Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಆಲೂ ಎಗ್ ಫ್ರೈ ರೆಸಿಪಿ
ದೋಸೆಗೆ ಆಲೂಗೆಡ್ಡೆ ಬಾಜಿ ಮಾಡುವುದು ಸಹಜ. ಆದರೆ ದೋಸೆ ಮಾಡಿದಾಗೆಲ್ಲಾ ಆಲೂಗೆಡ್ಡೆ ಬಾಜಿ ಮಾಡಿ ತಿಂದರೆ ಒಂದೇ ರುಚಿಯ ಅಡುಗೆ ತಿನ್ನಬೇಕಾಗುತ್ತದೆ. ಆಲೂಗೆಡ್ಡೆ ಬಾಜಿ ಬದಲು ದೋಸೆ ಅಥವಾ ಚಪಾತಿ ಜೊತೆ ತಿನ್ನಲು ಬಾಜಿಗಿಂತ ರುಚಿಕರವಾದ ಮತ್ತು ಆರೋಗ್ಯಕರವಾದ ಆಹಾರ ತಯಾರಿಸಬಹುದು. ಇವತ್ತು ನಾವು ಮೊಟ್ಟೆ ಮತ್ತು ಆಲೂಗೆಡ್ಡೆ ಬಳಸಿ ಆಲೂ ಎಗ್ ಫ್ರೈ ಮಾಡುವ ವಿಧಾನದ ಬಗ್ಗೆ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು:
* ಮೊಟ್ಟೆ 4
* ಆಲೂಗೆಡ್ಡೆ 3
* ಈರುಳ್ಳಿ 1
* ಚಕ್ಕೆ- 2 ಕಡ್ಡಿ
* ಬೆಳ್ಳುಳ್ಳಿ ಎಸಳು 5-6
* ಕೆಂಪು ಮೆಣಸಿನ ಕಾಯಿ (ಖಾರಕ್ಕೆ ತಕ್ಕಷ್ಟು)
* ಮೆಂತೆ 1 ಚಮಚ
* ಚಿಟಿಕೆಯಷ್ಟು ಅರಿಶಿಣ
* ಎಣ್ಣೆ 3-4 ಚಮಚ
* ರುಚಿಗೆ ತಕ್ಕ ಉಪ್ಪು
* ಸ್ವಲ್ಪ ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ:
1. ಮೊಟ್ಟೆಯನ್ನು ಬೇಯಿಸಿ ಅದರ ಸಿಪ್ಪೆ ಸುಲಿಯಬೇಕು. ಪ್ರತಿಯೊಂದು ಮೊಟ್ಟೆಯನ್ನು ಸಮ ಅರ್ಧ ಭಾಗವಾಗಿ ಕತ್ತರಿಸಬೇಕು.
2. ಆಲೂಗೆಟ್ಟೆಯನ್ನು ಉಪ್ಪು ಹಾಕಿ ಬೇಯಿಸಿ ಅದರ ಸಿಪ್ಪೆ ಸುಲಿದು 4 ಸಮ ಭಾಗಗಳಾಗಿ ಕತ್ತರಿಸಬೇಕು.
3. ಕೆಂಪು ಮೆಣಸಿನ ಕಾಯಿ, ಬೆಳ್ಳುಳ್ಳಿ, ಚಕ್ಕೆ, ಅರ್ಧ ಚಮಚ ಮೆಂತೆ, ಚಿಟಿಕೆಯಷ್ಟು ಅರಿಶಿಣ ಹಾಕಿ ಪೇಸ್ಟ್ ರೀತಿ ಮಾಡಬೇಕು.
4. ಈರುಳ್ಳಿಯನ್ನು ಉದ್ದುದ್ದವಾಗಿ, ತೆಳ್ಳಗೆ ಕತ್ತರಿಸಬೇಕು.
5. ಈಗ ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಬೇಕು. ಎಣ್ಣೆ ಬಿಸಿಯಾದಾಗ ಮೆಂತೆ ಹಾಕಿ, ಉಳಿದ ಅರ್ಧ ಚಮಚ ಮೆಂತೆ ಹಾಕಿ, ಮೆಂತೆ ಕಂದು ಬಣ್ಣಕ್ಕೆ ಬರುವಾಗ ಕತ್ತರಿಸಿದ ಈರುಳ್ಳಿಯನ್ನು ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
6. ನಂತರ ರುಬ್ಬಿದ ಪೇಸ್ಟ್ ಹಾಕಿ ಕತ್ತರಿಸಿದ ಆಲೂಗೆಡ್ಡೆ, ರುಚಿಗೆ ತಕ್ಕ ಉಪ್ಪು, ಅರ್ಧ ಲೋಟ ನೀರು ಸೇರಿಸಿ ಮಿಶ್ರಣ ಗಟ್ಟಿಯಾಗುವವರೆಗೆ ಅಂದರೆ ಗ್ರೇವಿ ರೀತಿ ಆಗುವವರೆಗೆ ಕುದಿಸಬೇಕು. ನಂತರ ಗ್ರೇವಿಗೆ ಕತ್ತರಿಸಿದ ಮೊಟ್ಟೆ ಹಾಕಿ ಮಿಶ್ರಣವನ್ನು ತಿರುಗಿಸಿ ಉರಿಯಿಂದ ತೆಗೆಯಬೇಕು.
7. ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಆಲೂ ಎಗ್ ಫ್ರೈ ರೆಡಿ.
ಇದನ್ನು ದೋಸೆ, ಪೂರಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
