Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಸಂಜೆಗೆ ಈ ಸ್ನಾಕ್ಸ್ ಕಾಫಿ ಜೊತೆ ಸೂಪರ್ ಕಾಂಬಿನೇಷನ್
ಮಳೆಗಾಲ ನಮ್ಮನ್ನ ಏನಾದ್ರೂ ಬಿಸಿಬಿಸಿ ತಿನ್ನೋ ಬಯಕೆ ಹುಟ್ಟುಹಾಕುವುದು. ಆದ್ರೆ ಮಾಡೋದಾದ್ರೂ ಏನು? ಅದೇ ಈರುಳ್ಳಿ ಪಕೋಡಾ, ಬೋಂಡಾ, ಬಜ್ಜಿ ಅಂತ ಬೇಜಾರು ಮಾಡ್ಕೋಳೋರೇ ಹೆಚ್ಚು. ಇಂತಹವರಿಗಾಗಿ ನಾವಿಂದು ಎಲ್ಲರೂ ಇಷ್ಟ ಪಡೋ ಪನ್ನೀರ್ ನ ಒಂದು ರೆಸಿಪಿ ಹೇಳ್ತಾ ಇದೀವಿ. ಅದೇ ಪನ್ನೀರ್ ಪಕೋಡಾ. ಇದು ಮಳೆಗಾಲಕ್ಕೆ ಹೇಳಿಮಾಡಿಸಿದ್ದು. ಜೋರಾಗಿ ಬರೋ ಮಳೆಗೆ ಸಂಜೆ ಒಂದು ಕಪ್ ಕಾಫಿ ಜೊತೆ ಇದನ್ನು ತಿನ್ನೋ ಮಜಾನೇ ಬೇರೆ. ಅದೇನು ಅಂತ ಈ ಕೆಳಗೆ ನೋಡಿ.

Recipe By: Shreeraksha
Recipe Type: Vegetarian
Serves:
-
ಬೇಕಾಗುವ ಸಾಮಾಗ್ರಿಗಳು:
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
½ ಚಮಚ ಕೆಂಪು ಮೆಣಸಿನ ಪುಡಿ
¾ ಚಮಚ ಚಾಟ್ ಮಸಾಲ
1 ಚಮಚ ಕಸೂರಿ ಮೆಥಿ
ಪನೀರ್
¾ ಕಪ್ ಕಡಲೆ ಹಿಟ್ಟು
2 ಚಮಚ ಅಕ್ಕಿ ಹಿಟ್ಟು
¼ ಚಮಚ ಅರಿಶಿನ
¼ ಚಮಚ ಹಿಂಗ್
ಹುರಿಯಲು ಎಣ್ಣೆ
ರುಚಿಗೆ ಉಪ್ಪು
-
ತಯಾರಿಸುವ ವಿಧಾನ:
1. ಒಂದು ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ½ ಟೀಸ್ಪೂನ್ ಮೆಣಸಿನ ಪುಡಿ, ¾ ಟೀಸ್ಪೂನ್ ಚಾಟ್ ಮಸಾಲ, 1 ಟೀಸ್ಪೂನ್ ಕಸೂರಿ ಮೆಥಿ ಮತ್ತು ¼ ಟೀಸ್ಪೂನ್ ಉಪ್ಪು ಹಾಕಿ ಉತ್ತಮವಾದ ಪೇಸ್ಟ್ ತಯಾರಿಸಿ.
2. ಅದಕ್ಕೆ ಪನೀರ್ ತುಂಡುಗಳನ್ನು ಸೇರಿಸಿ, ಮಿಕ್ಸ್ ಮಾಡಿ, ಮುಚ್ಚಿಡಿ.
3. ಬ್ಯಾಟರ್ ತಯಾರಿಸಲು ಮತ್ತೊಂದು ಬಟ್ಟಲಿನಲ್ಲಿ ಒಂದು ಕಪ್ ಅರಿಶಿನ ಹುಡಿ ಮತ್ತು 2 ಚಮಚ ಅಕ್ಕಿ ಹಿಟ್ಟು, ¼ ಟೀಸ್ಪೂನ್ ಮೆಣಸಿನ ಪುಡಿ, ¼ ಟೀಸ್ಪೂನ್ ಹಿಂಗ್, ¼ ಚಮಚ ಚಾಟ್ ಮಸಾಲ ಮತ್ತು ¼ ಟೀಸ್ಪೂನ್ ಉಪ್ಪು. ಸ್ವಲ್ಪ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
4. ಮ್ಯಾರಿನೇಡ್ ಮಾಡಿದ ಪನೀರ್ ಅನ್ನು ತಯಾರಿಸಿದ ಬ್ಯಾಟರ್ ಆಗಿ ಅದ್ದಿ. ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ ಅವು ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
5. ಇದೀಗ ಬಿಸಿಬಿಸಿ ಪನ್ನೀರ್ ಪಕೋಡಾ ಚಟ್ನಿಯೊಂದಿಗೆ ಸವಿಯಲು ಸಿದ್ಧ.
- People - 3
- ಎನರ್ಜಿ - 345g
- ಕೊಬ್ಬು - 18.5g
- ಪ್ರೊಟೀನ್ - 15.8g
- ಕಾರ್ಬೋಹೈಡ್ರೇಟ್ - 28.9
- ಫೈಬರ್ - 6.3g



Click it and Unblock the Notifications
