Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಚಿಕನ್ ಡ್ರಮ್ ಸ್ಟಿಕ್ ಗೆ ಸರಳ ಸಾಮಾಗ್ರಿಗಳು ಸಾಕು
ಚಿಕನ್ ಡ್ರಮ್ ಸ್ಟಿಕ್ ತಯಾರಿಸಲು ಅದಕ್ಕಾಗಿಯೇ ಸ್ಪೆಷೆಲ್ ಮಸಾಲ ಹಾಗೂ ಸಾಮಾಗ್ರಿಗಳನ್ನು ಕೊಳ್ಳಬೇಕಾಗಿಲ್ಲ. ಮನೆಯಲ್ಲಿ ಸಾಮಾನ್ಯ ಅಡುಗೆಗೆ ಬಳಸುವ ಸಾಮಾಗ್ರಿಗಳನ್ನು ಬಳಸಿ ಸವಿರುಚಿಯ ಡ್ರಮ್ ಸ್ಟಿಕ್ ತಯಾರಿಸಬಹುದು.
ಇದನ್ನು ಮಾಡುವ ವಿಧಾನ ಕೂಡ ಸರಳವಾಗಿದ್ದು , ಹೇಗೆ ಮಾಡುವುದು ಎಂದು ಈ ಕೆಳಗೆ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಾಗ್ರಿಗಳು
* ಚಿಕನ್ ಲೆಗ್ ಪೀಸ್ 10
* ಶುಂಠಿ ಚಮಚ 1 ಚಮಚ
* ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಖಾರದ ಪುಡಿ 1 ಚಮಚ
* ಕರಿ ಮೆಣಸಿನ ಪುಡಿ 1 ಚಮಚ
* ಹಸಿ ಮೆಣಸಿನ ಕಾಯಿ ಪೇಸ್ಟ್ 2-3
* ವಿನಿಗರ್ 1 ಚಮಚ
* ಕೊತ್ತಂಬರಿ ಸೊಪ್ಪು 2 ಚಮಚ
* ಕಡಲೆ ಹಿಟ್ಟು 1 ಕಪ್
* ಬ್ರೆಡ್ ಚುರು 1 ಕಪ್
* ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
* ಚಿಕನ್ ಅನ್ನು ಸ್ವಲ್ಪ ಉದ್ದದ ತುಂಡುಗಳಾಗಿ ಕತ್ತರಿಸಿ, ಸ್ವಚ್ಛ ಮಾಡಿ ಅದಕ್ಕೆ ವಿನಿಗರ್ ಸವರಿ 10 ನಿಮಿಷ ಇಡಿ.
* ಇದೇ ಸಮಯದಲ್ಲಿ ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಪೇಸ್ಟ್ ಮಾಡಿ. ನಂತರ ಈ ಪೇಸ್ಟ್ ಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕರಿ ಮೆಣಸಿನ ಪುಡಿ, ಖಾರದ ಪುಡಿ ಹಾಕಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ, ಇದರಲ್ಲಿ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಕಲೆಸಿ 1 ಗಂಟೆ ಇಡಿ.
* ಕಡಲೆ ಹಿಟ್ಟಿಗೆ ನೀರು ಹಾಕಿ ಸ್ವಲ್ಪ ಗಟ್ಟಿಯಾಗಿ ಕಲೆಸಿ.
* ಈಗ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಎಣ್ಣೆ ಕುದಿಯುವಾದ ಚಿಕನ್ ತುಂಡುಗಳನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ, ಬ್ರೆಡ್ ಚುರುಗಳಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆದರೆ ರುಚಿ-ರುಚಿಯಾದ ಚಿಕನ್ ಡ್ರಮ್ ಸ್ಟಿಕ್ ರೆಡಿ.



Click it and Unblock the Notifications
