Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ತುಳುನಾಡ ಆಟಿ ಸ್ಪೆಷಲ್: ಪೆಲಕ್ಕಾಯಿ ಗಟ್ಟಿ/ ಹಲಸಿನ ಹಣ್ಣಿನ ಕಡಬು ರೆಸಿಪಿ
Recipes
oi-Shreeraksha
Posted By: Shreeraksha
ಆಷಾಢ ಮಾಸವನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುವುದು. ಅವುಗಳಲ್ಲಿ ಒಂದು ನಮ್ಮ ತುಳುನಾಡಿನ ಆಟಿ ತಿಂಗಳು. ಇಲ್ಲಿ ಆಷಾಢವನ್ನು ಆಟಿ ಎಂದು ಕರೆಯಲಾಗುತ್ತಿದ್ದು, ಈ ತಿಂಗಳಲ್ಲಿ ಹೆಚ್ಚಾಗಿ ನೈಸರ್ಗಿಕವಾಗಿ ಸಿಗುವ ಪದಾರ್ಥಗಳಿಂದಲೇ ಆಹಾರ ತಯಾರಿಸುತ್ತಾರೆ. ಅವುಗಳಲ್ಲಿ ನಾವಿಂದು ಹೇಳ ಹೊರಟಿರುವುದು ಆಟಿ ಕಾಲದ ಪೆಲಕ್ಕಾಯಿ ಗಟ್ಟಿ ಬಗ್ಗೆ. ಹಲಸಿನ ಹಣ್ಣಿನ ಕಡುಬು ಎಂದೂ ಕರೆಯುವ ಈ ತಿಂಡಿಯನ್ನು ಕರಾವಳಿಯಲ್ಲಿ ಹೇಗೆ ಮಾಡುತ್ತಾರೆ ಎಂಬುದರ ಸವಿವರ ಇಲ್ಲಿದೆ.

ತುಳುನಾಡ ಆಟಿ ಸ್ಪೆಷಲ್: ಪೆಲಕ್ಕಾಯಿ
ಗಟ್ಟಿ/ ಹಲಸಿನ ಹಣ್ಣಿನ ಕಡಬು ರೆಸಿಪಿ
ತುಳುನಾಡ ಆಟಿ ಸ್ಪೆಷಲ್:
ಪೆಲಕ್ಕಾಯಿ ಗಟ್ಟಿ/ ಹಲಸಿನ ಹಣ್ಣಿನ ಕಡಬು ರೆಸಿಪಿ
Prep Time
15 Mins
Cook Time
45M
Total Time
1 Hours0 Mins
Recipe By: Shreeraksha
Recipe Type: Snacks
Serves: 4
Ingredients
-
ಬೇಕಾಗಿರುವ ಪದಾರ್ಥಗಳು:
ಹಲಸಿನ ಹಣ್ಣು- 2 ಕಪ್
ಬೆಲ್ಲ - ಅರ್ಧ ಕಪ್
ಏಲಕ್ಕಿ ಪುಡಿ - ಕಾಲು ಚಮಚ
ತಾಜಾ ತೆಂಗಿನಕಾಯಿ - 2 ಕಪ್
ಅಕ್ಕಿ - 2 ಕಪ್
ಉಪ್ಪು - ರುಚಿಗೆ
ತೇಗದ ಎಲೆಗಳು - 20 (ಲಭ್ಯವಿಲ್ಲದಿದ್ದರೆ ಬಾಳೆ ಎಲೆಗಳನ್ನು ಬಳಸಿ)
How to Prepare
-
ತಯಾರಿಸುವ ವಿಧಾನ:
- 2 ಕಪ್ ಅಕ್ಕಿ ತೊಳೆದು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
- ಸುಮಾರು 20 ತೇಗದ ಎಲೆಗಳನ್ನು ಸ್ವಚ್ಛಗೊಳಿಸಿ ಒಣಗಿಸಿ.
- ಹಲಸಿನ ಹಣ್ಣನ್ನು ಬಿಡಿಸಿಕೊಂಡು, ರುಬ್ಬಲು ಸುಲಭವಾಗುವ ರೀತಿಯಲ್ಲಿ ಕತ್ತರಿಸಿಟ್ಟುಕೊಳ್ಳಿ.
- ರುಬ್ಬುವ ಜಾರ್ ತೆಗೆದುಕೊಂಡು 2 ಕಪ್ ಕತ್ತರಿಸಿದ ಹಲಸಿನ ಹಣ್ಣು, ಅರ್ಧ ಕಪ್ ಬೆಲ್ಲ ಮತ್ತು ಕಾಲು ಚಮಚ ಏಲಕ್ಕಿ ಪುಡಿಯನ್ನು ಸೇರಿಸಿ. ಬೇರಾವುದನ್ನು ಸೇರಿಸದೆ ಈ ಪದಾರ್ಥಗಳನ್ನು ಮಾತ್ರ ರುಬ್ಬಿಕೊಳ್ಳಿ. ಬ್ಯಾಟರ್ ಗಟ್ಟಿಯಾಗಿರಬೇಕು, ಆದ್ದರಿಂದ ನೀರನ್ನು ಸೇರಿಸಬೇಡಿ.
- ಈಗ ತಯಾರಾದ ಹಲಸಿನ ಹಣ್ಣಿನ ಮಿಶ್ರಣಕ್ಕೆ 2 ಕಪ್ ತೆಂಗಿನಕಾಯಿ ಮತ್ತು ನೆನೆಸಿದ ಅಕ್ಕಿಯನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ನೀರು ಸೇರಿಸದೇ ಎಲ್ಲವನ್ನೂ ರುಬ್ಬಿಕೊಳ್ಳಿ.
- ಬ್ಯಾಟರ್ ಸಿದ್ಧವಾದ ನಂತರ, ತೇಗದ ಎಲೆಗಳನ್ನು ತೆಗೆದುಕೊಂಡು ಅದಕ್ಕೆ 1 ಅಥವಾ 2 ಸೌಟ್ ಬ್ಯಾಟರ್ ನ್ನು ಎಲೆಯ ಮೇಲೆ ಹರಡಿ. ಜಾಸ್ತಿ ದಪ್ಪವೂ ಬೇಡ, ಜಾಸ್ತಿ ತೆಳ್ಳಗೆಯೂ ಆಗದಂತೆ ಹರಡಿ. ಈಗ 4 ಬದಿಗಳಿಂದ ಎಲೆಗಳನ್ನು ಮುಚ್ಚಿ.
- ಇಡ್ಲಿ ಸ್ಟೀಮರ್ ನಲ್ಲಿ ಎಲ್ಲಾ ಎಲೆಗಳನ್ನು ಇದೇ ರೀತಿ ಮಾಡಿ ಒಳಗಿಡಿ.
- ಹಲಸಿನ ಹಣ್ಣು ಬೇಯಲು ಸಮಯ ತೆಗೆದುಕೊಳ್ಳುತ್ತದೆ. ಕನಿಷ್ಟ 30 ನಿಮಿಷಗಳ ಕಾಲ ಹೈ ಫ್ಲೇಮ್ ನಲ್ಲಿ ಕಡುಬನ್ನು ಬೇಯಿಸಬೇಕಾಗುತ್ತದೆ.
- ಬೆಂದ ನಂತರ ಎಲೆಗಳನ್ನು ಬಿಚ್ಚಿ. ಕಡುಬು ಹಳದಿ ಅಥವಾ ಕಿತ್ತಳೆ-ಕೆಂಪು ಬಣ್ಣಕ್ಕೆ ಬದಲಾಗಿರುವುದನ್ನು ಕಾಣುತ್ತೀರಿ. ಏಕೆಂದರೆ ಅದಕ್ಕೆ ಬಳಸಿದ ತೇಗದ ಎಲೆಗಳಿಂದ. ಇವುಗಳು ಬಣ್ಣ, ಪರಿಮಳ ಮತ್ತು ಔಷಧೀಯ ಮೌಲ್ಯಗಳನ್ನು ಕಡುಬಿಗೆ ಹಸ್ತಾಂತರಿಸುತ್ತವೆ.
- ಇವುಗಳನ್ನು ಕೇಕ್ ನಂತೆ ಕತ್ತರಿಸಿದರೆ, ಪೆಲಕ್ಕಾಯಿ ಗಟ್ಡಿ ಸವಿಯಲು ಸಿದ್ದ.
- ಈ ರುಚಿಯಾದ ಹಲಸಿನ ಹಣ್ಣಿನ ಕಡುಬು ಅಥವಾ ಪೆಲಕ್ಕಾಯಿ ಗಟ್ಟಿಯನ್ನು ತುಪ್ಪ ಅಥವಾ ಚಿಕನ್ ಸುಕ್ಕದೊಂದಿಗೆ ಸವಿಯಬಹುದು.
Instructions
Nutritional Information
- People - 3
- ಕೊಬ್ಬು - 0.1ಗ್ರಾ
- ಪ್ರೋಟೀನ್ - 1.2ಗ್ರಾ
- ಕಾರ್ಬೋಹೈಡ್ರೇಟ್ - 16ಗ್ರಾ
- ಫೈಬರ್ - 0.33ಗ್ರಾ
Comments
[ 5 of 5 - 51 Users]



Click it and Unblock the Notifications