Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಚಿಕನ್ ಸ್ಪೆಷಲ್ - ಚಿಕನ್ ಹಲೀಮ್

ಈ ರಂಜಾನ್ ಗೆ ವಿಶೇಷ ಅಡುಗೆ ಮಾಡುವಾಗ ಚಿಕನ್ ಹಲೀಮ್ ತಯಾರಿಸಿದರೆ ಹಬ್ಬದ ಅಡುಗೆ ಮತ್ತಷ್ಟು ಸ್ಪೆಷಲ್ ಅನಿಸುವುದು.
ಬೇಕಾಗುವ ಸಾಮಾಗ್ರಿಗಳು:
1 ಕೆಜಿ ಬೋನ್ ಲೆಸ್ ಚಿಕನ್
2 ಕಪ್ ಗೋಧಿ ( ಒಂದು ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿರಬೇಕು)
3 ಈರುಳ್ಳಿ
ಅರ್ಧ ಕಪ್ ಹೆಸರು ಬೇಳೆ ( ಬೇಯಿಸಿದ್ದು)
ಒಂದು ಚಮಚ ಶುಂಠಿ ಪೇಸ್ಟ್
ಒಂದು ಗಾರ್ಲಿಕ್ ಪೇಸ್ಟ್
2 ಚಮಚ ಕೆಂಪು ಮೆಣಸಿನ ಪುಡಿ
2 ಚಮಚ ಕೊತ್ತಂಬರಿ ಪುಡಿ
1 ಚಮಚ ಅರಿಶಿಣ
ರುಚಿಗೆ ತಕ್ಕ ಉಪ್ಪು
1 ಚಮಚ ಗರಂ ಮಸಾಲ
ಅರ್ಧ ಚಮಚ ಕರಿಮೆಣಸಿಣ ಪುಡಿ
2 ಇಂಚಿನಷ್ಟು ಉದ್ದದ ಚಕ್ಕೆ
2 ಪಲಾವ್ ಎಲೆ
ಅರ್ಧಚಮಚ ಜೀರಿಗೆ ಪುಡಿ
1 ಕಪ್ ಎಣ್ಣೆ
ಅರ್ಧ ಕಪ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಅರ್ಧ ಕಪ್ ಕತ್ತರಿಸಿದ ಪುದೀನಾ ಎಲೆ
ಚಿಕ್ಕದಾಗಿ ಕತ್ತರಿಸಿದ ಶುಂಠಿ2 ಚಮಚ
2 ನಿಂಬೆ ಹಣ್ಣು
ತಯಾರಿಸುವ ವಿಧಾನ:
1. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಬೇಕು. ಕಾದ ಎಣ್ಣೆಗೆ ಈರುಳ್ಳಿ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಹುರಿದ ಈರುಳ್ಳಿಯನ್ನು ಒಂದು ಪೇಪರ್ ನಲ್ಲಿ ಹರಡಿ ಕೈಯಿಂದ ಪುಡಿ ಪುಡಿ ಮಾಡಬೇಕು.
2. ನಂತರ ಒಂದು ದೊಡ್ಡ ಪಾತ್ರೆಯಲ್ಲಿ 6 ಕಪ್ ನೀರು ಹಾಕಿ ಅದರಲ್ಲಿ ತೊಳೆದ ಗೋಧಿ ಹಾಕಿ ಅರ್ಧ ಗಂಟೆ ಬೇಯಿಸಬೇಕು. ಗೋಧಿ ಮೆತ್ತಗಾದ ಮೇಲೆ ಉರಿಯಿಂದ ತೆಗೆಯಬೇಕು.
3. ಬೇಯಿಸಿದ ಬೇಳೆಯನ್ನು ಮಿಕ್ಸಿಯಲ್ಲಿ ಅರೆದು ಒಂದು ಕಡೆ ಇಡಬೇಕು.
4. ಈಗ ಒಂದು ದೊಡ್ಡ ಪಾತ್ರೆಯಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು, ಪಲಾವ್ ಎಲೆ, ಜೀರಿಗೆ, ಚಕ್ಕೆ, ಗರಂ ಮಸಾಲ, ಕರಿಮೆಣಸಿನ ಪುಡಿ ಹಾಕಿ 1 ಒಂದು ನಿಮಿಷ ಸೌಟ್ ನಿಂದ ಅಡಿಸಿ ಅರ್ಧ ಕಪ್ ನೀರು ಹಾಕಿ 2 ನಿಮಿಷ ಕುದಿಸಬೇಕು. ಈಗ ಶುಚಿ ಮಾಡಿದ ಬೋನ್ ಲೆಸ್ ಚಿಕನ್ ಮತ್ತು ಅರೆದ ಬೇಳೆಯನ್ನು ಹಾಕಬೇಕು. ನಂತರ ಬೇಯಿಸಿದ ಗೋಧಿ ಮತ್ತು ಎಣ್ಣೆ ಹಾಕಿ ಹಾಕಿ ಬೇಯಿಸಬೇಕು (ಉಪ್ಪು ಸರಿಯಾದ ಅಳತೆಯಲ್ಲಿ ಇದೆಯೇ ಎಂದು ನೋಡಬೇಕು).
5. ನಂತರ ಆಗಾಗ ಸೌಟ್ ನಿಂದ ಮಿಶ್ರಣವನ್ನು ಆಡಿಸುತ್ತಾ ಈ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಬೇಕು.
6. ನಂತರ ಇದನ್ನು ಉರಿಯಿಂದ ತೆಗೆದು ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸೊಪ್ಪು, ಹುರಿದ ಈರುಳ್ಳಿ ಮತ್ತು ಎಣ್ಣೆಯಲ್ಲಿ ಹುರಿದ ಶುಂಠಿ ಮತ್ತು ಹಸಿಮೆಣಸಿನಕಾಯಿ ಹಾಕಿ ಮಿಶ್ರ ಮಾಡಿ ಸ್ವಲ್ಪ ನಿಂಬೆ ರಸ ಹಿಂಡಿದರೆ ರುಚಿಕರವಾದ ಚಿಕನ್ ಹಲೀಮ್ ರೆಡಿ.



Click it and Unblock the Notifications
