Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಳ್ಳು ಬೆಲ್ಲದ ಬೆಂಡೇ ಗೊಜ್ಜು

ಬೇಕಾಗುವ ಪದಾರ್ಥಗಳು :
* ಬೇಯಿಸಿದ ಅರ್ಧ ಕೆಜಿ ತರಕಾರಿ
* ಸಿದ್ಧವಾಗಿರುವ ಎಳ್ಳುಬೆಲ್ಲದ ಮಿಶ್ರಣ ಒಂದು ಕಪ್
* ಹಸಿ ತೆಂಗಿನಕಾಯಿ ತುರಿ ಒಂದು ಕಪ್
* ಎರಡು ಚಮಚ ಹುಳಿಪುಡಿ ಅಥವಾ 5 ಹಸಿಮೆಣಸಿನಕಾಯಿ
* ಸ್ವಲ್ಪ ಹುಣಿಸೆಹಣ್ಣು, ತುಂಡು ಬೆಲ್ಲ, ಉಪ್ಪು
* ಒಗ್ಗರಣೆಗೆ ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು
ವಿಧಾನ :
ಎಳ್ಳುಬೆಲ್ಲದ ಮಿಶ್ರಣ, ತೆಂಗು, ಹುಣಿಸೆಹಣ್ಣು, ಹುಳಿಪುಡಿ, ಉಪ್ಪು ಮತ್ತು ಬೆಲ್ಲವನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಗೆ ಹಾಕಿಕೊಳ್ಳುವುದು. ನುಣ್ಣಗೆ ರುಬ್ಬಿ ಚಟ್ನಿ ಆಗಬೇಕು. ಎರಡು ಚಮಚ ಅಕ್ಕಿ ಹಾಕಿಕೊಂಡು ರುಬ್ಬಿದರೆ ಗೊಜ್ಜಿಗೆ ಥಿಕ್ ನೆಸ್ ಬರತ್ತೆ. ಆನಂತರ ತವದಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಆಗಲಿ. ಇದಕ್ಕೆ ರುಬ್ಬಿಕೊಂಡಿರುವಂತಹ ಚಟ್ನಿ ಹಾಕಿ ಸಣ್ಣ ಉರಿಯಲ್ಲಿ ಕುದಿಸಬೇಕು.
ಇದಕ್ಕೆ ಬೇಯಿಸಿದ ಬದನೆಕಾಯಿ ಅಥವಾ ಹುರುಳಿಕಾಯಿ ಅಥವಾ ಚೆನ್ನಾಗಿ ಹುರಿದುಕೊಂಡ ಬೆಂಡೇಕಾಯಿಯನ್ನು ಬೆರೆಸಿ ಪುನಃ ಕುದಿಸಬೇಕು. ಸಾಮಾನ್ಯವಾಗಿ ನಾವೆಲ್ಲ ಮಾಡುವ ಗೊಜ್ಜಿನ ರೆಸಿಪಿ ಇದು. ಆದರೆ, ಎಳ್ಳುಬೆಲ್ಲ ಮಿಶ್ರಣದ ರುಚಿ ಗೊಜ್ಜಿಗೆ ಹೊಸ ಅರ್ಥ ಹೊಸ ರುಚಿ ತಂದುಕೊಡುತ್ತದೆ. ಟ್ರೈ ಮಾಡಿ. ನಮ್ಮ ಮನೆಯಲ್ಲಿ ಪ್ರತಿವರ್ಷ ಸಂಕ್ರಾಂತಿ ಆದನಂತರ ಈ ಗೊಜ್ಜು ತಯಾರಿಸುವುದು ತಪ್ಪುವುದೇ ಇಲ್ಲ.



Click it and Unblock the Notifications
