Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಲಬಾರ್ ಪಾಲಾಕ್ ದಾಲ್ ರೆಸಿಪಿ
ಈ ಮಲಬಾರ್ ಪಾಲಾಕ್ ತೊಗರಿಬೇಳೆ ಸಾರನ್ನು ಮಾಡುವುದು ಬಲು ಸುಲಭ. ಸಂಜೆ ಕೆಲಸ ಮುಗಿಸಿ ಸ್ವಲ್ಪ ತಡವಾಗಿ, ದಣಿದು ಬಂದ ದಿನ ಅಡುಗೆಗೆ ಈ ರೀತಿಯ ಸರಳ ಅಡುಗೆಗಳು ಬೆಸ್ಟ್. ಇವು ಆರೋಗ್ಯಕರ, ಬಾಯಿ ರುಚಿಕರ ಮತ್ತು ನಿಮ್ಮ ಶ್ರಮವನ್ನೂ ಕಡಿಮೆ ಮಾಡುವುದು.
ಬನ್ನಿ ಈ ಮಲಬಾರ್ ಸಾರು ಮಾಡುವುದು ಹೇಗೆ ಎಂದು ನೋಡೋಣವೇ?

ಬೇಕಾಗುವ ಸಾಮಾಗ್ರಿಗಳು
ತೊಗರಿ ಬೇಳೆ 1 ಕಪ್
ಪಾಲಾಕ್ 2 ಕಟ್ಟು
ಈರುಳ್ಳಿ1
ಹಸಿ ಮೆಣಸಿನಕಾಯಿ 3
ಶುಂಠಿ
ಅರಿಶಿಣ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಹುಣಸೆ ಹಣ್ಣಿನ ರಸ 1 ಚಮಚ
ನೀರು 2 ಕಪ್
ಒಗ್ಗರಣೆಗೆ
ಸಾಸಿವೆ ಅರ್ಧ ಚಮಚ
ಜೀರಿಗೆ 1 ಚಮಚ
ಉದ್ದಿನ ಬೇಳೆ 1 ಚಮಚ
ಬೆಳ್ಳುಳ್ಳಿ ಎಸಳು 3-4 ಎಸಳು
ಒಣ ಮೆಣಸು 2
ಸ್ವಲ್ಪ ಕರಿ ಬೇವಿನ ಎಲೆ
ಎಣ್ಣೆ 2 ಚಮಚ
ತಯಾರಿಸುವ ವಿಧಾನ:
* ಪಾಲಾಕ್ ಸೊಪ್ಪನ್ನು ಶುದ್ಧ ಮಾಡಿ, ನಂತರ ತೊಗರಿ ಬೇಳೆಯನ್ನು ತೊಳೆದು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ, ಈರುಳ್ಳಿ, ಹುಣಸೆ ಹಣ್ಣಿನ ರಸ, ಹಸಿ ಮೆಣಸು, ಸ್ವಲ್ಪ ಜಜ್ಜಿದ ಶುಂಠಿ, ಅರಿಶಿಣ ಪುಡಿ ಹಾಕಿ 2 ಕಪ್ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ.
* ನಂತರ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ, ನಂತರ ಉದ್ದಿನ ಬೇಳೆ, ಒಣ ಮೆಣಸು, ಕರಿ ಬೇವಿನ ಎಲೆ ಒಂದು ನಿಮಿಷ ಫ್ರೈ ಮಾಡಿ, ಬೇಯಿಸಿದ ಪಾಲಾಕ್ ತೊಗರಿ ಬೇಳೆಯನ್ನು ಹಾಕಿ, 5 ನಿಮಿಷ ಕುದಿಸಿ, ನಂತರ ಉಪ್ಪು ಸರಿಯಾಗಿದೆಯೇ ನೋಡಿ, ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಸೇರಿಸಿ ಮತ್ತೆ 5 ನಿಮಿಷ ಕುದಿಸಿ, ಉರಿಯಿಂದ ಇಳಿಸಿದರೆ ಮಲಬಾರ್ ಪಾಲಾಕ್ ದಾಲ್ ಕರಿ ರೆಡಿ.



Click it and Unblock the Notifications
