Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಮ್ಮ ಕರ್ನಾಟಕ ಶೈಲಿಯ-ಮಿಕ್ಸ್ ವೆಜ್ ಕರಿ...
ಮಿಕ್ಸ್ ವೆಜಿಟೆಬಲ್ ಕರಿಯು ಜನಪ್ರಿಯ ಖಾದ್ಯ. ಉತ್ತರ ಭಾರತದಲ್ಲಿ "ವೆಜ್ ಕಾಡಾಯ್", "ವೆಜ್ ಕೊಲ್ಹಾಪುರಿ" ಎಂದು ಇತರ ಅನೇಕ ರೀತಿಗಳಲ್ಲಿ ತಯಾರಿಸಲ್ಪಡುತ್ತದೆ. ಹಾಗೆಯೇ ಕರ್ನಾಟಕದಲ್ಲಿ ಇದನ್ನು ಕಡಿಮೆ ಮಸಾಲೆಗಳನ್ನು ಉಪಯೋಗಿಸಿ ರುಚಿಯಾಗಿ ಮಾಡುವ ಪರಿಪಾಟ ಇದೆ. ಈ ಮಿಕ್ಸ ವೆಜ್ ಕರಿ ಅಥವಾ ವೆಜ್ ಕೂರ್ಮ ಚಪಾತಿ ಅಥವಾ ಪರೋಟ ಜೊತೆಯಲ್ಲಿ ತಿನ್ನಲು ಬಹಳ ರುಚಿ. ಇದನ್ನು ಕೆಲವರು ಜೀರ ರೈಸ್ ಅಥವಾ ಘೀ ರೈಸ್ ಜೊತೆಯೂ ಇಷ್ಟಪಡುತ್ತಾರೆ.
ಈ ಅಡಿಗೆಯಲ್ಲಿ ಬಹಳ ರೀತಿಯ ತರಕಾರಿಗಳನ್ನು ಬಳಸುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು.ಇದರಲ್ಲಿ ನಾವು ಉತ್ತರ ಭಾರತೀಯರಂತೆ ಹೆಚ್ಚು ಮಸಾಲೆ ಹಾಗೂ ಗೋಡಂಬಿಯ ಪೇಸ್ಟ್ ಬಳಸುವುದಿಲ್ಲ.
ಹಾಗಾಗಿ ಇದು ಹೊಟ್ಟೆಗೂ ಹಿತವಾಗಿರುತ್ತದೆ. ಇಲ್ಲಿ ನಾವು ಕುಕ್ಕರ್ ಅಥವಾ ಪ್ರೆಶರ್ ಪ್ಯಾನ್ ಬಳಸಿ ಈ ವೆಜ್ ಕರಿಯನ್ನು ಸುಲಭವಾಗಿ ಹಾಗೂ ವೇಗವಾಗಿ ಮಾಡುವುದನ್ನು ನೋಡೋಣ. ಬೆಳಗ್ಗೆ ತಿಂಡಿಗೆ ತರಾವರಿ ತರಕಾರಿ ಗೊಜ್ಜು

ಬೇಕಾಗುವ ಸಾಮಗ್ರಿಗಳು:
*ಎರಡು ದೊಡ್ಡ ಬಟ್ಟಲು ತರಕಾರಿಗಳು: ಇದರಲ್ಲಿ ನಮಗೆ ಇಷ್ಟವಾಗುವ ಹಾಗೂ ಹಿಡಿಸುವ ಐದಾರು ರೀತಿಯ ತರಕಾರಿಗಳನ್ನು ಬಳಸಬಹುದು. ಉದಾಹರಣೆಗೆ ಕ್ಯಾರೆಟ್ / ಗಜ್ಜರಿ, ಬೀನ್ಸ್ / ಹುರಳಿ ಕಾಯಿ, ಆಲೂಗಡ್ಡೆ, ಹೂ ಕೋಸು, ಬಟಾಣಿ, ಗಡ್ಡೆ ಕೋಸು, ಇತ್ಯಾದಿ.
*ಸಾಸಿವೆ, ಜೀರಿಗೆ, ಕರಿಬೇವು - ಒಗ್ಗರಣೆಗೆ
*ಎಣ್ಣೆ - 2 ಚಮಚ
*ಈರುಳ್ಳಿ - 2 (ಸಣ್ಣಗೆ ಹಚ್ಚಿಕೊಂಡದ್ದು)
*ಟೊಮೆಟೊ - 2 (ಸಣ್ಣಗೆ ಹಚ್ಚಿಕೊಂಡದ್ದು)
*ಹಸಿ ಮೆಣಸಿನಕಾಯಿ - 6 (ನಿಮ್ಮ ಖಾರಕ್ಕೆ ತಕ್ಕಂತೆ)
*ಶುಂಟಿ - ಅರ್ಧ ಇಂಚು
*ಬೆಳ್ಳುಳ್ಳಿ - 8 ಎಸಳು
*ಧನಿಯಾ ಪುಡಿ - 2 ಸಣ್ಣ (ಟೀ) ಚಮಚ
*ತೆಂಗಿನ ತುರಿ - 2 ಚಮಚ
*ಚಕ್ಕೆ - 2 ಸಣ್ಣ ತುಂಡುಗಳು
*ಲವಂಗ - 3
*ಕೊತ್ತಂಬರಿ ಸೊಪ್ಪು - ಸಣ್ಣ ಹಿಡಿ
*ಪುದೀನಾ ಸೊಪ್ಪು (ಬೇಕಿದ್ದರೆ ಸೇರಿಸಿ) - ಸಣ್ಣ ಹಿಡಿ
*ಉಪ್ಪು ರುಚಿಗೆ ತಕ್ಕಷ್ಟು ಈರುಳ್ಳಿ ಹಾಕದ ವೆಜಿಟೆಬಲ್ ಕರಿ
ಮಾಡುವ ವಿಧಾನ:
1)ತರಕಾರಿಗಳನ್ನೆಲಾ ಚೆನ್ನಾಗಿ ತೊಳೆದು ಸಣ್ಣಗೆ ಹಚ್ಚಿಕೊಳ್ಳಿ. ಈಗ ನಾವು ಕುಕ್ಕರ್ ಅಥವಾ ಪ್ರೆಶರ್ ಪ್ಯಾನ್ ಬಳಸಿ ಮಾಡುತ್ತಿರುವುದರಿಂದ ತರಕಾರಿಗಳನ್ನು ಮೊದಲೇ ಬೇಯಿಸಿಕೊಳ್ಳುವ ಅವಶ್ಯಕತೆ ಇಲ್ಲ.
2)ಸಣ್ಣ ಮಿಕ್ಸಿ ಜಾರಿಗೆ ಹಸಿ ಮೆಣಸಿನಕಾಯಿ, ಶುಂಟಿ, ಬೆಳ್ಳುಳ್ಳಿ, ಧನಿಯಾ ಪುಡಿ, ಚಕ್ಕೆ, ಲವಂಗ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಪುದೀನಾ ಸೊಪ್ಪು ಕೂಡ ಇದರಲ್ಲಿ ಸೇರಿಸಿ ರುಬ್ಬಬಹುದು.
3)ಈಗ ಚಿಕ್ಕದೊಂದು ಕುಕ್ಕರ್ ಅಥವಾ ಪ್ರೆಶರ್ ಪ್ಯಾನ್ ತೆಗೆದುಕೊಂಡು ಸ್ಟೋವ್ ಮೇಲೆ ಮಾಧ್ಯಮ ಉರಿಯಲ್ಲಿಡಿ. ಇದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಬಿಸಿ ಎಣ್ಣೆಯಲ್ಲಿ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ನಂತರ ಸಣ್ಣಗೆ ಹಚ್ಚಿಕೊಂಡ ಈರುಳ್ಳಿ ಹಾಕಿ ಕಲೆಸಿ. ಈರುಳ್ಳಿ ಸ್ವಲ್ಪ ಕೆಂಪಗೆ ಆದ ನಂತರ ಟೊಮೆಟೊ ಹಾಕಿ ಬೇಯಿಸಿ.
4)ಈರುಳ್ಳಿ ಟೊಮೆಟೊ ಎರಡು ಬೇಯುತ್ತಿರುವಾಗ ಮೊದಲೇ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಸ್ವಲ್ಪ ನೀರು ಹಾಗೂ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲೆಸಿ. ಈ ಮಿಶ್ರಮವನ್ನು ಕುದಿಯಲು ಬಿಡಿ. ಮಸಾಲೆ ಈರುಳ್ಳಿ ಹಾಗೂ ಟೊಮೆಟೊ ಜೊತೆ ಕಲೆತು ಬೇಯಲು ತೊಡಗುತ್ತದೆ. ನೀರು ಹಾಕುವಾಗ ಹೆಚ್ಚು ಹಾಕದೆ ಸ್ವಲ್ಪ ಮಾತ್ರ ಗೊಜ್ಜು ಬರುವಂತೆ ಹಾಕಿ. ಕುಕ್ಕರ್ ಮುಚ್ಚಿದ ನಂತರ ತರಕಾರಿಗಳು ಕೂಡ ನೀರು ಬಿಟ್ಟುಕೊಂಡು ನೀರು ಹೆಚ್ಚಾದರೆ ರುಚಿ ಸಿಗುವುದಿಲ್ಲ.
5)ಸ್ವಲ್ಪ ಎಣ್ಣೆ ಬಿಟ್ಟುಕೊಂಡ ನಂತರ ಎಲ್ಲಾ ತರಕಾರಿಗಳನ್ನು ಸೇರಿಸಿ ಚೆನ್ನಾಗಿ ಕಲೆಸಿ. ರುಚಿಗೆ ಬೇಕಾದರೆ ಉಪ್ಪು ಹಾಗು ಅಚ್ಚ ಖಾರದ ಪುಡಿ ಸೇರಿಸಿ ಕಲೆಸಿ. ಕುಕ್ಕರ್ ಮುಚ್ಚಳ ಮುಚ್ಚಿಡಿ. ಸುಮಾರು 2 ಕೂಗು ಕೂಗಿದ ನಂತರ ವೆಜ್ ಕರಿ ತಯಾರಾಗಿರುತ್ತದೆ. ಘಮ್ಮೆನ್ನುವ ಸಾಂಬರ್- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
ಈ ವೆಜ್ ಕರಿಯನ್ನು ಕುಕ್ಕರ್ ಉಪಯೋಗವಿಲ್ಲದೇ ಮಾಡಲು, ತರಕಾರಿಗಳನ್ನು ಮೊದಲೇ ಬೇಯಿಸಿಕೊಳ್ಳಿ. ಸ್ಟೆಪ್ ಎರಡರಿಂದ ನಾಲ್ಕರ ವರೆಗೂ ಮೇಲೆ ಹೇಳಿದಂತೆ ಮಾಡಿ, ನಂತರ ಬೇಯಿಸಿದ ತರಕಾರಿ ಹಾಕಿ ಸ್ವಲ್ಪ ಕುದಿಸಿದರೆ ಸಾಕು.



Click it and Unblock the Notifications


