For Quick Alerts
ALLOW NOTIFICATIONS  
For Daily Alerts

ಆರೋಗ್ಯಕ್ಕೆ ಒಳ್ಳೆಯದು ಕಿತ್ತಳೆ ಸಿಪ್ಪೆಯ ಗೊಜ್ಜು

|
Orange Skin Gojju
ಕಿತ್ತಳೆ ಜ್ಯೂಸ್ ಆರೋಗ್ಯಕ್ಕೆ ಒಳ್ಳೆಯದು, ಅದರ ಸಿಪ್ಪೆಯನ್ನು ಫೇಸ್ ಪ್ಯಾಕ್‌ಗೆ ಉಪಯೋಗಿಸಬಹುದು ಅನ್ನುವುದು ತಿಳಿದಿರುವ ವಿಷಯ. ಸಿಪ್ಪೆ ಹಾಗೇ ಬಿಸಾಡದೆ ಅದರಿಂದ ಪದಾರ್ಥಗಳನ್ನು ತಯಾರಿಸಿ ಅಂದರೆ ಅನೇಕರು ಹುಬ್ಬೇರಿಸಬಹುದು.

ಆದರೆ ಇದರ ಸಿಪ್ಪೆಯಿಂದ ತಂಬುಳಿ, ಗೊಜ್ಜು ತಯಾರಿಸುವುದು ಮಲೆನಾಡಿನಲ್ಲಿ ಸಾಮಾನ್ಯ. ಸಿಪ್ಪೆಯಲ್ಲಿ ಕ್ಯಾನ್ಸರ್ ತಡೆಗಟ್ಟುವ ಬಯೋಫ್ಲೇವೊನೈಡ್ಸ್ (bioflavonoids) ಎಂಬ antioxidant ಮತ್ತು ವಿಟಮಿನ್ ಸಿ ಇರುವುದರಿಂದ ಇದನ್ನು ಪದಾರ್ಥ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇವತ್ತು ಕಿತ್ತಳೆ ಸಿಪ್ಪೆಯಿಂದ ಗೊಜ್ಜು ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಗ್ರಿಗಳು:

* ಕಿತ್ತಳೆ ಸಿಪ್ಪೆ - ಕಿತ್ತಳೆ ಹಣ್ಣಿನ ಸಿಪ್ಪೆಯ ಕಾಲು ಭಾಗದಷ್ಟು
* ತೆಂಗಿನ ತುರಿ
* ಒಣಮೆಣಸಿನ ಕಾಯಿ 3
* ಉದ್ದಿನ ಬೇಳೆ 1 ಚಮಚ
* ಸಾಸಿವೆ 1 / 4 ಚಮಚ
* ಎಳ್ಳು 1 ಚಮಚ
* ಚಿಟಿಕೆಯಷ್ಟು ಇಂಗು
*ಎಣ್ಣೆ 2 ಚಮಚ
* ಹುಣಸೆ ಹಣ್ಣು - ಚಿಕ್ಕ ನಿಂಬೆ ಗಾತ್ರದಷ್ಟು
* ಬೆಲ್ಲ 3 ಚಮಚ
* ನೀರು

ಮಾಡುವ ವಿಧಾನ:

1. ಕಿತ್ತಳೆ ಸಿಪ್ಪೆಯನ್ನು 1 ಲೋಟದಷ್ಟು ಬಿಸಿನೀರಿನಲ್ಲಿ 5 ನಿಮಿಷ ಬೇಯಿಸಿಕೊಂಡು, ನೀರಿನಂಶವನ್ನು ಹಿಂಡಿ ತೆಗೆಯಬೇಕು.

2. ಎಣ್ಣೆ ಕಾಯಿಸಿ ಅದಕ್ಕೆ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಎಳ್ಳು, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇದರೊಡನೆ ಬೇಯಿಸಿದ ಕಿತ್ತಳೆ ಸಿಪ್ಪೆ, ತೆಂಗಿನತುರಿ, ಹುಣಸೆಹಣ್ಣು ಸೇರಿಸಿ, ಮಿಕ್ಸಿಯಲ್ಲಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.

3. ನಂತರ ರುಬ್ಬಿಕೊಂಡ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಿಹಿಯಾಗುವಷ್ಟು ಬೆಲ್ಲ ಸೇರಿಸಿ ಐದು ನಿಮಿಷ ಚೆನ್ನಾಗಿ ಕುದಿಸಿ ಇಳಿಸಿದರೆ ಆರೋಗ್ಯಕರ ಮತ್ತು ರುಚಿಕರವಾದ ಪದಾರ್ಥ ರೆಡಿ.

ಈ ಗೊಜ್ಜು ಹಾಗೆಯೇ ಇಟ್ಟರೂ 2 ದಿನದವರೆಗೆ ಕೆಡುವುದಿಲ್ಲ. ಫ್ರಿಜ್ ನಲ್ಲಿಟ್ಟುಕೊಂಡರೆ ಒಂದು ವಾರದವರೆಗೂ ಉಪಯೋಗಿಸಬಹುದು.

English summary

Orange Skin Gojju | Variety Of Gojju Recipe | ಕಿತ್ತಳೆ ಸಿಪ್ಪೆಯ ಪಲ್ಯ | ಅನೇಕ ಬಗೆಯ ಗೊಜ್ಜು ರೆಸಿಪಿ

Orange skin has some anti-cancer properties and antioxidants actually, so it is very good for you. So to day we can learn how to prepare gojju from this orange skin.
Story first published: Wednesday, May 9, 2012, 14:28 [IST]
X
Desktop Bottom Promotion