Latest Updates
-
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ?
ಪಾಲಾಕ್ ಚಪಾತಿ ರೆಸಿಪಿ: ಮಧುಮೇಹಿಗಳಿಗೂ ಬೆಸ್ಟ್ ಈ ಪಾಲಕ್ ಚಪಾತಿ!
ನಾವು ಆರೋಗ್ಯಕರವಾಗಿ ಇರಬೇಕು ಅಂತ ಉತ್ತಮವಾಗಿರುವ ಪೌಷ್ಟಿಕಾಂಶ ಇರುವಂತಹ ಆಹಾರ ಸೇವಿಸಬೇಕು. ಅದರಲ್ಲೂ ಮಧುಮೇಹ, ಬಿಪಿ ಮೊದಲಾದಂತಹ ಅನಾರೋಗ್ಯ ಸಮಸ್ಯೆ ಕಾಡುತ್ತಿರುವವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಬೇಕು ಹೀಗೆ ನೀವು ಉತ್ತಮವಾಗಿರುವ ಆಹಾರವನ್ನು ಸೇವಿಸಬೇಕು ಜೊತೆಗೆ ಅದು ರುಚಿಕರವಾಗಿಯೂ ಇರಬೇಕು ಎಂದು ಭಾವಿಸಿದರೆ ಚಪಾತಿ ಚಪಾತಿ.

ಪಾಲಕ್ ಚಪಾತಿ ಕ್ಯಾಲೋರಿಸ್
125 ಕ್ಯಾಲೋರಿಸ್ ಇರುತ್ತವೆ. ಪ್ರೋಟೀನ್ 3.6 ಗ್ರಾಂ, ಕಾರ್ಬೋಹೈಡ್ರೇಟ್ 15.3
ಗ್ರಾಂ, ಫೈಬರ್ 3.6 ಗ್ರಾಂ.
ಪಾಲಕ್ ಚಪಾತಿ ಮಾಡಲು ಬೇಕಾಗಿರುವ ವಸ್ತುಗಳು!
ಗೋಧಿ ಹಿಟ್ಟು - 500 ಗ್ರಾಂ
ತುಪ್ಪ - 2ರಿಂದ 3 ಟೇಬಲ್ ಸ್ಪೂನ್
ಅಡುಗೆ ಎಣ್ಣೆ - 3 ಸ್ಪೂನ್
ಪಾಲಕ್ ಸೊಪ್ಪು - ಒಂದು ಕಟ್ಟು
ಉಪ್ಪು - ರುಚಿಗೆ ತಕ್ಕಷ್ಟು
ಹಸಿಮೆಣಸಿನಕಾಯಿ - ಮೂರು
ಬೆಳ್ಳುಳ್ಳಿ ಎರಡು ಎಸಳು
ಅರಿಶಿಣ - ಚಿಟಿಕೆ
ಕೊತ್ತಂಬರಿ ಪೌಡರ್ - ಚಿಟಿಕೆ
ಜೀರಿಗೆ - ಅರ್ಧ ಚಮಚ
ಪಾಲಕ್ ಚಪಾತಿ ಮಾಡುವ ವಿಧಾನ!
ಚಪಾತಿ ಮಾಡಲು ಮೊದಲು ಒಂದು ಕಟ್ಟಿನಷ್ಟು ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ
ತೊಳೆದು ಕುದಿಯುವ ನೀರಿಗೆ ಹಾಕಿ. ಐದು ನಿಮಿಷಗಳ ಬಳಿಕ ಪಾಲಾಕ್ ಸೊಪ್ಪನ್ನು ಬಿಸಿ
ನೀರಿನಿಂದ ತೆಗೆದು ತಣಿದಿರುವ ನೀರಿಗೆ ಹಾಕಿ ಇದಕ್ಕೆ ಐಸ್ ಕ್ಯೂಬ್ ಕೂಡ ಹಾಕಿದರೆ
ಪಾಲಾಕ್ ಸೊಪ್ಪು ಬಣ್ಣ ಕಳೆದುಕೊಳ್ಳುವುದಿಲ್ಲ. ಪಾಲಕ್ ಸೊಪ್ಪು ತಣ್ಣಾಗಾದ ನಂತರ
ಒಂದು ಮಿಕ್ಸರ್ ಜಾರ್ ಗೆ ಹಾಕಿ. ಅದಕ್ಕೆ ಹಸಿಮೆಣಸು, ಬೆಳ್ಳುಳ್ಳಿ, ಅರ್ಧ ಚಮಚ
ಜೀರಿಗೆ ಹಾಕಿ ರುಬ್ಬಿ. ಇದಕ್ಕೆ ನೀರನ್ನು ಹಾಕುವ ಅಗತ್ಯ ಇಲ್ಲ.
ಒಂದು ದೊಡ್ಡ ಪಾತ್ರೆಯಲ್ಲಿ ಗೋಧಿ ಹಿಟ್ಟನ್ನು ಹಾಕಿ ಅದಕ್ಕೆ ಉಪ್ಪು, ಅರಿಶಿಣ, ಕೊತ್ತಂಬರಿ ಸೊಪ್ಪು, ತುಪ್ಪ ಹಾಗೂ ಅಡುಗೆ ಎಣ್ಣೆ ಹಾಕಿ ಮಿಕ್ಸ್ ಮಾಡಿ. ಈಗ ಇದಕ್ಕೆ ರುಬ್ಬಿಟ್ಟುಕೊಂಡ ಪಾಲಾಕ್ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ ಅಗತ್ಯ ಇರುವಷ್ಟು ನೀರನ್ನು ಬಳಸಿ ಚಪಾತಿ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ.
ಚಪಾತಿ ಹಿಟ್ಟನ್ನು ಕಲಸಿದ ನಂತರ ಐದು ನಿಮಿಷ ಮುಚ್ಚಿ ಹಾಗೆಯೆ ಬಿಡಿ ಹಿಟ್ಟು ಚೆನ್ನಾಗಿ ನೆನೆದ ನಂತರ ಚಪಾತಿಯನ್ನು ಲಟ್ಟಿಸಿ ಬಿಸಿಬಿಸಿಯಾಗಿ ಚಪಾತಿ ರೆಡಿ ಮಾಡಿದರೆ ರುಚಿಕರವಾದ ಚಪಾತಿ ಸವಿಯಲು ಸಿದ್ಧ ಇದಕ್ಕೆ ಕೊಬ್ಬರಿ ಚಟ್ನಿ ಬಳಸಿದರೆ ಇನ್ನು ಟೇಸ್ಟಿ ಆಗಿರುತ್ತೆ.



Click it and Unblock the Notifications