Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಜಾಯಿಕಾಯಿ ಸಿಪ್ಪೆಯ ಉಪ್ಪಿನಕಾಯಿ ರೆಸಿಪಿ
ಉಪ್ಪಿನಕಾಯಿ ಕಂಪೆನಿಯೊಂದು ಹೇಗೆ ಉಪ್ಪಿನಕಾಯಿ ತಯಾರಿಸುತ್ತದೆ ಎಂದು ಟಿವಿ ಚಾನಲ್ ವೊಂದರಲ್ಲಿ ರಹಸ್ಯ ಕಾರ್ಯಾಚರಣೆಯ ವೀಡಿಯೋ ನೋಡಿದ ಮೇಲೆ ಜೀವಮಾನದಲ್ಲಿ ಯಾವತ್ತೂ ಕೂಡ ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೆಟ್ ಉಪ್ಪಿನಕಾಯಿಯನ್ನು ಖರೀದಿಸಲೇಬಾರದು ಎಂದೆನಿಸಿತ್ತು. ಹಾಗಾಗಿ ಆದಷ್ಟು ಮನೆಯಲ್ಲೇ ಉಪ್ಪಿನಕಾಯಿ ತಯಾರಿಸಿಕೊಳ್ಳುವುದು ಬಹಳ ಒಳ್ಳೆಯದು.


ಸ್ವಲ್ಪ ಒಗರು, ಸ್ವಲ್ಪ ಖಾರ,ಸ್ವಲ್ಪ ಹುಳಿ ಅಂಶದಿಂದ ಕೂಡಿರುವ ಈ ಸಿಪ್ಪೆಗಳಿಂದ ಆರೋಗ್ಯಕರವಾದ ಉಪ್ಪಿನಕಾಯಿಯನ್ನು ತಯಾರಿಸಿಕೊಳ್ಳಬಹುದು. ಹಾಗಾದ್ರೆ ಜಾಯಿಕಾಯಿ ಸಿಪ್ಪೆಯ ಉಪ್ಪಿನಕಾಯಿ ತಯಾರಿಸುವುದು ಹೇಗೆ ನೋಡೋಣ ಬನ್ನಿ.

Recipe By: Sushma
Recipe Type: Pickle
Serves: 100
-
ಬೇಕಾಗುವ ಸಾಮಗ್ರಿಗಳು:
ಜಾಯಿಕಾಯಿ ಸಿಪ್ಪೆಗಳು- 30
ಉಪ್ಪು- 250 ಗ್ರಾಂ
ಸಾಸಿವೆ- ನಾಲ್ಕು ಟೀ ಸ್ಪೂನ್
ಇಂಗು- ಎರಡು ಹುಣಸೆ ಬೀಜದ ಗಾತ್ರ
ಕೆಂಪು ಮೆಣಸಿನಪುಡಿ - 250 ಗ್ರಾಂ
ಎಣ್ಣೆ- 100 ಗ್ರಾಂ
-
ಮಾಡುವ ವಿಧಾನ:
ಜಾಯಿಕಾಯಿ ಸಿಪ್ಪೆಯನ್ನು ತೊಳೆದು ಒಂದು ಬಿಳಿಯ ಬಟ್ಟೆಯ ಮೇಲೆ ಹರವಿಡಿ.
ಅದರ ನೀರು ಒಣಗುವವರೆ ಕಾಯಿರಿ.
ನಂತರ ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ.
ಅದಕ್ಕೆ ಉಪ್ಪು ಹಾಕಿ ಕೈಯಾಡಿಸಿ.
ಉಪ್ಪಿನಕಾಯಿ ಆಗಿರುವುದರಿಂದಾಗಿ ಅಧಿಕವೇ ಉಪ್ಪು ಬೇಕಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.
ನಂತರ ಅದಕ್ಕೆ ಖಾರಕ್ಕೆ ಅನುಗುಣವಾಗಿ ಅಚ್ಚಖಾರದಪುಡಿಯನ್ನು ಸೇರಿಸಿ.
ನಂತರ ಎಣ್ಣೆ ಹಾಕಿ ಸಾಸಿವೆ, ಇಂಗಿನ ಒಗ್ಗರಣೆ ಮಾಡಿ.
ಮಿಶ್ರಣವನ್ನು ಚೆನ್ನಾಗಿ ಕಲಸಿ.
ಒಂದೆರಡು ತಾಸಿನ ನಂತರ ಗಾಜಿನ ಇಲ್ಲವೇ ಪಿಂಗಾಣಿ ಬಾಟಲಿಗೆ ಉಪ್ಪಿನಕಾಯಿಯನ್ನು ತುಂಬಿಸಿ ಇಡಿ.
ಇವೆರಡೂ ಇಲ್ಲದೆ ಇದ್ದರೆ ಪ್ಲಾಸ್ಟಿಕ್ ಡಬ್ಬಿಯಲ್ಲಿ ತುಂಬಿ ಇಡಿ.
ಆದರೆ ಡಬ್ಬದಲ್ಲಿ ನೀರಿನ ಪಸೆ ಇರುವಂತಿಲ್ಲ.
ಉಪ್ಪಿನಕಾಯಿಗೆ ನೀರು ತಗುಲಿದರೆ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.
ಒಂದು ವಾರದ ನಂತರ ಸವಿಯಲು ಸಿದ್ಧವಾಗಿರುತ್ತದೆ.
- 6 ತಿಂಗಳವರೆಗೂ ಬಳಸಬಹುದಾದ ಉಪ್ಪಿನಕಾಯಿ ಇದಾಗಿರುತ್ತದೆ. ತಂಡಿ ದೇಹ ಪ್ರಕೃತಿಯವರು ಇದನ್ನು ಬಳಸುವುದರಿಂದಾಗಿ ಮಳೆಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದಕ್ಕೆ ನೆರವಾಗುತ್ತದೆ. ಬಾಣಂತಿಯರಿಗೆ ಬಡಿಸುವುದಕ್ಕೆ ಇದು ಉತ್ತಮವಾದ ಉಪ್ಪಿನಕಾಯಿ ಆಗಿದೆ. ಜಾಯಿಕಾಯಿಯ ಸತ್ವಗಳು ನಿಮಗೆ ಇದರಿಂದ ಲಭ್ಯವಾಗುತ್ತದೆ.
- ಪ್ರೊಟೀನ್ - - 6 ಗ್ರಾಂ
- ಕಾರ್ಬೊಹೈಡ್ರೇಟ್ - - 49 ಗ್ರಾಂ
- ಪೊಟಾಷಿಯಂ - - 350 ಮಿಲಿಗ್ರಾಂ
- ಕ್ಯಾಲೊರಿ - - 525
- ಸೋಡಿಯಂ - - 16ಮಿಲಿಗ್ರಾಂ



Click it and Unblock the Notifications
