Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಆಗಸ್ಟ್ 28ಕ್ಕೆ ಓಣಂ: ಓಣಂ ಸದ್ಯ ಏಕೆ ತುಂಬಾನೇ ಸ್ಪೆಷಲ್?
ಆಗಸ್ಟ್ 28, 29ರಂದು ಓಣಂ ಆಚರಣೆ ಮಾಡಲಾಗುತ್ತಿದೆ, ಓಣಂ ಆಚರಿಸುತ್ತಿರುವ ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು. ಓಣಂ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಪೂಕಳಂ(ಹೂವಿನ ರಂಗೋಲಿ) ಹಾಗೂ ಓಣಂ ಸದ್ಯ.
ಓಣಂ ಸದ್ಯ ಎಂದರೆ ತುಂಬಾನೇ ವಿಶೇಷವಾಗಿರುತ್ತದೆ. ಓಣಂಗಾಗಿಯೇ ಕೆಲವು ವಿಶೇಷ ಅಡುಗೆಯನ್ನು ಸಿದ್ಧಪಡಿಸುತ್ತಾರೆ. ಇಂಜಿಕರಿ (ಶುಂಠಿಯಿಂದಲೇ ಮಾಡುವ ಅಡುಗೆ), ಅವಿಲ್, ತೋರಂ ಹೀಗೆ ಸುಮಾರು 20-25ಕ್ಕೂ ಅಧಿಕ ವೆರೈಟಿ ಆಹಾರವನ್ನು ತಯಾರಿಸಲಾಗುವುದು.
ಬೆಂಗಳೂರಿನ ಹಲವು ರೆಸ್ಟೋರೆಂಟ್ಗಳಲ್ಲಿ ಓಣ ಸದ್ಯ ಸಿಗುವುದು, ಇದುವರೆಗೆ ಓಣಂ ಸದ್ಯ ಟ್ರೈ ಮಾಡದಿದ್ದರೆ ಒಮ್ಮೆ ಟ್ರೈ ಮಾಡಿ, ಆದರೆ ಹಬ್ಬಕ್ಕಾಗಿ ಮನೆಗಳಲ್ಲಿ ಮಾಡುವ ಸದ್ಯ ಇನ್ನೂ ಸ್ಪೆಷಲ್ ಆಗಿರುತ್ತದೆ. ಈ ಓಣಂ ಸದ್ಯದ ವಿಶೇಷತೆ ಹೇಳುವುದಾದರೆ...

ಓಣಂ ಹಬ್ಬಕ್ಕೆಂದೇ ತಯರಾಗುತ್ತೆ ಸ್ಪೆಷಲ್ ಅಡುಗೆಗಳು
ಈ ಓಣಂ ಹಬ್ಬಕ್ಕೆ ಒಂದೆರಡು ಐಟಂ ಮಾಡಿದರೆ ಅದು ಓಣಂ ಸದ್ಯ ಆಗುವುದಿಲ್ಲ.ಒಣಂ ಸದ್ಯ
ಎಂದರೆ ಕಡಿಮೆಯೆಂದರೂ 20ಕ್ಕೂ ಅಧಿಕ ವೆರೈಟಿಗಳಿರಬೇಕು. ಎರಡರಿಂದ ಮೂರು ವೆರೈಟಿ
ಪಾಯಸವನ್ನು ಮಾಡಲಾಗುವುದು. ತುಂಬಾ ಬಗೆಯ ತೋರಂ(ಪಲ್ಯ), ಚಿಪ್ಸ್, ಉಪ್ಪಿನಕಾಯಿ
ಜೊತೆಗೆ ಕೇರಳಿಗರು ಮಾತ್ರ ಮಾತ್ರ ಕೆಲವು ಸ್ಪೆಷಲ್ ಅಡುಗೆಗಳಾದ ಪುಳಿಯಿಂಜಿ,
ಅವಿಲ್ ಮುಂತಾದ ಖಾದ್ಯಗಳನ್ನು ತಯಾರಿಸಲಾಗುವುದು.
ಓಣಂ ಸದ್ಯವನ್ನು ಬಾಳೆಲೆಯಲ್ಲಿ ಬಡಿಸಬೇಕು
ಓಣಂ ಸದ್ಯದ ಮತ್ತೊಂದು ವಿಶೇಷತೆಯೆಂದರೆ ಇದನ್ನು ಬಾಳೆಲೆಯಲ್ಲಿ ಬಡಿಸಬೇಕು.
ಅಲ್ಲದೆ ಅಷ್ಟೊಂದು ಬೆಗೆಯ ಅಡುಗೆ ಬಡಿಸಲು ಬಾಳೆಲೆಯಲ್ಲಿಯೇ ಹಾಕಬೇಕು. ಅಲ್ಲದೆ
ಬಾಳೆಲೆ ಊಟ ಸ್ಪೆಷಲ್ ಅನಿಸುತ್ತದೆ, ಅದರಲ್ಲೂ ಹಬ್ಬದ ಊಟವೆಂದರೆ ಇನ್ನೂ ವಿಶೇಷ
ರುಚಿ ಅನಿಸುವುದು. ಒಣಂ ಸದ್ಯವನ್ನು ಬಾಳೆಲೆಯಲ್ಲಿಯೇ ಬಡಿಸಲಾಗುವುದು.
ಕೈಯಿಂದಲೇ ಸವಿಯಬೇಕು
ಇನ್ನು ಓಣಂ ಸದ್ಯವನ್ನು ನೀವು ಕೈಯಿಂದಲೇ ಸವಿಯಬೇಕು. ಕೈಯಿಂದ ಆಹಾರ ಸೇವಿಸುವುದು
ಭಾರತೀಯರ ಆಹಾರಕ್ರಮ. ಸಾಮಾನ್ಯವಾಗಿ ಹಬ್ಬದ ಅಡುಗೆಗಳನ್ನು ನಾವು ಕೈಯಿಂದಲೇ
ಸವಿಯಬೇಕು, ಅದರಲ್ಲೂ ಬಾಳೆಲೆ ಊಟವೆಂದರೆ ಕೈಯಿಂದಲೇ ಸವಿಯಬೇಕು. ವೆಸ್ಟರ್ನ್
ಕಲ್ಚರ್ ನಮ್ಮ ಆಹಾರಶೈಲಿಗೆ ಸೂಟ್ ಅಲ್ಲ, ಆದರೂ ಕೆಲವರು ಸ್ಪೂನ್ ಎಲ್ಲಾ
ಬಳಸುತ್ತಾರೆ, ಆದರೆ ಕೈಯಲ್ಲಿ ತಿನ್ನುವ ರುಚಿ ಸ್ಪೂನ್ನಲ್ಲಿ ತಿಂದರೆ
ಸಿಗುವುದೇ?
ಓಣಂ ಹಬ್ಬದಲ್ಲಿ ಇನ್ನು ಡ್ರೆಸ್ಸಿಂಗ್ ಸ್ಟೈಲ್ ಕೂಡ ಭಿನ್ನವಾಗಿರುತ್ತದೆ. ಕೇರಳದ ಸಾಂಪ್ರದಾಯಕ ಉಡುಗೆಯನ್ನು ಹೆಚ್ಚಾಗಿ ಧರಿಸುತ್ತಾರೆ. ಅಲ್ಲದೆ ಈ ದಿನ ಕೇರಳದ ಸಂಪ್ರದಾಯಕ ನೃತ್ಯ, ಕ್ರೀಡೆ(ದೋಣಿ ಸ್ಪರ್ಧೆ) ಎಲ್ಲವೂ ಇರುತ್ತದೆ . ಕೇರಳದ ಸಂಸ್ಕೃತಿಯನ್ನು ಪ್ರತಿನಿಧಿಸುವಂತಿರುತ್ತದೆ ಓಣಂ ಹಬ್ಬ....



Click it and Unblock the Notifications