For Quick Alerts
ALLOW NOTIFICATIONS  
For Daily Alerts

ಸ್ವಾದಿಷ್ಟ ರಾಗಿ ಹಲ್ವಾ ರೆಸಿಪಿ

|

ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವ ರಾಗಿ ಇಲ್ಲಿನ ಪ್ರಮುಖ ಆಹಾರ ಮೂಲವಾಗಿದೆ. ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಂಡ ರಾಗಿ ಮಕ್ಕಳಿಂದ ದೊಡ್ಡವರ ವರೆಗೂ ಉಪಯೋಗಿಸಬಹುದಾದ ಪೋಷಕಾಂಶ ಭರಿತ ಜನಪ್ರಿಯ ಆಹಾರ.

ಆರೋಗ್ಯಕ್ಕೆ ಸಂಜೀವಿನಿ ಎಂದೇ ಭಾವಿಸುವ ರಾಗಿಯಿಂದ ಮುದ್ದೆ, ರೊಟ್ಟಿ, ಗಂಜಿ ಮಾಡುವುದು ಸಾಮಾನ್ಯ, ಆದರೆ ನಾವಿಲ್ಲಿ ಸಿಹಿಖಾದ್ಯವನ್ನು ನಿಮಗೆ ಪರಿಚಯಿಸುತ್ತದ್ದೇವೆ. ಹೌದು ರಾಗಿಯಿಂದ ರುಚಿಕರ ಹಲ್ವಾ ಅನ್ನು ಸಹ ತಯಾರಿಸಬಹುದು. ಈ ರಾಗಿ ಹಲ್ವಾವನ್ನು ರಾಗಿ ಹಿಟ್ಟು ಮತ್ತು ಹಾಲನ್ನು ಬಳಸಿ ತಯಾರಿಸಲಾಗುತ್ತದೆ ಆದ್ದರಿಂದ , ಇದು ರುಚಿಕರವಾದದ್ದು ಮಾತ್ರವಲ್ಲದೆ ಅತ್ಯಂತ ಆರೋಗ್ಯಕರವೂ ಆಗಿದೆ. ನೀವು ಈ ಸಿಹಿಖಾದ್ಯವನ್ನು ಪ್ರಯತ್ನಿಸಿ ನೋಡಿ.

Ragi Halwa Recipe
ರಾಗಿ ಹಲ್ವಾ ರೆಸಿಪಿ/ Ragi Halwa Recipe
ರಾಗಿ ಹಲ್ವಾ ರೆಸಿಪಿ/ Ragi Halwa Recipe
Prep Time
10 Mins
Cook Time
15M
Total Time
25 Mins

Recipe By: ಬೋಲ್ಡ್ ಸ್ಕೈ

Recipe Type: Sweet

Serves: 4

Ingredients
  • ಬೇಕಾಗುವ ಸಾಮಾಗ್ರಿಗಳು

    1 ಕಪ್ ರಾಗಿ ಹಿಟ್ಟು

    4 ಚಮಚ ತುಪ್ಪ

    1 ½ ಕಪ್ ಬಿಸಿ ಹಾಲು

    1 ಕಪ್ ಸಕ್ಕರೆ

    ¼ ಏಲಕ್ಕಿ ಪುಡಿ

    ಬಾದಾಮಿ 5-6

    5-6 ಗೋಡಂಬಿ

    7-8 ಒಣದ್ರಾಕ್ಷಿ

Red Rice Kanda Poha
How to Prepare
  • ತಯಾರಿಸುವ ವಿಧಾನ

    ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ 3 ಚಮಚ ತುಪ್ಪ ಹಾಕಿ.

    ತುಪ್ಪ ಸಂಪೂರ್ಣವಾಗಿ ಕರಗಿ ಬಿಸಿಯಾದ ನಂತರ ಅದರಲ್ಲಿ 1 ಕಪ್ ರಾಗಿ ಹಿಟ್ಟು ಸೇರಿಸಿ.

    ಕಡಿಮೆ ಉರಿಯಲ್ಲಿ 4 ನಿಮಿಷಗಳ ಕಾಲ ಹಿಟ್ಟನ್ನು ಬೆರೆಸಿ.

    ಮಿಶ್ರಣದಲ್ಲಿ ಯಾವುದೇ ಉಂಡೆಗಳಿರದಂತೆ ನೋಡಿಕೊಳ್ಳಿ ಮತ್ತು ತುಪ್ಪ ಹಿಟ್ಟು ಚೆನ್ನಾಗಿ ಮಿಶ್ರಣವಾಗಿದೆಯೇ ಗಮನಿಸಿ.

    ಗ್ಯಾಸ್‌ ಆಫ್ ಮಾಡಿ ಮತ್ತು ಬಿಸಿ ಹಾಲನ್ನು ಮಿಶ್ರಣಕ್ಕೆ ಸೇರಿಸಿ.

    ನೀವು ಹಾಲನ್ನು ಮಿಶ್ರಣಕ್ಕೆ ನಿಧಾನವಾಗಿ ಸೇರಿಸುತ್ತಾ ಕಲಸುತ್ತಾ ಬನ್ನಿ. ಹಾಲನ್ನು ಸೇರಿಸುವಾಗ ಸಹ ಮಿಶ್ರಣದಲ್ಲಿ ಯಾವುದೇ ಉಂಡೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ

    ಈಗ ಮತ್ತೆ ಗ್ಯಾಸ್‌ ಆನ್ ಮಾಡಿ ಕಡಿಮೆ ಉರಿಯಲ್ಲಿ ನಿಧಾನವಾಗಿ ಬೆರೆಸಿ.

    ಹಿಟ್ಟು ಸ್ವಲ್ಪ ಗಟ್ಟಿ ಆಗುವವರೆಗೆ ಇದನ್ನೇ ಮುಂದುವರೆಸಿ.

    ಈಗ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ 2-3 ನಿಮಿಷ ಬೇಯಿಸಿ.

    ಮಿಶ್ರಣ ಪ್ಯಾನ್‌ನಿಂದ ಸುಲಭವಾಗಿ ಹೊರಬರುವವರೆಗೆ ಮಿಶ್ರಣವನ್ನು ಬೇಯಿಸಿ.

    ನಂತರ ಗ್ಯಾಸ್ ಆಫ್ ಮಾಡಿ ಹಲ್ವಾವನ್ನು 2-3 ನಿಮಿಷಗಳ ಕಾಲ ಪಕ್ಕಕ್ಕೆ ಇಡಿ.

    ಅಂತಿಮವಾಗಿ ಹಲ್ವಾವನ್ನು ಬಾದಾಮಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳಿಂದ ಅಲಂಕರಿಸಿ.

    ಈಗ ರುಚಿಕರ ಬಿಸಿಬಿಸಿ ಹಲ್ವಾ ಸವಿಯಲು ಸಿದ್ಧ.

Instructions
  • ನೀವು ಸಕ್ಕರೆಯ ಬದಲು ಬೆಲ್ಲವನ್ನು ಸಹ ಬಳಸಬಹುದು. ನೀವು ಬೆಲ್ಲವನ್ನು ಬಳಸುವುದಾದರೆ ಅದನ್ನು ಮೊದಲೇ ಕರಗಿಸಿ ಶೋಧಿಸಿ ಇಟ್ಟುಕೊಳ್ಳಬೇಕು. ನೀವು ಹಾಲನ್ನು ಮೊದಲೇ ಬಿಸಿ ಮಾಡಿ ಸಿದ್ಧ ಇಟ್ಟುಕೊಂಡಿರಬೇಕು.
Nutritional Information
  • 1 ಕಪ್ -
  • ಫೈಬರ್ - - 1.7 ಗ್ರಾಂ
  • ಕ್ಯಾಲ್ಶಿಯಂ - - 71
  • ಕೊಬ್ಬು - - 2.8 ಮಿಗ್ರಾಂ
  • ಕಾರ್ಬ್ಸ - - 10.4 ಗ್ರಾಂ
[ 4 of 5 - 91 Users]
X
Desktop Bottom Promotion