Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರುಚಿಯಾದ ಪ್ರಾನ್ ಚಿಲ್ಲಿ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:
* 1 ಕೆಜಿ ಸೀಗಡಿ ಮೀನು (ಪ್ರಾನ್)
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
* 2 ಈರುಳ್ಳಿ
* 2 ದುಂಡು ಮೆಣಸಿನಕಾಯಿ
* ಹಸಿ ಮೆಣಸಿನ ಕಾಯಿ 1-2
* 2 ಚಮಚ ಕರಿಮೆಣಸಿನ ಪುಡಿ
* 1 ಚಮಚ ಸೋಯಾ ಸಾಸ್
* ಒಂದು ಚಿಕ್ಕ ಈರುಳ್ಳಿ
* 4 ಚಮಚ ಮೈದಾ
* 4 ಚಮಚ ಜೋಳದ ಹಿಟ್ಟು
* 4-6 ಎಸಳು ಬೆಳ್ಳುಳ್ಳಿ
* 2 ಮೊಟ್ಟೆ
* ಚಿಟಿಕೆಯಷ್ಟು ಅಜೈನ್
* ರುಚಿಗೆ ತಕ್ಕ ಉಪ್ಪು
* ಕರಿಮೆಣಸಿನ ಪುಡಿ
* ಎಣ್ಣೆ
ತಯಾರಿಸುವ ವಿಧಾನ:
1. ಈರುಳ್ಳಿ, ದುಡು ಮೆಣಸಿನಕಾಯಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಮತ್ತು ಶುಂಠಿ ಇವುಗಳನ್ನು ಚಿಕ್ಕದಾಗಿ ಕತ್ತರಿಸಬೇಕು.
2. ಸೀಗಡಿ ಮೀನನ್ನು ಶುಚಿ ಮಾಡಬೇಕು.
3. ಮೈದಾ, ಜೋಳದ ಹಿಟ್ಟು, ಕರಿಮೆಣಸಿನ ಪುಡಿ, ಮೊಟ್ಟೆ ಹಾಕಿ ಚೆನ್ನಾಗಿ ಕದಡಬೇಕು.
4. ಶುಚಿ ಮಾಡಿದ ಸೀಗಡಿ ಮೀನನ್ನು ಮೈದಾ, ಮೊಟ್ಟೆ , ಜೋಳದ ಹಿಟ್ಟು ಹಾಕಿ ತಯಾರಿಸಿದ ಮಿಶ್ರಣದಲ್ಲಿ ಹಾಕಬೇಕು.
5. ಒಂದು ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಅದರಲ್ಲಿ ಮಿಶ್ರಣಕ್ಕೆ ಹಾಕಿದ ಮೀನನ್ನು ಕಾದ ಎಣ್ಣೆಗೆ ಹಾಕಬೇಕು.
6. ನಂತರ ಅದನ್ನು ಕಂದು ಬಣ್ಣ ಬರುವವರೆಗೆ ಹುರಿದು ನಂತರ ಒಂದು ಪಾತ್ರೆಯಲ್ಲಿ ಹಾಕಿಡಬೇಕು.
7. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿದ ಶುಂಠಿ, ಹಸಿ ಮೆಣಸಿನ ಕಾಯಿ, ಈರುಳ್ಳಿ, ದುಂಡು ಮೆಣಸಿನಕಾಯಿ, ಬೆಳ್ಳುಳ್ಳಿ ಚೆನ್ನಾಗಿ ಹುರಿಯಬೇಕು. ನಂತರ ಹುರಿದ ಸೀಗಡಿ ಮೀನನ್ನು ಅದರಲ್ಲಿ ಹಾಕಬೇಕು. ನಂತರ ರುಚಿಗೆ ತಕ್ಕ ಉಪ್ಪು, ಕರಿಮೆಣಸಿನ ಪುಡಿ, ಚಿಟಿಕೆಯಷ್ಟು ಅಜ್ವೈನ್ ಮತ್ತು ಸೋಯಾ ಸಾಸ್ ಚೆನ್ನಾಗಿ ಮಿಶ್ರ ಮಾಡಿ ಹುರಿಯಿಂದ ತೆಗೆದರೆ ಪ್ರಾನ್ ಚಿಲ್ಲಿ ರೆಡಿ.



Click it and Unblock the Notifications
