Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಎಗ್ ಕೋಫ್ತಾ- ಮೊಘಲಾಯಿ ನಾನ್ ವೆಜ್ ಸ್ಪೆಷಲ್
ಖೀಮಾ ಚಿಕನ್ ಬಳಸಿ ಮಾಡುವ ಈ ಎಗ್ ಕೋಫ್ತಾದ ರುಚಿ ನೋಡಿದ್ದೀರಾ? ಇಲ್ಲ ಅಂದರೆ ತಡಬೇಡಿ ಇವತ್ತೇ ಈ ಮೊಘಲಾಯಿ ರೆಸಿಪಿ ಟ್ರೈ ಮಾಡಿ. ಮೊಟ್ಟೆಯನ್ನು ಹಾಗೇ ಬೇಯಿಸಿ ಮಾಡುವ ಸಾರಿಗಿಂತ ಚಿಕನ್ ಖೀಮಾದಿಂದ ಎಗ್ ಕೋಫ್ತಾ ಮಾಡಿ ಅದರಿಂದ ಮಾಡುವ ಈ ಮೊಟ್ಟೆ ಪದಾರ್ಥವಂತೂ ಹೆಚ್ಚು ಸ್ವಾದಿಷ್ಟಕರವಾಗಿರುತ್ತದೆ.
ಈ ಎಗ್ ಕೋಫ್ತಾ ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಚಿಕನ್ ಕಾಲು ಕೆಜಿ(minced)
ಕಡಲೆ ಹಿಟ್ಟು 2 ಚಮಚ
ಕೊತ್ತಂಬರಿ ಪುಡಿ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಬೇಯಿಸಿದ ಮೊಟ್ಟೆ 4
ಜೋಳದ ಹಿಟ್ಟು 1 ಚಮಚ
ಎಣ್ಣೆ 1 ಕಪ್ (ಡೀಪ್ ಫ್ರೈಗೆ)
ಗ್ರೇವಿಗೆ ಸಾಮಾಗ್ರಿಗಳು
ದೊಡ್ಡ ಗಾತ್ರದ ಈರುಳ್ಳಿ 2(ಕತ್ತರಿಸಿದ್ದು)
ಶುಂಠಿ, ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಪುದೀನಾ ಎಲೆ 1 ಚಮಚ(ಚಿಕ್ಕದಾಗಿ ಕತ್ತರಿಸಿದ್ದು)
ಕೊತ್ತಂಬರಿ ಪುಡಿ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಖಾರದ ಪುಡಿ 1 ಚಮಚ(ಖಾರ ಬೇಡವೆಂದರೆ ಅರ್ಧ ಚಮಚ ಹಾಕಿ)
ಬಾದಾಮಿ 3-4
ಅರ್ಧ ಟೊಮೆಟೊ (ಬಾದಾಮಿ ಮತ್ತು ಟೊಮೆವನ್ನು ಸೇರಿಸಿ ಪೇಸ್ಟ್ ಮಾಡಿಡಿ)
ಮೊಸರು 2 ಚಮಚ
ಮೆಂತೆ ಬೀಜ 1 ಚಮಚ
ಚಕ್ಕೆ (ಒಂದು ಇಂಚಿನಷ್ಟು ದೊಡ್ಡದ್ದು)
ಲವಂಗ 2
ಹಸಿ ಮೆಣಸಿನಕಾಯಿ 2-3
ಸಕ್ಕರೆ ಅರ್ಧ ಚಮಚ
ಎಣ್ಣೆ 2 ಚಮಚ
ಕರಿ ಬೇವಿನ ಎಲೆ
ರುಚಿಗೆ ತಕ್ಕ ಉಪ್ಪು
ನೀರು 1 ಕಪ್
ತಯಾರಿಸುವ ವಿಧಾನ:
* ಚಿಕನ್ ಗೆ ಉಪ್ಪು, ಅರಿಶಿಣ, ಕಡಲೆ ಹಿಟ್ಟು, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಜೋಳದ ಹಿಟ್ಟು, ಕಡಲೆ ಹಿಟ್ಟು, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಇದನ್ನು ನಾಲ್ಕು ಸಮ ಭಾಗಗಳಾಗಿ ವಿಂಗಡಿಸಿ.
* ಈಗ ಬೇಯಿಸಿದ ಮೊಟ್ಟೆ ತೆಗೆದು ಅದಕ್ಕೆ ಈ ಚಿಕನ್ ಮಿಕ್ಸ್ ಅನ್ನು ಮೆತ್ತಿ, ಅದೇ ರೀತಿ ಉಳಿದ 3 ಮೊಟ್ಟೆಗಿಗೆ ಮಾಡಿ. ಮೊಟ್ಟೆ ಖೀಮಾದಿಂದ ಸಂಪೂರ್ಣವಾಗಿ ಮುಚ್ಚಿರಲಿ.
* ಈಗ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಎಗ್ ಕೋಫ್ತಾ ಹಾಕಿ ಫ್ರೈ ಮಾಡಿ, ಮಾಂಸ ಬೆಂದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಅವುಗಳನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಿ.
* ಈಗ ಮತ್ತೊಂದು ಪಾತ್ರೆಯನ್ನು ಉರಿ ಮೇಲೆ ಇಟ್ಟು 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕರಿಬೇವಿನ ಎಲೆ ಹಾಕಿ, ಮೆಂತೆ, ಚಕ್ಕೆ, ಲವಂಗವನ್ನು ಜಜ್ಜಿ ಹಾಕಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ಈಗ ಬಾದಾಮಿ, ಟೊಮೆಟೊ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ. ಹಸಿ ಮೆಣಸಿನಕಾಯಿ ಹಾಕಿ 2 ನಿಮಿಷ ಆಡಿಸಿ, ನಂತರ ಕೊತ್ತಂಬರಿ ಪುಡಿ, ಖಾರದ ಪುಡಿ, ಗರಂ ಮಸಾಲ ಹಾಕಿ, ಪುದೀನಾ ಎಲೆ ಹಾಕಿ, ನಂತರ ಸಕ್ಕರೆ ಸೇರಿಸಿ ಮತ್ತೆ 2 ನಿಮಿಷ ಹುರಿಯಿರಿ, ಈಗ ರುಚಿಗೆ ತಕ್ಕ ಉಪ್ಪು, ಮೊಸರು ಸೇರಿಸಿ, ಮಿಶ್ರಣವನ್ನು ಒಮ್ಮೆ ಮಿಕ್ಸ್ ಮಾಡಿ, 1 ಕಪ್ ನೀರು ಸೇರಿಸಿ ಕುದಿಸಿ. ಮಿಶ್ರಣ ಚೆನ್ನಾಗಿ ಕುದಿ ಬಂದ ಮೇಲೆ ತಯಾರಿಸಿಟ್ಟ ಎಗ್ ಕೋಫ್ತಾ ಹಾಕಿ( ಕೋಫ್ತಾವನ್ನು ಎರಡು ಭಾಗವಾಗಿ ಕತ್ತರಿಸಿ ಹಾಕಿ) 10 ನಿಮಿಷ ಕಡಿಮೆ ಹುರಿಯಲ್ಲಿ ಬೇಯಿಸಿ.
ಇಷ್ಟು ಮಾಡಿದರೆ ಎಗ್ ಕೋಫ್ತಾ ರೆಡಿ.



Click it and Unblock the Notifications

