Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದಪ್ಪ ಮೆಣಸಿನಕಾಯಿ ಬದನೇಕಾಯಿ ಗೊಜ್ಜು

* ಭಾರತಿ ಎಚ್ಎಸ್, ಬೆಂಗಳೂರು
ಬೇಕಾಗುವ ಸಾಮಾನುಗಳು;
ದಪ್ಪ ಮೆಣಸಿನಕಾಯಿ 4
ಬದನೇಕಾಯಿ 4
ಎಣ್ಣೆ 1/2 ಬಟ್ಟಲು
ಸಾಸಿವೆ 1 ಚಮಚ
ಕರಿಬೇವು 8 ಎಸಳು
ಈರುಳ್ಳಿ 1 ಉದ್ದಕ್ಕೆ ಹೆಚ್ಚಿದ್ದು
ಮಸಾಲೆ ರುಬ್ಬಲು ಸಾಮಾನುಗಳು;
ಈರುಳ್ಳಿ 2
ಬೆಳ್ಳುಳ್ಳಿ 8 ಎಸಳು
ಬ್ಯಾಡಗಿ ಮೆನಸಿನಕಾಯಿ 4 ಅಥವಾ ಅಚ್ಚಮೆಣಸಿನಪುಡಿ 1 ಚಮಚ
ದನಿಯಾ ಪುಡಿ 2 ಚಮಚ
ಸಾರಿನ ಪುಡಿ 1 ಚಮಚ
ಚಕ್ಕೆ 2
ಲವಂಗ 3
ಶುಂಠಿ 1 ಇಂಚು
ತೆಂಗಿನತುರಿ 1 ಬಟ್ಟಲು
ಕಡಲೆ 1 ಚಮಚ
ಗಸಗಸೆ 1/4 ಚಮಚ
ರುಚಿಗೆ ಉಪ್ಪು
ಮಾಡುವ ವಿಧಾನ;
ಮೊದಲಿಗೆ ಮಸಾಲೆ ಸಾಮಾನುಗಳನ್ನೆಲ್ಲ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಟ್ಟು ಕೊಂಡ ಮಿಶ್ರಣವನ್ನು ಎಣ್ಣೆಗಾಯಿ ಪಲ್ಯ ಮಾಡುವಾಗ ಕತ್ತರಿಸುವಂತೆ ದೊಡ್ಡ ಮೆಣಸಿನಕಾಯಿ ಮತ್ತು ಬದನೆಕಾಯಿಗಳನ್ನು ಕತ್ತರಿಸಿ ಅವುಗಳಲ್ಲಿ ತುಂಬಿಟ್ಟು ಕೊಳ್ಳಬೇಕು.
ಸಣ್ಣ ಕುಕ್ಕರ್ ನಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ ತಾಳಿಸಿರಿ. ಈರುಳ್ಳಿ ಕಂದುಬಣ್ಣಕ್ಕೆ ಬಂದನಂತರ ಮಸಾಲೆ ತುಂಬಿದ ಕಾಯಿಗಳನ್ನು ಹಾಕಿ ಮತ್ತೊಮ್ಮೆ ತಾಳಿಸಿ ನಿಮಗೆ ಬೇಕಾಗುವ ಹದಕ್ಕೆ ನೀರು ಹಾಕಿ.
ಕುಕ್ಕರ್ ಒಂದೇ ಒಂದು ಬಾರಿ ಸೀಟಿ ಹೊಡೆದರೆ ಸಾಕು ರುಚಿಕಟ್ಟಾದ ಗೊಜ್ಜು ಸಿದ್ದವಾಗಿರುತ್ತದೆ. ಈ ಗೊಜ್ಜನ್ನು ಚಪಾತಿ, ಪೂರಿ ಮತ್ತು ರೊಟ್ಟಿಯೊಂದಿಗೆ ತಿನ್ನಬಹುದು. ಬಿಸಿಬಿಸಿ ಅನ್ನ, ತುಪ್ಪದೊಡನೆಯೂ ಗೊಜ್ಜನ್ನು ಹೊಟ್ಟೆಗಿಳಿಸಬಹುದು.



Click it and Unblock the Notifications
