For Quick Alerts
ALLOW NOTIFICATIONS  
For Daily Alerts

ಈ ಸಲದ ಸಂಕ್ರಾಂತಿ ಹಬ್ಬಕ್ಕೆ ಹೆಸರುಕಾಳಿನ ಲಡ್ಡು ಟ್ರೈ ಮಾಡಿ

Posted By:
|

ಹಬ್ಬ ಅಂದ್ರೆ, ಸಿಹಿತಿಂಡಿ ಇರಲೇಬೇಕು. ಇಲ್ಲವಾದಲ್ಲಿ ಹಬ್ಬ ಅಪೂರ್ಣ ಎನಿಸಿಕೊಳ್ಳುವುದು. ಆ ಸಿಹಿತಿಂಡಿಗಳನ್ನು ಹೊರಗಿನಿಂದ ತರುವುದಕ್ಕಿಂತ ನಾವೇ ಸ್ವತಃ ಮನೆಯಲ್ಲಿಯೇ ತಯಾರಿಸಿದರೆ, ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಗುವುದು. ಅದಕ್ಕಾಗಿ ನಾವಿಂದು ಬಹಳ ಸುಲಭ ಹಾಗೂ ಬೇಗನೇ ತಯಾರಿಸಬಹುದಾದಂತಹ ಲಡ್ಡು ಮಾಡುವ ವಿಧಾನವನ್ನು ತಿಳಿಸಲಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಮಕರಸಂಕ್ರಾಂತಿ ಬೇರೆ ಇದೆ. ಆ ದಿನದಂದು ಈ ಹೆಸರುಬೇಳೆಯ ಲಡ್ಡು ತಯಾರಿಸಿ, ನಿಮ್ಮ ಮನೆಯವರಿಗೆ ಬಡಿಸಿ.

Moong Dal Ladoo Recipe in Kannada

ಹೆಸರುಕಾಳಿನ ಲಡ್ಡು ತಯಾರಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:

ಈ ಸಲದ ಸಂಕ್ರಾಂತಿ ಹಬ್ಬಕ್ಕೆ ಹೆಸರುಕಾಳಿನ ಲಡ್ಡು ಟ್ರೈ ಮಾಡಿ
ಈ ಸಲದ ಸಂಕ್ರಾಂತಿ ಹಬ್ಬಕ್ಕೆ ಹೆಸರುಕಾಳಿನ ಲಡ್ಡು ಟ್ರೈ ಮಾಡಿ
Prep Time
5 Mins
Cook Time
30M
Total Time
35 Mins

Recipe By: Shreeraksha

Recipe Type: Snacks

Serves: 2

Ingredients
  • ಬೇಕಾಗುವ ಪದಾರ್ಥಗಳು:

    1 ಕಪ್ ಹೆಸರುಬೇಳೆ

    ¼ ಕಪ್ ತುಪ್ಪ

    ½ ಕಪ್ ಸಕ್ಕರೆ

    3 ಏಲಕ್ಕಿ

    2 ಚಮಚ ಗೋಡಂಬಿ

    2 ಚಮಚ ಬಾದಾಮಿ

    7 ಪಿಸ್ತಾ

Red Rice Kanda Poha
How to Prepare
  • ತಯಾರಿಸುವ ವಿಧಾನ:

    ಮೊದಲನೆಯದಾಗಿ, ಬಾಣಲೆಯಲ್ಲಿ 1 ಕಪ್ ಹೆಸರುಬೇಳೆಯನ್ನು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.

    ಹಸಿವಾಸನೆ ಹೋಗುವವರೆಗೂ ಹುರಿದುಕೊಂಡು, ಸಂಪೂರ್ಣವಾಗಿ ತಣ್ಣಗಾಗಿಸಿ, ಉತ್ತಮವಾಗಿ ಪುಡಿ ಮಾಡಿ.

    ಇದನ್ನು ಒಂದು ಕಡಾಯಿಗೆ ಹಾಕಿ, ಅದಕ್ಕೆ ¼ ಕಪ್ ತುಪ್ಪ ಸೇರಿಸಿ, ಲೋ ಫ್ಲೇಮ್‌ನಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಇದು ಸುಮಾರು 10 ನಿಮಿಷಗಳನ್ನು ತೆಗೆದುಕೊಳ್ಳಬಹುದು.

    ಇದನ್ನು ಒಂದು ಬಟ್ಟಲಿಗೆ ಹಾಕಿ, ಸ್ವಲ್ಪ ತಣ್ಣಗಾಗಲು ಬಿಡಿ.

    ಈಗ ½ ಕಪ್ ಸಕ್ಕರೆ ಮತ್ತು 3 ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ.

    ಇದನ್ನು ಹೆಸರುಕಾಳಿನ ಮಿಶ್ರಣಕ್ಕೆ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ, ಇದರಿಂದ ಉಂಡೆ ಕಟ್ಟಿ, ಪಿಸ್ತಾದಿಂದ ಅಲಂಕರಿಸಿದರೆ, ಲಡ್ಡು ಸವಿಯಲು ಸಿದ್ಧ.

Instructions
Nutritional Information
  • People - 2
  • ಕ್ಯಾಲೋರಿ - 136ಗ್ರಾ
  • ಕೊಬ್ಬು - 5ಗ್ರಾ
  • ಪ್ರೋಟೀನ್ - 2ಗ್ರಾ
  • ಕಾರ್ಬ್ಸ್ - 21ಗ್ರಾ
[ 4 of 5 - 16 Users]
Story first published: Thursday, January 13, 2022, 13:27 [IST]
X
Desktop Bottom Promotion