For Quick Alerts
ALLOW NOTIFICATIONS  
For Daily Alerts

ಬ್ರೆಡ್ ಇಲ್ಲದೇ, ಸ್ಯಾಂಡ್‌ವಿಚ್ ಮಾಡೋದು ಹೇಗೆ ಗೊತ್ತಾ?

Posted By:
|

ಸ್ಯಾಂಡ್‌ವಿಚ್ ಅಂದಾಕ್ಷಣ ಕಣ್ಣ ಮುಂದೆ ಬರುವ ಚಿತ್ರ ಬ್ರೆಡ್. ಏಕೆಂದರೆ, ಹೆಚ್ಚಿನ ಎಲ್ಲಾ ಸ್ಯಾಂಡ್‌ವಿಚ್‌ಗಳನ್ನು ಬ್ರೆಡ್‌ನಿಂದಲೇ ತಯಾರು ಮಾಡೋದು. ಆದರೆ, ಬ್ರೆಡ್ ಇಷ್ಟಿವಿಲ್ಲದವರು ಸ್ಯಾಂಡ್‌ವಿಚ್ ಸವಿಯಲು ಏನು ಮಾಡೋದು ಅಂತ ಯೋಚನೆ ಮಾಡ್ತೀದ್ದೀರಾ?. ಅಂತಹವಿರಿಗೆ ನಾವಿಂದು ಸ್ಪೆಷಲ್, ಬ್ರೆಡ್ ಇಲ್ಲದೇ ಸ್ಯಾಂಡ್‌ವಿಚ್ ಹೇಗೆ ಮಾಡಬಹುದು ಎಂಬುದನ್ನು ತಿಳಿಸಿಕೊಡಲಿದ್ದೇವೆ. ಇದಕ್ಕೆ ಯಾವುದೇ ಬ್ರೆಡ್ ಅವಶ್ಯಕತೆ ಇಲ್ಲ, ಮನೆಯಲ್ಲಿ ಸಿಗೋ ಪದಾರ್ಥಗಳಿಂದ, ಸುಲಭವಾಗಿ ಸ್ಯಾಂಡ್‌ವಿಚ್‌ ಮೇಕರ್‌ನಿಂದ ತಯಾರಿಸಬಹುದು. ಅದು ಹೇಗೆ ಎಂಬುದನ್ನು ನೋಡೋಣ.

No Bread Sandwich Recipe in Kannada
ಬ್ರೆಡ್ ಇಲ್ಲದೇ, ಸ್ಯಾಂಡ್‌ವಿಚ್ ಮಾಡೋದು ಹೇಗೆ ಗೊತ್ತಾ?
ಬ್ರೆಡ್ ಇಲ್ಲದೇ, ಸ್ಯಾಂಡ್‌ವಿಚ್ ಮಾಡೋದು ಹೇಗೆ ಗೊತ್ತಾ?
Prep Time
5 Mins
Cook Time
10M
Total Time
15 Mins

Recipe By: Shreeraksha

Recipe Type: Vegetarian

Serves: 2

Ingredients
  • ಬೇಕಾಗುವ ಪದಾರ್ಥಗಳು:

    1 ಕಪ್ ರವೆ

    ½ ಕಪ್ ಮೊಸರು

    1 ಚಮಚ ಚಿಲ್ಲಿ ಫ್ಲೇಕ್ಸ್

    ½ ಚಮಚ ಉಪ್ಪು

    ½ ಕಪ್ ನೀರು

    ½ ಕ್ಯಾರೆಟ್

    ½ ಈರುಳ್ಳಿ

    2 ಚಮಚ ಸ್ವೀಟ್ ಕಾರ್ನ್

    ½ ಕ್ಯಾಪ್ಸಿಕಂ

    1 ಚಮಚ ಕೊತ್ತಂಬರಿ ಸೊಪ್ಪು

    ½ ಟೀಸ್ಪೂನ್ ಈನೋ ಫ್ರೂಟ್ ಸಾಲ್ಟ್

    ಬೆಣ್ಣೆ

    1 ಚೀಸ್ ಸ್ಲೈಸ್

Red Rice Kanda Poha
How to Prepare
  • ತಯಾರಿಸುವ ವಿಧಾನ:

    ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 1 ಕಪ್ ರವೆ, ½ ಕಪ್ ಮೊಸರು, 1 ಟೀಸ್ಪೂನ್ ಚಿಲ್ಲಿ ಫ್ಲೇಕ್ಸ್ ಮತ್ತು ½ ಟೀಸ್ಪೂನ್ ಉಪ್ಪು ಹಾಗೂ ನೀರನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.

    ಈ ಇದಕ್ಕೆ ½ ಕ್ಯಾರೆಟ್, ½ ಈರುಳ್ಳಿ, 2 ಚಮಚ ಸ್ವೀಟ್ ಕಾರ್ನ್, ½ ಕ್ಯಾಪ್ಸಿಕಂ ಮತ್ತು 1 ಚಮಚ ಕೊತ್ತಂಬರಿ ಸೇರಿಸಿ, ದಪ್ಪ ಹಿಟ್ಟು ಆಗುವಂತೆ ಚೆನ್ನಾಗಿ ಮಿಶ್ರಣ ಮಾಡಿ, 10 ನಿಮಿಷಗಳ ಕಾಲ ಹಾಗೆಯೇ ಬಿಡಿ.

    ಮುಂದೆ, ಇದಕ್ಕೆ ¼ ಕಪ್ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

    ಈಗ ಸ್ವಲ್ಪ ಬೆಣ್ಣೆಯೊಂದಿಗೆ ಸ್ಯಾಂಡ್ವಿಚ್ ಮೇಕರ್ ಗ್ರೀಸ್ ಮಾಡಿ.

    ಸ್ಯಾಂಡ್‌ವಿಚ್ ತಯಾರಿಸುವ ಮೊದಲು, ಅದಕ್ಕೆ ½ ಟೀಸ್ಪೂನ್ ಈನೋ ಫ್ರೂಟ್ ಸಾಲ್ಟ್ ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.

    ಒಮ್ಮೆ ಬ್ಯಾಟರ್ ನೊರೆಯಾಗ ತೊಡಗಿದ ಮೇಲೆ, ಒಂದು ಚಮಚ ಬ್ಯಾಟರ್ ಅನ್ನು ಸ್ಯಾಂಡ್‌ವಿಚ್ ಮೇಕರ್‌ಗೆ ಹಾಕಿ, ಅದರ ಮೇಲೆ ಚೀಸ್ ಸ್ಲೈಸ್ ಇಟ್ಟು, ಮತ್ತೆ ಅದರ ಮೇಲೆ ಬ್ಯಾಟರ್ ಹಾಕಿ.

    ಈಗ ಸ್ಯಾಂಡ್‌ವಿಚ್ ಮೇಕರ್‌ನ ಮುಚ್ಚಳವನ್ನು ಮುಚ್ಚಿ ಮತ್ತು ಬಿಗಿಯಾಗಿ ಒತ್ತಿರಿ.

    ಸ್ಯಾಂಡ್‌ವಿಚ್ ಗೋಲ್ಡನ್ ಬ್ರೌನ್ ಆಗುವವರೆಗೆ ಗ್ರಿಲ್ ಮಾಡಿದರೆ, ಟೊಮೆಟೊ ಸಾಸ್‌ನೊಂದಿಗೆ ಸ್ಯಾಂಡ್‌ವಿಚ್ ಸವಿಯಲು ಸಿದ್ಧ.

Instructions
Nutritional Information
  • People - 2
  • ಕ್ಯಾಲೋರಿಗಳು - 133 ಕೆ.ಸಿ.ಎಲ್
  • ಕೊಬ್ಬು - 1 ಗ್ರಾಂ
  • ಪ್ರೋಟೀನ್ - 6 ಗ್ರಾಂ
  • ಕಾರ್ಬೋಹೈಡ್ರೇಟ್ಗಳು - 24 ಗ್ರಾಂ
[ 5 of 5 - 42 Users]
Story first published: Tuesday, March 15, 2022, 14:12 [IST]
X
Desktop Bottom Promotion