Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸ್ಪೆಷಲ್ ಮಸಾಲೆ ಹಾಕಿ ಮಾಡಿದ ರಾಜ್ಮಾ ಗ್ರೇವಿ
ಎಷ್ಟಾದರೂ ಮನೆಯಲ್ಲಿ ಮಾಡಿದ ಮಸಾಲೆಯಷ್ಟು ರುಚಿ, ರೆಡ್ ಮೇಡ್ ಮಸಾಲೆಗೆ ಬರಲು ಸಾಧ್ಯವಿಲ್ಲ. ದಿನಾಲೂ ರೆಡಿ ಮೇಡ್ ಮಸಾಲೆ ಬಳಸಿ ಅಡುಗೆ ಮಾಡುತ್ತಿದ್ದರೆ, ಫಾರ್ ಎ ಚೇಂಜ್ ನೀವೇ ಮಸಾಲೆ ಪುಡಿ ತಯಾರಿಸಿ, ಈ ರಾಜ್ಮಾ ಗ್ರೇವಿ ತಯಾರಿಸಿ ನೋಡಿ, ನೀವು ಮಾಮೂಲಿ ಮಾಡುವ ಅಡುಗೆಗಿಂತ ಟೇಸ್ಟಿಯಾಗಿದೆ ಎನ್ನದಿದ್ದರೆ ಮತ್ತೆ ಕೇಳಿ.
ಬನ್ನಿ ಈ ಗ್ರೇವಿ ಮಾಡುವುದು ಹೇಗೆ ಎಂದು ನೋಡೋಣವೇ?

ಬೇಕಾಗುವ ಸಾಮಾಗ್ರಿಗಳು
ರಾಜ್ಮಾ 1 ಕಪ್
ಈರುಳ್ಳಿ 2
ಶುಂಠಿ 1 ಚಿಕ್ಕ ಪೀಸ್
ಬೆಳ್ಳುಳ್ಳಿ 4-5ಎಸಳು
ಟೊಮೆಟೊ 2
ಜೀರಿಗೆ 1 ಚಮಚ
ರುಚಿಗೆ ತಕ್ಕ ಉಪ್ಪು
ನೀರು 2 ಕಪ್
ಎಣ್ಣೆ 2 ಚಮಚ
ಮಸಾಲ ಮಾಡಲು
1 ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಏಲಕ್ಕಿ 1
ಒಣ ಮೆಣಸು 4-5
ಕೊತ್ತಂಬರಿ ಬೀಜ 1 ಚಮಚ
ಲವಂಗ 3
ಕರಿ ಮೆಣಸು 4-5
ನಟ್ ಮಗ್ 1
ಸ್ವಲ್ಪ ಜಾಯಿಕಾಯಿ
ಈ ಎಲ್ಲಾ ಮಸಾಲೆಯನ್ನು 3-4 ನಿಮಿಷ ರೋಸ್ಟ್ ಮಾಡಿ ಪುಡಿ ಮಾಡಿ ಇಡಿ.
ತಯಾರಿಸುವ ವಿಧಾನ:
* ರಾಜ್ಮಾವನ್ನು 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ.
* ನಂತರ ತೊಳೆದು ಕುಕ್ಕರ್ ನಲ್ಲಿ ಹಾಕಿ 2 ಕಪ್ ನೀರು ಸೇರಿಸಿ, ಅರ್ಧ ಚಮಚ ಪುಡಿ ಉಪ್ಪು ಸೇರಿಸಿ 3 ವಿಶಲ್ ಬರುವವರೆಗೆ ಬೇಯಿಸಿ.
* ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ, ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
* ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ, ಈಗ ಜೀರಿಗೆ, ಮಾಡಿದ ಗರಂ ಗರಂ ಮಸಾಲ, ರುಚಿಗೆ ತಕ್ಕ ಉಪ್ಪು ಹಾಕಿ 2 ನಿಮಿಷ ಸೌಟ್ ನಿಂದ ಉರಿಯಿರಿ.
* ಈಗ ಬೇಯಿಸಿದ ರಾಜ್ಮಾ ಹಾಕಿ ಮಿಕ್ಸ್ ಮಾಡಿ 10 ನಿಮಿಷ ಬೇಯಿಸಿ, ಕೊನೆಗೆ ಉಪ್ಪು ಸರಿಯಾಗಿದೆಯೇ ಎಂದು ನೋಡಿ ಉರಿಯಿಂದ ಇಳಿಸಿದರೆ ರಾಜ್ಮಾ ಗ್ರೇವಿ ರೆಡಿ.



Click it and Unblock the Notifications
