Latest Updates
-
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ
ಘಮ್ಮೆನ್ನುವ ಸಾಂಬರ್- ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!
ಭಾರತೀಯರು ಭೋಜನಪ್ರಿಯರು ಎಂಬುದು ನಮ್ಮಲ್ಲಿ ತಯಾರಿಸುವ ವಿವಿಧ ಬಗೆಯ ಭಕ್ಷ್ಯ ಭೋಜನಗಳು ಖಾತ್ರಿಪಡಿಸಿವೆ. ವಿದೇಶಿ ನೆಲದಲ್ಲೂ ನಮ್ಮ ಭಕ್ಷ್ಯ ಭೋಜನಗಳು ಇದೀಗ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದು ಅಲ್ಲೂ ಭಾರತದ ಖಾದ್ಯ ಪರಿಮಳ ಪಸರಿಸಿದೆ. ಅದರಲ್ಲೂ ಉತ್ತರ ಭಾರತೀಯರಿಗೆ ಪರೋಟ ಮತ್ತು ಆಲೂ ಸಬ್ಜಿ (ಆಲೂಗಡ್ಡೆ ಪಲ್ಯ) ಹೇಗೆ ಪ್ರಿಯವೋ ಅಂತೆಯೇ ದಕ್ಷಿಣ ಭಾರತೀಯರಿಗೆ ಸಾಂಬಾರ್ ಜೀವನಾಡಿಯಿದ್ದಂತೆ. ಊಟಕ್ಕೆ ಉಪ್ಪಿನಕಾಯಿ ಎಂಬಂತೆ ಪ್ರಮುಖ ಸಮಾರಂಭಗಳಲ್ಲಿ ಅವರು ಹೆಚ್ಚು ಬಳಸುವುದು ಸಾಂಬಾರ್ ಆಗಿದೆ. ಅತಿಥಿಗಳು ಮನೆಗೆ ಬಂದಾಗ ದಿಢೀರ್ ತಯಾರಾಗುವ ಮಹಿಳೆಯರ ಸ್ನೇಹಿತ ಸಾಂಬಾರ್ ಎಂಬುದನ್ನು ನಾವಿಲ್ಲಿ ಪುನರುಚ್ಛರಿಸಲೇಬೇಕು.
ನಿತ್ಯವೂ ಸಿದ್ಧಪಡಿಸಿದ ತಿಳಿಸಾರು ಇತರ ಪದರ್ಥಗಳು ಬೇಜಾರು ಹಿಡಿಸಿದವು ಎಂದಾದಲ್ಲಿ ಸಾಂಬಾರ್ ಮತ್ತು ಹಪ್ಪಳವನ್ನು ಕರಿದರೆ ಆಯಿತು. ಒಂದಿಷ್ಟು ಹೆಚ್ಚಾಗಿಯೇ ಮಧ್ಯಾಹ್ನದೂಟ ಹೊಟ್ಟೆಯನ್ನು ಸೇರುತ್ತದೆ. ಅಂತೂ ಊಟದ ಸ್ವಾದ ಇರುವುದೇ ಸಾಂಬಾರ್‌ನ ರುಚಿಯಲ್ಲಿ ಎಂಬುದಂತೂ ಸತ್ಯ. ಬನ್ನಿ ಇಂದು ಬೋಲ್ಡ್ ಸ್ಕೈ ನಿಮಗಾಗಿ ಸರಳವಾಗಿ ತಯಾರಿಸಬಹುದಾದ ವಿಭಿನ್ನ ಶೈಲಿಯ ಸಾಂಬರ್ ರೆಸಿಪಿಯನ್ನು ಪರಿಚಯಿಸುತ್ತಿದ್ದು, ಅವು ಯಾವುದು ಎಂಬುದನ್ನು ಸ್ಲೈಡ್ ಶೋ ಮೂಲಕ ಓದಿ...

ಬದನೆಕಾಯಿ ಸಾಂಬರ್
ಬದನೆಕಾಯಿ ಎಂದಾಕ್ಷಣ ಹೆಚ್ಚಿನವರು ಮುಖ ಸಿಂಡರಿಸುವುದೇ ಹೆಚ್ಚು, ಆದರೆ ಇದರಲ್ಲಿರುವ ಸಮೃದ್ಧವಾದ ಕಬ್ಬಿಣಾಂಶ, ನಾರಿನಂಶ ಮತ್ತು ಕರಗುವಂತಹ ಕಾರ್ಬೊಹೈಡ್ರೆಟ್‌ಗಳು, ದೇಹದ ಕ್ಯಾಲೋರಿಯನ್ನು ದಹಿಸುವುದರ ಜೊತೆಗೆ, ಮಧುಮೇಹ ಮುಂತಾದ ರೋಗಗಳನ್ನು ಹೊಡೆದೊಡಿಸುವಂತಹ ಅಂಶಗಳನ್ನು ಅಗಾಧ ಪ್ರಮಾಣದಲ್ಲಿ ಒಳಗೊಂಡಿದೆ. ಅಷ್ಟೇ ಅಲ್ಲದೆ ಹೃದಯಕ್ಕೆ ಆರೋಗ್ಯವನ್ನು ಒದಗಿಸುವುದರ ಜೊತೆಗೆ, ನಿಮಗೆ ಇತರ ಕಾಯಿಲೆಗಳು ಕೂಡ ಬರದಂತೆ ತಡೆಯುತ್ತವೆ. (ಸೂಚನೆ- ದೇಹದಲ್ಲಿ ಗಾಯ, ಕಜ್ಜಿ ಮುಂತಾದ ಸಮಸ್ಯೆಗಳಿದ್ದರೆ ಬದನೆಕಾಯಿ ಸೇವಿಸದಿರುವುದು ಉತ್ತಮ) ಬನ್ನಿ ಬದನೆಕಾಯಿ ಸಾಂಬರ್ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಗುಳ್ಳ-ಬದನೆಕಾಯಿ ಸಾಂಬಾರ್

ಅದ್ವಿತೀಯ ಸ್ವಾದ- ಉಡುಪಿ ಸಾಂಬರ್
ಉಡುಪಿ ಶೈಲಿಯ ಸಾ೦ಬಾರ್ ಅನ್ನು ತಯಾರಿಸುವ ವಿಧಾನವೇನೋ ಸಾಮಾನ್ಯವಾಗಿ ಎಲ್ಲಾ ತೆರನಾದ ಸಾ೦ಬಾರ್ ಅನ್ನು ತಯಾರಿಸುವ೦ತೆಯೇ ಇದ್ದರೂ ಕೂಡ, ಇದರ ಅದ್ವಿತೀಯ ಸ್ವಾದವು ಇದನ್ನು ಇತರ ಸ್ಥಳಗಳ ಸಾ೦ಬಾರ್ ಗಳಿಗಿ೦ತ ವಿಭಿನ್ನವನ್ನಾಗಿಸುತ್ತದೆ. ಉಡುಪಿ ಸಾ೦ಬಾರ್‌ನ ತಯಾರಿಕೆಯಲ್ಲಿ ಬಳಸಲಾಗುವ ಒ೦ದು ವಿಶೇಷವಾದ ಮಸಾಲೆಯು ಈ ಸಾ೦ಬಾರ್‌ನ ಸ್ವಾದವನ್ನು ಇತರ ಎಲ್ಲಾ ಸಾ೦ಬಾರ್‌ಗಳ ತಯಾರಿಕಾ ವಿಧಾನ ಹಾಗೂ ಸ್ವಾದಗಳಿಗಿ೦ತಲೂ ಪ್ರತ್ಯೇಕವಾಗಿಸುತ್ತದೆ. ಆಹಾ ಉಡುಪಿ ಶೈಲಿಯ ರುಚಿಕರ ಸಾಂಬಾರ್ ರೆಸಿಪಿ!

ಮೂಲಂಗಿ ಸಾಂಬಾರ್
ಮೂಲಂಗಿಯಲ್ಲಿ ಅಡಗಿರುವ ಪೊಟ್ಯಾಶಿಯಂ, ಫೋಲಿಕ್ ಆಮ್ಲ, ವಿಟಮಿನ್ ಬಿ6 ಸಹಿತ ವಿವಿಧ ವಿಟಮಿನ್‌ಗಳು, ಕ್ಯಾಲ್ಸಿಯಂ ಮೊದಲಾದ ಪೋಷಕಾಂಶಗಳು ಇದನ್ನೊಂದು ಆರೋಗ್ಯಕರ ಆಹಾರವಾಗಿಸಿದೆ. ಅದರಲ್ಲೂ ಮಸಾಲೆ ದೋಸೆ. ಇಡ್ಲಿ ಮತ್ತಿತರ ತಿಂಡಿಗಳೊಂದಿಗೆ ಮೂಲಂಗಿ ಸಾಂಬಾರ್ ಸೇರಿಸಿ ತಿಂದರೆ ಆ ರುಚಿಗೆ ಮನಸೋಲದವರೇ ಇಲ್ಲ...! ಬನ್ನಿ ಮೂಲಂಗಿ ಸಾಂಬರ್ ತಯಾರಿಸುವ ವಿಧಾನ ನೋಡೋಣ... ಸರಳ ತಯಾರಿಕೆಯ ಹರಿಕಾರ ಮೂಲಂಗಿ ಸಾಂಬಾರ್

ನುಗ್ಗೆಕಾಯಿ ಸಾಂಬಾರ್

ಕೊಂಕಣಿ ಶೈಲಿಯಲ್ಲಿ ಮಾಡುವ ಸಾಂಬಾರ್
ಅರೆ, ಕೊಂಕಣಿ ಶೈಲಿಯ ಸಾಂಬರ್ ಎಂದಾಕ್ಷಣ, ಕೊಂಕಣಿಯವರು ಮಾತ್ರ ಮಾಡುವ ಸಾಂಬರ್ ಎಂದು ತಿಳಿದುಕೊಳ್ಳಬೇಡಿ. ಎಲ್ಲಾ ಬಗೆಯ ಸಾಂಬರ್‌ಕ್ಕಿಂತಲೂ ಇದರ ರುಚಿ ಸ್ವಲ್ಪ ಭಿನ್ನವಾಗಿರುವುದೇ ಇದರ ವೈಶಿಷ್ಟ್ಯ ಬನ್ನಿ ಕೊಂಕಣಿ ಶೈಲಿಯ ಸಾಂಬರ್ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಇತರ ಸಾಂಬಾರ್ ಗಿಂತ ಭಿನ್ನ, ಕೊಂಕಣಿ ಸಾಂಬಾರ್



Click it and Unblock the Notifications











