Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಯಣ್‌ಗಾಯಿ ಬದನೆಕಾಯಿ ಪಲ್ಯ

ಅಗತ್ಯವಾಗಿ ಇಷ್ಟು ಬೇಕು :
ಚಿಕ್ಕ ಚಿಕ್ಕ ದುಂಡು ಬದನೆಕಾಯಿ - 6
ಈರುಳ್ಳಿ - 2
ಹುರಿದ ಕಡಲೆಕಾಯಿ ಬೀಜದ ಪುಡಿ - 3 ಟೇಬಲ್‌ಸ್ಪೂನ್
ತೆಂಗಿನ ತುರಿ
ಖಾರದ ಪುಡಿ - 1 ಟೇಬಲ್ ಸ್ಪೂನ್
ಗರಂ ಮಸಾಲ - 1 ಟೇಬಲ್ ಸ್ಪೂನ್
ಧನಿಯಾ ಪುಡಿ - 1 ಟೇಬಲ್ ಸ್ಪೂನ್
ಸಕ್ಕರೆ - 1 ಚಮಚ
ಬೆಳ್ಳುಳ್ಳಿ ಶುಂಠಿ ಚಟ್ನಿ (ಬೆಳ್ಳುಳ್ಳಿ ಬೇಕಿದ್ದರೆ) - 1 ಸ್ಪೂನ್
ಗಟ್ಟಿ ಮೊಸರು - 1/4 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 3 ಚಮಚ
ಮಾಡುವ ವಿಧಾನ :
1. ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ಉದ್ದಕ್ಕೆ ಮಧ್ಯಭಾಗದಲ್ಲಿ ಸೀಳಿ. ತೊಟ್ಟು ಹಾಗೆಯೇ ಇರಲಿ. ಇದನ್ನು ಸ್ವಲ್ಪ ಉಪ್ಪು, ಅರಿಶಿನ ಬೆರೆಸಿದ ತಣ್ಣೀರಿನಲ್ಲಿ ಹಾಕಿಡಿ.
2. ಈರುಳ್ಳಿ ಸಣ್ಣಗೆ ಹೆಚ್ಚಿಕೊಳ್ಳಿ. ಹಸಿ ವಾಸನೆ ಇಷ್ಟ ಪಡದವರು ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿಕೊಳ್ಳಬಹುದು.
3. ಈರುಳ್ಳಿ, ಕಾಯಿತುರಿ, ಸಕ್ಕರೆ, ಮಸಾಲೆ, ಕಡಲೆ ಕಾಯಿ ಬೀಜದ ಪುಡಿ, ಉಪ್ಪು ಮೊಸರಿನೊಂದಿಗೆ ಬೆರೆಸಿ ಚೆನ್ನಾಗಿ ಕಲಸಿ. ನಂತರ ಅದೆಲ್ಲವನ್ನು ಸೀಳಿದ ಬದನೆಕಾಯಿ ಒಳಗೆ ತುಂಬಿ.
4. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ, ಸಾಸಿವೆ, ಇಂಗಿನ ಒಗ್ಗರಣೆ ಹಾಕಿ ಬದನೆಕಾಯಿಗಳನ್ನು ತೊಟ್ಟು ಮೇಲೆ ಬರುವಂತೆ ಉದ್ದುದ್ದಕ್ಕೆ ನಿಲ್ಲಿಸಿ, ಮಿಕ್ಕ ಮಸಾಲೆಯನ್ನೂ ಸುತ್ತಲೂ ಹಾಕಿ ಮುಚ್ಚಳ ಮುಚ್ಚಿ. ಎರಡು ನಿಮಿಷಗಳಿಗೊಮ್ಮೆ ಮಸಾಲೆಯಾಂದಿಗೆ ಬದನೆಕಾಯಿಗಳನ್ನು ಮೆಲ್ಲಗೆ ತಿರುವಿ ಹಾಕುತ್ತಿರಿ(ನಿಮಗೆ ಗಟ್ಟಿ ಎನಿಸಿದಲ್ಲಿ ಸ್ವಲ್ಪ ನೀರು ಚಿಮುಕಿಸಿಕೊಳ್ಳಿ). ಬದನೆಕಾಯಿ ಮಸಾಲೆಯಾಂದಿಗೆ ಬೆಂದು ಸ್ವಲ್ಪ ಮೃದುವಾದ ನಂತರ ಇಳಿಸಿ. ಕೊತ್ತಂಬರಿ, ಕರಿಬೇವು ಸೇರಿಸಿ.
ಕಾಯಿತುರಿ ಸ್ವಲ್ಪ ಜಾಸ್ತಿ ಇದ್ದರೆ ಈ ಪಲ್ಯದ ಸವಿಯ ಮಜಾನೆ ಬೇರೆ. ಬಿಸಿಯಾಗಿರುವಾಗಲೇ ಅನ್ನ, ಭಕ್ರಿ, ಚಪಾತಿಯಾಂದಿಗೆ ಸವಿಯಿರಿ.
(ಸೂಚನೆ : ಇದನ್ನು ಮಂದ ಉರಿಯಲ್ಲಿ ಬೇಯಿಸಬೇಕು)



Click it and Unblock the Notifications
