Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬಳ್ಳಿ ಬದನೆ ಮೊಸರು ಗೊಜ್ಜು
ಬದನೆಯಂತೆ ಕಂಡರೂ ಬದನೆಕಾಯಿ ಅಲ್ಲ,ಸೀಮೆ ಸೌತೆಯಂತೆ ಕಂಡರೂ ಇದು ಅದಲ್ಲ. ಹಾಗಾದ್ರೆ ಇದ್ಯಾವ ಕಾಯಿ ಗೊತ್ತಾ? ಹೆಚ್ಚಿದರೆ ಹಾಲುಗುಂಬಳದಂತೆ ನೋಡುವುದಕ್ಕೆ ಸೀಮೆಬದನೆಯಂತೆ. ಬಳ್ಳಿಯಲ್ಲಿ ಬೆಳೆಯುವ ಈ ಕಾಯಿಯನ್ನು ಬೀಳು ಬದನೆ ಅಥವಾ ಬಳ್ಳಿ ಬದನೆ ಎಂದು ಕರೆಯಲಾಗುತ್ತದೆ.

ಇಂಗ್ಲೀಷಿನಲ್ಲಿ ಈ ಕಾಯಿಯನ್ನು passiflora quadrangularis ಎನ್ನಲಾಗುತ್ತದೆ. ಶ್ರೀಲಂಕಾದ ಮಂದಿ ಹೆಚ್ಚು ಅಡುಗೆಗಳಲ್ಲಿ ಬಳಸುತ್ತಾರೆ. ಹಲ್ವಾ,ಪಲ್ಯ, ಸಾಂಬಾರ್, ಗೊಜ್ಜು, ಸೇರಿದಂತೆ ಅನೇಕ ಖಾದ್ಯಗಳನ್ನು ಇದರಿಂದ ತಯಾರಿಸಬಹುದು. ವಿದೇಶಗಳಲ್ಲಿ ಐಸ್ ಕ್ರೀಮ್ ತಯಾರಿಕೆಯಲ್ಲೂ ಬಳಸಲಾಗುತ್ತದೆ.
ಗ್ರೀನ್ ಹೌಸ್ ಗಳಲ್ಲಿ ಬಹಳ ಚೆನ್ನಾಗಿ ಬೆಳೆಯುತ್ತದೆ. ಯಾವುದಾದರೂ ಮರಕ್ಕೆ ಇಲ್ಲವೆ ಚಪ್ಪರಕ್ಕೆ ಹಬ್ಬಿಸಿ ಇದನ್ನು ಬೆಳೆಸಬಹುದು. ಕಾಯಿ ಬಿಡುವುದಕ್ಕೆ ಸಮಯ ತೆಗೆದುಕೊಳ್ಳಬಹುದು. ಆದರೆ ರುಚಿಗೆ ಕೊರತೆ ಇಲ್ಲ.
ಮೊದಲಿಗೆ ಗಿಡದಲ್ಲಿ ಗಡಿಯಾರದ ಹೂವಿನಂತೆ ನೀಲಿ ಬಣ್ಣದ ಹೂವುಗಳಾಗುತ್ತದೆ. ಕೆಲವೇ ದಿನದಲ್ಲಿ ಹೂವುಗಳಿಂದ ಹಸಿರು ಕಾಯಿಗಳು ಗೋಚರಿಸುತ್ತದೆ. ತೀರಾ ಬೆಳೆದ ಕಾಯಿಗಳು ಕೊನಲಾಗಿರುತ್ತದೆ. ಎಳೆಯ ಕಾಯಿಗಳನ್ನು ಅಡುಗೆಗೆ ಬಳಸಬಹುದು.
ನಾವಿಲ್ಲಿ ಬಳ್ಳಿ ಬದನೆಯ ಮೊಸರು ಗೊಜ್ಜು ಮಾಡುವ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.
Recipe By: Sushma
Recipe Type: Gojju
Serves: 3
-
ಬೇಕಾಗುವ ಸಾಮಗ್ರಿಗಳು:
ಬಳ್ಳಿ ಬದನೆ- ಒಂದು ಕಾಯಿ
ಹಸಿಮೆಣಸು- ಎರಡರಿಂದ ಮೂರು
ಉದ್ದಿನಬೇಳೆ- ಒಂದು ಸ್ಪೂನ್
ಸಾಸಿವೆಕಾಳು- ಒಂದು ಸ್ಪೂನ್
ಅಡುಗೆ ಎಣ್ಣೆ- ಎರಡು ಸ್ಪೂನ್
ಕರಿಬೇವಿನಸೊಪ್ಪು ಅಥವಾ ಕೊತ್ತುಂಬರಿ ಸೊಪ್ಪು- ನಾಲ್ಕರಿಂದ ಐದು ಎಸಳು
ಉಪ್ಪು- ರುಚಿಗೆ ತಕ್ಕಷ್ಟು
ಮೊಸರು- ಅರ್ಧ ಲೀಟರ್
-
ಮಾಡುವ ವಿಧಾನ-
ಮೊದಲಿಗೆ ಸಿಪ್ಪೆ ತೆಗೆದು ಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಮತ್ತು ಸ್ವಲ್ಪ ನೀರು ಸೇರಿಸಿ ಹೆಚ್ಚಿದ ಹೋಳುಗಳನ್ನು ಚೆನ್ನಾಗಿ ಬೇಯಿಸಿ.
ಬೆಂದ ನಂತರ ಮಿಶ್ರಣವನ್ನು ತಣಿಯಲು ಬಿಡಿ.
ತಣಿದ ನಂತರ ಮೊಸರು ಸೇರಿಸಿ ನಂತರ ಒಗ್ಗರಣೆ ಮಾಡಬೇಕು.
ಅಡುಗೆ ಎಣ್ಣೆಗೆ ಸಾಸಿವೆ ಹಾಕಿ, ಉದ್ದಿನಬೇಳೆ ಹಾಕಿ ಕೆಂಬಣ್ಣಕ್ಕೆ ಬಂದಾಗ ಕರಿಬೇವಿನ ಎಸಳು ಮತ್ತು ಒಂದೆರಡು ಕೆಂಪು ಮೆಣಸನ್ನು ಹಾಕಿ ಒಗ್ಗರಣೆ ಮಾಡಿ.
ರುಚಿರುಚಿಯಾದ ಬಳ್ಳಿಬದನೆಯ ಮೊಸರು ಗೊಜ್ಜು ರೆಡಿ.
ಅನ್ನದ ಜೊತೆಗೆ ಕಲಸಿ ಸೇವಿಸಲು ಬಹಳ ರುಚಿಯಾಗಿರುತ್ತದೆ.
- ಆರೋಗ್ಯಕ್ಕೆ ಬಹಳ ಹಿತವಾಗಿರುವ ತರಕಾರಿ ಇದು. ಗ್ಯಾಸ್ಟ್ರಿಕ್ ಆಗುವುದಿಲ್ಲ. ಸುಲಭವಾಗಿ ಜೀರ್ಣವಾಗುತ್ತದೆ. ಮಲಭದ್ಧತೆ ಆಗುವುದಿಲ್ಲ. ಶ್ರೀಲಂಕಾದಲ್ಲಿ ಇದನ್ನು ಐಸ್ ಕ್ರೀಮ್ ಗಳ ತಯಾರಿಕೆಯಲ್ಲಿಯೂ ಬಳಸುತ್ತಾರಂತೆ. ದೇಹ ತೂಕ ಇಳಿಸುವುದಕ್ಕೂ ಕೂಡ ಈ ತರಕಾರಿ ನಿಮಗೆ ನೆರವು ನೀಡುತ್ತದೆ. ಶೀತ ಆಗುವುದನ್ನು ಇದು ತಡೆಯುತ್ತದೆ.ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.
- ವಿಟಮಿನ್ ಸಿ - (78.67%)
- ಕಬ್ಬಿಣ - (10.00%)
- ಪಾಸ್ಪರಸ್ - (2.44%)
- ವಿಟಮಿನ್ ಬಿ3 - (2.36%)



Click it and Unblock the Notifications
