Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್

ನೋಡಿ, ಮಕ್ಕಳಿಗೆ ಚಿಕ್ಕವರಾಗಿದ್ದಾಗಲೇ ಹೊಟೇಲಿನ ರುಚಿ ಹಚ್ಚಿಸಿದರೆ ಮನೇಲಿ ಮಾಡಿದ್ದು ರುಚಿಸೋದೆ ಇಲ್ಲ. ಹೊಟೇಲಿಂದು ರುಚಿ ಅಷ್ಟಕ್ಕಷ್ಟೇ ಇದ್ದರೂ ಅದರ ರುಚಿಯ ಮುಂದೆ ಮನೆರುಚಿ ಡಲ್ಲು ಹೊಡೆದಿರುತ್ತದೆ. ಕೊನೆಗೆ, ಪುಟಾಣಿಗೆ ಹೊಟೇಲಿಂದಲೇ ಸಾಂಬಾರು ತಂದು ತಿನ್ನಿಸಿದರೆನ್ನಿ. ನಂತರ, ಹೊಟೇಲಲ್ಲಿ ಮಾಡೋದಕ್ಕಿಂದ ಸಖತ್ತಾಗಿರೋ ಸಾಂಬಾರು ಮಾಡೋದು ಹೇಗೆಂದು ನಾನೇ ಅವರಿಗೆ ಹೇಳಿಕೊಟ್ಟೆ.
ನೀವು ಕೂಡ ಎಷ್ಟೋ ಬಾರಿ ಅನೇಕ ಬಗೆಯ ಸಾಂಬಾರುಗಳನ್ನು ಮಾಡಿರುತ್ತೀರಿ. ಆದರೆ, ಅದೆಷ್ಟೇ ಲಾಗ ಹೊಡೆದರೂ ಹೊಟೇಲು ಸಾಂಬಾರು ರುಚಿ ಬಂದಿರುವುದಿಲ್ಲ. ಯಾಕೆ? ಜಾಸ್ತಿ ತಲೆಕೆಡಿಸಿಕೊಳ್ಳದೆ, ಇಲ್ಲಿದೆ ನೋಡಿ ಇಡ್ಲಿ ಸಾಂಬಾರು ತಯಾರಿಸುವ ಸೂಕ್ತ ವಿಧಾನ.
* ಭಾರತಿ ಎಚ್.ಎಸ್., ಬೆಂಗಳೂರು
ಬೇಕಾಗುವ ಸಾಮಾನುಗಳು
ತೊಗರಿಬೇಳೆ 1 ಬಟ್ಟಲು
ಹೆಚ್ಚಿದ ತರಕಾರಿ ಒಂದು ಬಟ್ಟಲು [ಕ್ಯಾರೆಟ್, ಹುರುಳಿಕಾಯಿ, ಆಲೂಗೆದ್ದೆ, ಟೊಮೆಟೋ]
ಬೆಲ್ಲ ಅರ್ಧ ಚಮಚ
ಹೆಚ್ಚಿದ ಈರುಳ್ಳಿ 2
ಕರಿಬೇವು, ಕೊತಂಬರಿ ಸೊಪ್ಪು
ಎಣ್ಣೆ 2 ಚಮಚ
ಇಂಗು ಚಿಟಿಕಿ
ರುಚಿಗೆ ತಕ್ಕಷ್ಟು ಉಪ್ಪು.
[ಕಡಲೆಬೇಳೆ 1 ಚಮಚ, ಉದ್ದಿನಬೇಳೆ 1 ಚಮಚ, ಬ್ಯಾಡಗಿ ಮೆಣಸಿನಕಾಯಿ 8, ದನಿಯ 2 ಚಮಚ, ಕೊಬ್ಬರಿ ತುರಿ ಒಂದು ಚಮಚ, ಚಕ್ಕೆ 2, ಲವಂಗ 4 , ಚಿಟಿಕಿ ಇಂಗು, ಇದೆಲ್ಲವನ್ನು ಹುರಿದು ಪುಡಿ ಮಾಡಿತ್ತು ಕೊಳ್ಳಿ.]
ಮಾಡುವ ವಿಧಾನ
ಕುಕ್ಕರ್ ನಲ್ಲಿ ತೊಗರಿಬೇಳೆ ಮತ್ತು ತರಕಾರಿಯನ್ನು ಬೇಯಿಸಿಟ್ಟುಕೊಳ್ಳಿ. ಬೇಯಿಸುವ ಮುನ್ನ ಬೇಳೆಯನ್ನು ಹತ್ತು ನಿಮಿಷ ನೀರಲ್ಲಿ ನೆನೆಸಿಡಿ.
ನಂತರ ಸಣ್ಣ ಉರಿಯ ಮೇಲೆ ಒಂದು ಬಾಣಲೆ ಇಟ್ಟು ಎರಡು ಚಮಚ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಬ್ಯಾಡಗಿ ಮೆಣಸಿನಕಾಯಿ ಹಾಕಿ ಚಟಪಟ ಅನ್ನಿಸಿಬಿಡಿ. ವಗ್ಗರಣೆ ಹೊತ್ತುವ ಮುನ್ನ ಇಂಗು, ಸ್ವಲ್ಪ ದೊಡ್ಡದಾಗಿ ಹೆಚ್ಚಿಟ್ಟುಕೊಂಡು ಈರುಳ್ಳಿ ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಕೈಯಾಡಿಸಿ.
ಇದಕ್ಕೆ ಬೇಯಿಸಿಟ್ಟುಕೊಂಡ ಬೇಳೆ ಮತ್ತು ತರಕಾರಿಯನ್ನು ಸುರುವಿ, ಅದರ ಹಿಂದೆಯೇ ಪುಡಿ ಮಾಡಿಟ್ಟುಕೊಂಡ ಪದಾರ್ಥವನ್ನು ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುದಿಯಲು ಬಿಡಿ. ಕುದಿ ಬರುತ್ತಿದ್ದಂತೆ ಹುಣಸೆಹುಳಿ, ಕರಣೆ ಬೆಲ್ಲ ಮುಳುಗಿಸಿ ಮತ್ತೆ ಕುದಿಸಿರಿ. ದಟ್ಸಾಲ್. ನೆನಪಿಡಿ, ಇದು ಇಡ್ಲಿಗಾಗಿಯೇ ಮಾಡುವ ವಿಶೇಷ ಸಾಂಬಾರ್.



Click it and Unblock the Notifications
