Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರೆಸಿಪಿ: ಬದನೆ-ಅವರೆಕಾಳು ಕಾಂಬಿನೇಷನ್ ಸಾರು ಟೇಸ್ಟ್ ಮಾಡಿದ್ದೀರಾ?
ಈಗ ಅವರೆ ಸಮಯ, ಚಳಿಗಾಲದಲ್ಲಿ ಅವರೆ ತುಂಬಾನೇ ಮಾರುಕಟ್ಟೆಗೆ ಬರುತ್ತದೆ. ಅವರೆ ಬಂದರೆ ಏನೆಲ್ಲಾ ಮಾಡಬಹುದು ಎಂಬುವುದಕ್ಕೆ ಅವರೆ ಮೇಳಕ್ಕೆ ಹೋದರೆ ಸಾಕು, ಅವರೆ ಕಾಳು ಬಳಸಿ ನೂರಾರು ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುತ್ತಾರೆ.
ಅವರೆ ಸಾರು ಯಾವ ನಾನ್‌ವೆಜ್ ರುಚಿಗೆ ಕಡಿಮೆಯಿಲ್ಲ, ಆದ್ದರಿಂದ ಅವರೆಕಾಳಿಗೆ ತುಂಬಾನೇ ಡಿಮ್ಯಾಂಡ್. ಅವರೆಕಾಳಿನ ಸಾರು ಮಾಡಿದರೆ ಒಂದು ತುತ್ತು ಅನ್ನು ಹೆಚ್ಚೇ ಹೋಗುತ್ತದೆ. ನೀವು ಅವರೆ ಕಾಳನ್ನು ಬದನೆಕಾಯಿ ಕಾಂಬಿನೇಷನ್ ಜೊತೆ ಟ್ರೈ ಮಾಡಿದ್ದೀರಾ, ಇಲ್ಲಾ ಅಂದರೆ ಅಷ್ಟೊಂದು ಸೂಪರ್ ಆಗಿರುತ್ತದೆ, ಇಲ್ಲಿದೆ ನೋಡಿ ಅವರೆ-ಬದನೆಕಾಯಿ ಸಾರಿನ ರೆಸಿಪಿ.

ಬೇಕಾಗುವ ಸಾಮಗ್ರಿ
1 ಕಪ್ ಹೊಲದವರೆ
2 ಸಾಧಾರಣ ಗಾತ್ರದ ಬದನೆಕಾಯಿ
1 ಕಪ್ ಈರುಳ್ಳಿ
1 ಕಪ್ ಟೊಮೆಟೊ
1 ಚಮಚ ಖಾರದ ಪುಡಿ
ರುಚಿಗೆ ತಕ್ಕ ಉಪ್ಪು
2 ಚಮಚ ಎಣ್ಣೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ
1/2 ಚಮಚ ಸಾಸಿವೆ
1/2 ಚಮಚ ಉದ್ದಿನ ಬೇಳೆ
ಸ್ವಲ್ಪ ಕರಿಬೇವು
ಮಸಾಲೆಗೆ
ಅರ್ಧ ತೆಂಗಿನ ಕಾಯಿ (ತುರಿದಿದ್ದು)
1-2 ಹಸಿಮೆಣಸು
ಸ್ವಲ್ಪ ಕೊತ್ತಂಬರಿ ಸೊಪ್ಪು
1 ಚಕ್ಕೆ
ಸ್ವಲ್ಪ ಶುಂಠಿ
ಸ್ವಲ್ಪ ಬೆಳ್ಳುಳ್ಳಿ
ಯಮ್ಮೀ ಸ್ನ್ಯಾಕ್ಸ್ ರೆಸಿಪಿ: ಮೃದುವಾದ ಬಾಳೆಹಣ್ಣಿನ ಬೋಂಡಾ, ಆಹಾ ಸವಿದಷ್ಟೂ ಸಾಲದು
ಮಾಡುವ ವಿಧಾನ
* ಅವರೆ ಬೇಯಲು ಒಂದು ವಿಶಲ್ ಸಾಕು, ಬೇಕಿದ್ದರೆ ಎರಡು ವಿಶಲ್
ಹೊಡಿಸಬಹುದು.
* ಬದನೆಕಾಯಿಯನ್ನು ಸ್ವಲ್ಪ ದಪ್ಪ ತುಂಡುಗಳಾಗಿ ಕತ್ತರಿಸಿ
* ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿಮಾಡಿ, ನಂತರ ಎಣ್ನೆ ಹಾಕಿ ಅದಕ್ಕೆ ಸಾಸಿವೆ
ಹಾಕಿ ಅದು ಚಟ್‌ಪಟ್ ಶಬ್ದ ಮಾಡುವಾಗ ಉದ್ದಿನ ಬೇಳೆ ಹಾಕಿ ಕತ್ತರಿಸಿದ ಈರುಳ್ಳಿ
ಹಾಕಿ
* ಈರುಳ್ಳಿ ಕಂದು ಬಣ್ಣಕ್ಕೆ ಬರುವಷ್ಟು ಹೊತ್ತು ಫ್ರೈ ಮಾಡಿ
* ನಂತರ ಕತ್ತರಿಸಿದ ಟೊಮೆಟೊ ಹಾಕಿ, ಅರಿಶಿಣ ಪುಡಿ, ಉಪ್ಪು ಸೇರಿಸಿ, ನಂತರ
ಟೊಮೆಟೊವನ್ನು ಸೌಟ್‌ನಿಂದಲೇ ಪೇಸ್ಟ್ ರೀತಿ ಮಾಡಿ.
* ನಂತರ ಬದನೆಕಾಯಿಯನ್ನು ನೀರಿನಿಂದ ತೆಗೆದು ಹಾಕಿ. ನಂತರ ಮಸಾಲೆ ಸೇರಿಸಿ,
ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ.
* ನಂತರ ಬೇಯಿಸಿದ ಅವರೆಕಾಳು ಸೇರಿಸಿ. ಅವರೆಕಾಳು ಬೇಯಿಸುವಾಗ ಸ್ವಲ್ಪ ಉಪ್ಪು
ಸೇರಿಸಬೇಕು.
* ನಂತರ ಈ ಗ್ರೇವಿಯನ್ನು 6-7 ನಿಮಿಷ ಕುದಿಸಿ, ಉಪ್ಪು-ಖಾರ ಸರಿಯಾಗಿದೆಯೇ ಎಂದು
ನೋಡಿ ಉರಿಯಿಂದ ಇಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.



Click it and Unblock the Notifications
