Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಫಿಶ್ ಫ್ರೈಡ್ ರೈಸ್ - ವೀಕೆಂಡ್ ಸ್ಪೆಷಲ್

ಅಲ್ಲದೆ ರಂಜಾನ್ ಉಪವಾಸದ ಸಮಯದಲ್ಲಿ ಉಪವಾಸ ಮುರಿದ ನಂತರ ತಿನ್ನಲು ರುಚಿಕರವಾದ ಪೌಷ್ಠಿಕ ಆಹಾರಗಳನ್ನು ತಯಾರಿಸಲಾಗುವುದು. ಈ ವೀಕೆಂಡ್ ಸ್ಪೆಷಲ್ ಮತ್ತು ರಂಜಾನ್ ತಿಂಗಳಿನ ವಿಶೇಷ ಅಡುಗೆಯಾಗಿ ಈ ಫಿಶ್ ಫ್ರೈಡ್ ರೈಸ್ ಟ್ರೈ ಮಾಡಬಹುದು. ಇದನ್ನು ತಯಾರಿಸಲು ಸುಲಭವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* ಅಂಜಲ್ ಮೀನು ಅಥವಾ ಸಾಲಾಮೀನ್ ಮೀನು 1 ಕೆಜಿ
* ನಿಂಬೆ ರಸ 4-5 ಚಮಚ
* ಕೆಂಪು ಮೆಣಸಿನ ಪುಡಿ 2 ಚಮಚ
* ಶುಂಠಿ ಪೇಸ್ಟ್ 1 ಚಮಚ
* ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಚಕ್ಕೆ 2-3
* ಏಲಕ್ಕಿ 1
* ಈರುಳ್ಳಿ 1
* ಕ್ಯಾರೆಟ್ ಅರ್ಧ ಕಪ್
* ಬಟಾಣಿ ಅರ್ಧ ಕಪ್
* ಗೋಡಂಬಿ ಸ್ವಲ್ಪ
* ಅರಿಶಿಣ ಪುಡಿ 1/4 ಚಮಚ
* ಬಾಸುಮತಿ ಅಕ್ಕಿ ಅರ್ಧ ಕೆಜಿ
* ಎಣ್ಣೆ
* ದುಂಡು ಮೆಣಸಿನಕಾಯಿ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಮೀನನ್ನು ಶುದ್ಧ ಮಾಡಿ(ಮುಳ್ಳು ಇರಬಾರದು) , ತುಂಬಾ ಚಿಕ್ಕದಾಗಿ ಕತ್ತರಿಸಿ ಅದರಲ್ಲಿ ಮೆಣಸಿನ ಪುಡಿ, ಅರಿಶಿಣ ಮತ್ತು ನಿಂಬೆ ರಸ, ರುಚಿಗೆ ತಕ್ಕ ಉಪ್ಪು ಮಿಶ್ರ ಮಾಡಿ ಒಂದು ಗಂಟೆ ಕಾಲ ಇಡಬೇಕು.
2. ಬಾಸುಮತಿಯಿಂದ ಅನ್ನ ಮಾಡಿ ಅದನ್ನು ಒಂದು ಪಾತ್ರೆಯಲ್ಲಿ ಹಾಕಿಡಬೇಕು.
3. ಈಗ ಪಾತ್ರೆಯನ್ನು ಉರಿಯಲ್ಲಿ ಇಟ್ಟು 5-6 ಚಮಚ ಎಣ್ಣೆ ಹಾಕಿ , ಎಣ್ಣೆ ಬಿಸಿಯಾಗುವಾಗ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಕಿ 2-3 ನಿಮಿಷ ಹುರಿದು ನಂತರ ಮೀನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ನಂತರ ಆ ಮೀನನ್ನು ಒಂದು ಪಾತ್ರೆಯಲ್ಲಿ ಹಾಕಿಡಿ.
4. ನಂತರ ಬೇರೊಂದು ಪಾತ್ರೆ ತೆಗೆದು ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ನಂತರ ಚಕ್ಕೆ, ಏಲಕ್ಕಿ ಹಾಕಿ ಒಂದು 20-30 ಸೆಕೆಂಡ್ ಬಿಸಿ ಮಾಡಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಕ್ಯಾರೆಟ್, ಬಟಾಣಿ, ಗೋಡಂಬಿ, ದುಂಡು ಮೆಣಸಿನ ಕಾಯಿ, ಅರ್ಧ 1/4 ಚಮಚ ಕೆಂಪು ಮೆಣಸಿನ ಪುಡಿ , ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು.
5. ನಂತರ ಅನ್ನವನ್ನು ಹಾಕಿ ಮಿಶ್ರ ಮಾಡಿ 2-3 ನಿಮಿಷ ಸೌಟ್ ನಿಂದ ಆಡಿಸುತ್ತಾ ಇರಬೇಕು. ನಂತರ ಇದಕ್ಕೆ ಪುಡಿ ಮಾಡಿದ ಮೀನು ಹಾಕಿ ಮಿಶ್ರಮಾಡಿದರೆ ರುಚಿಕರವಾದ ಫಿಶ್ ಫ್ರೈಡ್ ರೈಸ್ ರೆಡಿ.



Click it and Unblock the Notifications
