Latest Updates
-
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ!
ಪರೋಟ ಜೊತೆ ಸವಿಯಿರಿ ಹರಿಯಾಲಿ ಚೊಲೆ ಮಸಾಲ
Palya
oi-Hema
By Hema S
ಹಸಿರು ತರಕಾರಿಗಳನ್ನು ಆಹಾರದಲ್ಲಿ ಹೆಚ್ಚು ಬಳಸಿದಷ್ಟು ಒಳ್ಳೆಯದು. ಚಳಿಗಾಲ ಕಾಲಿಟ್ಟು ಕರಾಮತ್ತು ತೋರಿಸಲು ಆರಂಭಿಸಿದೆ. ಈಗ ಹಸಿರು ತರಕಾರಿಗಳು ಮಾರುಕಟ್ಟೆಯಲ್ಲಿ ಕೂಡ ಬೇಕಾದಷ್ಟು ಸಿಗುತ್ತದೆ. ಈಗ ನೀವು ಮಾಡಬೇಕಾದದ್ದು ನಿಮ್ಮ ಮನೆಯವರಿಗೆ ಈ ತರಕಾರಿಗಳಿಂದ ರುಚಿಕರವಾದ ಅಡುಗೆ ಮಾಡಿ ಹಾಕುವುದು ಹೇಗೆ ಅಂತ ದಾರಿ ಹುಡುಕಿಕೊಳ್ಳುವುದು. ಈವತ್ತು ರಾತ್ರಿ ಪರೋಟ ಜೊತೆಗೆ ಹರಿಯಾಲಿ ಚೊಲೆ ಮಸಾಲ ಟ್ರೈ ಮಾಡಿ ನೋಡಿ.
ಇದನ್ನು ಕಡಲೆಕಾಳಿನಿಂದ ಮಾಡಲಾಗುತ್ತದೆ. ಈ ಕರ್ರಿಗೆ ಅಪ್ಪಟ ಭಾರತೀಯ ಶೈಲಿಯ ಸವಿಯಿದೆ. ಧನಿಯಪುಡಿ, ಪುದೀನ ಇವು ಇದರ ಸ್ವಾದವನ್ನು ಹೆಚ್ಚಿಸುತ್ತದೆ.

1. ಕಡಲೆ - 250 ಗ್ರಾಂ
2. ಕೊತ್ತಂಬರಿ ಸೊಪ್ಪು- 1 ಕಟ್ಟು (ಹೆಚ್ಚಿಟ್ಟು ಕೊಳ್ಳಿ)
3. ಪುದೀನ - 1/2 ಕಟ್ಟು (ಹೆಚ್ಚಿಟ್ಟುಕೊಳ್ಳಿ)
4. ಬೆಳ್ಳುಳ್ಳಿ- 8 ಎಸಳು
5. ಹಸಿಮೆಣಸಿನ ಕಾಯಿ- 4
6. ಈರುಳ್ಳಿ- 1 (ಕತ್ತರಿಸಿಟ್ಟುಕೊಳ್ಳಿ)
7. ಟೊಮೊಟೊ- 2 (ಕತ್ತರಿಸಿಟ್ಟುಕೊಳ್ಳಿ)
8. ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಟೀಚಮಚ
9. ಅರಿಶಿಣ ಪುಡಿ- 1/2 ಟೀಚಮಚ
10. ಜೀರಿಗೆ ಪುಡಿ- 1 ಟೀಚಮಚ
11. ಗರಂ ಮಸಾಲ ಪುಡಿ- 1/2 ಟೀಚಮಚ
12. ಜೀರಿಗೆ- 1 ಟೀಚಮಚ
13. ಉಪ್ಪು- ರುಚಿಗೆ ತಕ್ಕಷ್ಟು
14. ಎಣ್ಣೆ- 2 ಟೀಚಮಚ
15. ನೀರು- 2 ಕಪ್
ಮಾಡುವ ವಿಧಾನ
1. ಕಡಲೆಯನ್ನು ರಾತ್ರಿಯೇ ನೀರಿನಲ್ಲಿ ನೆನಸಿಟ್ಟುಕೊಳ್ಳಿ.
2. ಬೆಳಗ್ಗೆ ಅದರ ನೀರನ್ನು ಸೋಸಿ ಕುಕ್ಕರಿನಲ್ಲಿಟ್ಟು ಬೇಯಿಸಿಕೊಳ್ಳಿ. ಕುಕ್ಕರ್ ನಾಲ್ಕು ಬಾರಿ ಕೂಗಿದ ನಂತರ ಇಳಿಸುವುದು ಒಳ್ಳೆಯದು.
3. ಕುಕ್ಕರ್ ಆರಿದ ನಂತರ ಕಡಲೆಯನ್ನು ಸೋಸಿಕೊಳ್ಳಿ.
4. ಕೊತ್ತಂಬರಿ ಸೊಪ್ಪು, ಪುದೀನ, ಬೆಳ್ಳುಳ್ಳಿ, ಟೊಮೊಟೊ ಮತ್ತು ಹಸಿಮೆಣಸಿನಕಾಯಿಯನ್ನು ರುಬ್ಬಿಟ್ಟುಕೊಳ್ಳಿ.
5.ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಜೀರಿಗೆ ಹಾಕಿ ಹುರಿಯಿರಿ.
6. ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಹಾಕಿ 4-5 ನಿಮಿಷ ಸಣ್ನ ಉರಿಯಲ್ಲಿ ಹುರಿಯಿರಿ.
7. ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.
8.ಇದಕ್ಕೆ ಕೊತ್ತಂಬರಿ ಮತ್ತು ಪೇಸ್ಟ್ ಸೇರಿಸಿ 4-5 ನಿಮಿಷಗಳವರೆಗೆ ಒಲೆಯ ಮೇಲೆ ತಿರುಗಿಸುತ್ತಿರಿ.
9. ನಂತರ ಅರಿಶಿಣ ಪುಡಿ, ಧನಿಯಪುಡಿ, ಜೀರಿಗೆ ಪುಡಿ, ಗರಂಮಸಾಲ ಪುಡಿ, ಉಪ್ಪು ಸೇರಿಸಿ ಮತ್ತು 4-5 ನಿಮಿಷಗಳವರೆಗೆ ಬೇಯಿಸಿ.
10. ಇದಕ್ಕೆ ಬೇಯಿಸಿಟ್ಟ ಕಡಲೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಡಲೆಯೊಂದಿಗೆ ಮಸಾಲೆ ಚೆನ್ನಾಗಿ ಮಿಶ್ರವಾಗುವಂತೆ ನೋಡಿಕೊಳ್ಳಿ.
ಈ ಹರಿಯಾಲಿ ಚೊಲಾ ಮಸಾಲವನ್ನು ಪರೋಟ ಜೊತೆ ಸವಿಯಿರಿ.
Comments
English summary
Hariyali Chole Masala Recipe
Story first published: Saturday, November 30, 2013, 12:06 [IST]
Other articles published on Nov 30, 2013



Click it and Unblock the Notifications