Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ರೆಸಿಪಿ: ಟೀ ಜೊತೆ ಸವಿಯಲು ಬಿಸಿ ಬಿಸಿ ಈರುಳ್ಳಿ ಬಜ್ಜಿ
ಸಂಜೆ ಟೀ ಜೊತೆ ಸವಿಯಲು ಈರುಳ್ಳಿ ಬಜ್ಜಿ ತಿನ್ನಿಬೇಕೆಂದು ಅನಿಸುತ್ತಿದೆಯೇ? ಈ ಕೊರೊನಾ ಹೆಚ್ಚಾಗುತ್ತಿರುವುದರಿಂದ ಹೊರಗಡೆ ಅಡ್ಡಾಡುವುದು, ಹೊರಗಿನಿಂದ ಕೊಂಡು ತರುವುದು ಅಷ್ಟು ಸೂಕ್ತವಲ್ಲ, ಹಾಗಾಗಿ ಮನೆಯಲ್ಲಿಯೇ ಮಾಡಿ ಸವಿಯಿರಿ.

ಈರುಳ್ಳಿ ಬಜ್ಜಿ ಮನೆಯಲ್ಲಿಯೇ ಮಾಡುವುದರ ಮತ್ತೊಂದು ಪ್ರಯೋಜನವೆಂದರೆ ಬಳಸುವ ಎಣ್ಣೆ ಶುದ್ಧವಾಗಿರುತ್ತದೆ, ಆದ್ದರಿಂದ ಹೊಟ್ಟೆಗೆ ಹಾನಿಯುಂಟಾಗುವುದಿಲ್ಲ. ಈ ಈರುಳ್ಳಿ ಬಜ್ಜಿ ಮಾಡುವುದು ಕಷ್ಟದ ಕೆಲಸವೇನಲ್ಲ, ಸುಲಭವಾಗಿ ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Snacks
Serves: 5
-
ಬೇಕಾಗುವ ಸಾಮಗ್ರಿ
ಈರುಳ್ಳಿ 3-4
ಹಸಿ ಮೆಣಸು 3
ಸ್ವಲ್ಪ ಕರಿಬೇವು ಉಪ್ಪು
ಅರ್ಧ ಚಮಚ ಅರಿಶಿಣ ಪುಡಿ
ಗರಂ ಮಸಾಲ 1/4 ಚಮಚ
ಜೀರಿಗೆ ಪುಡಿ 1/4 ಚಮಚ
ಕಡಲೆ ಹಿಟ್ಟು 1 ಕಪ್
ಎಣ್ಣೆ 1 ಕಪ್
-
ಮಾಡುವ ವಿಧಾನ:
* ಈರುಳ್ಳಿಯನ್ನು ಉದ್ದುದ್ದವಾಗಿ ತೆಳುವಾಗಿ ಕತ್ತರಿಸಿ ಒಂದು ಒಂದು ದೊಡ್ಡ ಬೌಲ್ಗೆ ಹಾಕಿ.
* ಅದರಲ್ಲಿ ಉಳಿದೆಲ್ಲಾ ಸಾಮಗ್ರಿ ಹಾಕಿ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ.
* ತುಂಬಾ ನೀರು ಹಾಕಬೇಡಿ, ಮಿಶ್ರಣ ಸ್ವಲ್ಪ ಗಟ್ಟಿಯಾಗಿರಲಿ, ಆದರೆ ಕೈಯಿಂದ ಸುರಿಯುವಂತೆ ಇರಬೇಕು.
* ಇದೇ ಸಮಯಕ್ಕೆ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ.
* ಎಣ್ಣೆ ಕುದಿ ಬರಲು ಪ್ರಾರಂಭಿಸಿದಾಗ ಸ್ವಲ್ಪ-ಸ್ವಲ್ಪ ಮಿಶ್ರಣ ಕೈಯಿಂದ ತೆಗೆದು ಎಣ್ಣೆಗೆ ಹಾಕಿ ಮಿಶ್ರಣ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ.
* ಇಷ್ಟು ಮಾಡಿದರೆ ಟೀ ಜೊತೆ ಸವಿಯಲು ಈರುಳ್ಳಿ ಬಜ್ಜಿ ರೆಡಿ.
- ತುಂಬಾ ಗರಿ ಗರಿ ಬೇಕೆಂದರೆ ಜಾಸ್ತಿ ಹೊತ್ತು ಎಣ್ಣೆಯಲ್ಲಿ ಕರಿಯಿರಿ, ಹೀಗೆ ಕರಿದರೆ 1-2 ದಿನ ಇಡಬಹುದು, ಇಲ್ಲಾ ಅಂದರೆ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ, ಆದರೆ ಈರುಳ್ಳಿ ಹಾಗೂ ಹಿಟ್ಟು ಬೆಂದಿರಬೇಕು, ಬೇಗ ತೆಗೆಯಬೇಡಿ.
- ಸರ್ವ್ - 1 ಪ್ಲೇಟ್



Click it and Unblock the Notifications