕ್ಕಿ ರೊಟ್ಟಿಗಿಂತಲೂ ತುಂಬಾನೇ ರುಚಿಯಾಗಿರುತ್ತದೆ.
ನೀವು ಇದನ್ನು ಟ್ರೈ ಮಾಡ ಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ:

ಬೇಕಾಗುವ ಸಾಮಗ್ರಿ
3 ಕಪ್ ಅಕ್ಕಿ ಹಿಟ್ಟು
1/4 ಕಪ್ ಕಡ್ಲೆಬೇಳೆ (ರಾತ್ರಿ ನೆನೆಹಾಕಬೇಕು)
1 ಈರುಳ್ಳಿ
2 ಹಸಿ ಮೆಣಸಿನಕಾಯಿ
ಸ್ವಲ್ಪ ತೆಂಗಿನ ತುರಿ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1/4 ಕಪ್ ಕೊತ್ತಂಬರಿ ಸೊಪ್ಪು
ಸ್ವಲ್ಪ ಕರಿಬೇವಿನ ಎಲೆ
2 ಚಮಚ ರೋಸ್ಟ್ ಮಾಡಿದ ಎಳ್ಳು
ಮಾಡುವ ವಿಧಾನ
* ಮೊದಲಿಗೆ ಕಡ್ಲೆ ಬೇಳೆ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ
ಪೇಸ್ಟ್, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿ ನೇವಿನ ಎಲೆ, ಹುರಿದ
ಎಳ್ಳು, ತೆಂಗಿನ ತುರಿ, ಹುರಿದ ನೆಲಗಡಲೆ. ಜೀರಿಗೆ ಹಾಕಿ ಮಿಕ್ಸಿಯಲ್ಲಿ
ರುಬ್ಬಿ.
* ನಂತರ ಅದನ್ನು ಅಕ್ಕಿಹಿಟ್ಟಿನ ಜೊತೆ ಹಾಕಿ, ಸ್ವಲ್ಪ ಖಾರದ ಪುಡಿ ಹಾಕಿ ಮಿಕ್ಸ್
ಮಾಡಿ, ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ (ಹಿಟ್ಟು ರೊಟ್ಟಿಯ
ಹಿಟ್ಟಿನಂತಿರಬೇಕು). ನಂತರ ಹಿಟ್ಟನ್ನು ಬಟ್ಟೆಯಲ್ಲಿ ಸುತ್ತಿ 10-ನಿಮಿಷ
ಇಡಿ.
* ನಂತರ ಅದರಿಂದ ನಾಲ್ಕು ಸಮಭಾಗಗಳನ್ನಾಗಿ ಆಡಿ, ಈಗ ಬಾಣಲೆಗೆ ಎಣ್ಣೆ ಹಚ್ಚಿ,
ಅದರಲ್ಲಿ ಹಿಟ್ಟನ್ನು ಹಾಕಿ ರೊಟ್ಟಿ ತಟ್ಟುವಂತೆ ತಟ್ಟಿ. ಅದರ ಮಧ್ಯ-ಮಧ್ಯ
ಬೆರಳಿನಲ್ಲಿ ಚುಚ್ಚಿ ರಂಧ್ರ ಮಾಡಿ.

* ನಂತರ ಆ ರಂಧ್ರಕ್ಕೆ ಎಣ್ಣೆ ಹಾಕಿ ಉರಿಯಲ್ಲಿ ಬೇಯಿಸಿ. ಒಂದು ಬದಿ ಬೆಂದ
ಮೇಲೆ ಮತ್ತೊಂದು ಬದಿ ಮಗುಚಿ ಹಾಕಿ.
* ರೆಡಿಯಾದ ಸರ್ವ ಪಿಂಡಿಯನ್ನು ಖಾರ ಚಟ್ನಿ ಜೊತೆ ಸರ್ವ್ ಮಾಡಿ.
ಈ ಖಾರ ಪಿಂಡಿ ತುಂಬಾನೇ ರುಚಿಯಾಗಿರುತ್ತೆ ಒಂದು ತಿಂದರೆ ಸಾಕು ಹೊಟ್ಟೆ ತುಂಬುವುದು. ಟ್ರೈ ಮಾಡಿ ಮಾಡಿ.
ರೆಸಿಪಿ: ಬದನೆ-ಅವರೆಕಾಳು ಕಾಂಬಿನೇಷನ್ ಸಾರು ಟೇಸ್ಟ್ ಮಾಡಿದ್ದೀರಾ?



Click it and Unblock the Notifications
