For Quick Alerts
ALLOW NOTIFICATIONS  
For Daily Alerts

ಮಧುಮೇಹಕ್ಕೆ ಈ ಬಿಲ್ವ ಪತ್ರೆ ಚಟ್ನಿ ತುಂಬಾ ಒಳ್ಳೆಯದು

Posted By:
|

'ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ, ತ್ರಿಜನ್ಮ ಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ' ಎಂಬ ಸ್ತೋತ್ರ ಇದೆ. ಅಂದರೆ ಮೂರು ದಳ, ಮೂರು ಆಕಾರ, ಮೂರು ಕಣ್ಣು ಹಾಗೂ ಮೂರು ಆಯುಧವನ್ನು ಹೊಂದಿರುವ ಒಂದು ಬಿಲ್ವಪತ್ರೆಯನ್ನು ಭಕ್ತಿಯಿಂದ ಈಶ್ವರನಿಗೆ ಸರ್ಮಪಿಸಿದರೆ ಮೂರು ಜನ್ಮದ ಪಾಪವು ಪರಿಹಾರವಾಗುತ್ತದೆ ಎಂದರ್ಥ.

bilwa patre leaf chatni

ಶಿವನ ನೆಚ್ಚಿನ ಮೂರು ದಳಗಳ ಪತ್ರೆಯೇ ಬಿಲ್ವಪತ್ರೆ. ಬಿಲ್ವಪತ್ರೆಯಿಂದ ಶಿವನನ್ನು ಆರಾಧಿಸಿದರೆ ಮೂರು ಜನ್ಮಗಳ ಪಾಪಗಳನ್ನು ಶಿವ ಸುಟ್ಟುಬಿಡುತ್ತಾನೆ ಎಂಬುದೊಂದು ನಂಬಿಕೆ ಇದೆ. ಸಾಮಾನ್ಯವಾಗಿ ಈಶ್ವರನ ದೇಗುಲವಿರುವ ಕಡೆಗಳಲ್ಲಿ ಬಿಲ್ವಪತ್ರೆಯ ಮರ ಇದ್ದೇ ಇರುತ್ತದೆ. ಬಿಲ್ವಪತ್ರೆಗೆ ಸಾಕಷ್ಟು ಪುರಾಣದ ಹಿನ್ನೆಲೆಯೂ ಇದೆ. ಲಕ್ಷ್ಮೀ ಸ್ತನದಲ್ಲಿ ಮೂಡಿದ್ದು ಬಿಲ್ವ ಎಂಬ ನಂಬಿಕೆಯೂ ಇದೆ. ಬಿಲ್ವ ಪತ್ರೆಯಲ್ಲಿರುವ ಮೂರು ದಳಗಳು ಸತ್ವಗುಣ, ರಜೋ ಗುಣ ಮತ್ತು ತಮೋ ಗುಣಗಳ ಸಂಕೇತ ಎಂಬ ಪ್ರತೀತಿಯೂ ಉಂಟು.

ನೀವು ಯಾವುದಾದರೂ ಶಿವನ ದೇವಸ್ಥಾನಕ್ಕೆ ತೆರಳಿದಾಗ ಖಂಡಿತ ಅಲ್ಲಿ ಪ್ರಸಾದದ ರೂಪದಲ್ಲಿ ಬಿಲ್ವಪತ್ರೆ ಸಿಕ್ಕಿರುತ್ತದೆ. ಅದನ್ನು ಹಾಳು ಮಾಡಬೇಡಿ. ಪುರಾಣ ಪ್ರತೀತಿ ಮಾತ್ರವೇ ಅಲ್ಲದೆ ಆಯುರ್ವೇದದಲ್ಲೂ ಕೂಡ ಬಿಲ್ವಪತ್ರೆಯ ಆರೋಗ್ಯ ಲಾಭಗಳ ಬಗ್ಗೆ ಹೇಳಲಾಗಿದೆ. ಹೌದು ನಿಮ್ಮ ಆರೋಗ್ಯಕ್ಕೆ ಬಿಲ್ವಪತ್ರೆ ಸಾಕಷ್ಟು ಉಪಯೋಗಗಳನ್ನು ಮಾಡುತ್ತದೆ. ಇದರಿಂದ ಸೇವಿಸಿದ ಖಾಧ್ಯಗಳನ್ನು ಸೇವಿಸುವ ಮೂಲಕ ನೀವು ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು. ನಾವಿವತ್ತು ಬೋಲ್ಡ್ ಸ್ಕೈ ನಲ್ಲಿ ಬಿಲ್ವಪತ್ರೆಯಿಂದ ತಯಾರಿಸಬಹುದಾದ ಒಂದು ರುಚಿ ರುಚಿಯಾದ ಖಾದ್ಯದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಅದುವೇ ಬಿಲ್ವಪತ್ರೆಯ ಚಟ್ನಿ. ಇದನ್ನು ಮಾಡುವುದು ಹೇಗೆ? ಇದರ ಸೇವಿಸುವುದರಿಂದಾಗುವ ಆರೋಗ್ಯ ಲಾಭಗಳೇನು ಎಂಬ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

Bilwa patre leaf chatni recipe ಮಧುಮೇಹಕ್ಕೆ ಈ ಬಿಲ್ವ ಪತ್ರೆ ಚಟ್ನಿ ತುಂಬಾ ಒಳ್ಳೆಯದು
Bilwa patre leaf chatni recipe ಮಧುಮೇಹಕ್ಕೆ ಈ ಬಿಲ್ವ ಪತ್ರೆ ಚಟ್ನಿ ತುಂಬಾ ಒಳ್ಳೆಯದು
Prep Time
5 Mins
Cook Time
5M
Total Time
10 Mins

Recipe By: Sushma Chatra

Recipe Type: Veg

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ಬಿಲ್ವಪತ್ರೆಯ ಎಲೆಗಳು - 15 ರಿಂದ 20

    ತೆಂಗಿನ ತುರಿ - ಅರ್ಧ ಕಪ್

    ಬ್ಯಾಡಗಿ ಕೆಂಪು ಮೆಣಸು - 10-12

    ಎಳ್ಳು - ಒಂದು ಟೀ ಸ್ಪೂನ್

    ಕೊಬ್ಬರಿ ಎಣ್ಣೆ - ಒಂದು ಟೀ ಸ್ಪೂನ್

    ಉಪ್ಪು - ರುಚಿಗೆ ತಕ್ಕಷ್ಟು

    ಹುಣಸೆ ಹಣ್ಣು - ಒಂದು ಅಡಿಕೆ ಗಾತ್ರದಷ್ಟು

Red Rice Kanda Poha
How to Prepare
  • ಮಾಡುವ ವಿಧಾನ

    ಬಿಲ್ವಪತ್ರೆಯ ಎಲೆಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.

    ಒಂದು ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಕೆಂಪು ಮೆಣಸು, ಎಳ್ಳು, ಬಿಲ್ವದ ಎಲೆಗಳನ್ನು ಹಾಕಿ ಬಾಡಿಸಿಕೊಳ್ಳಿ.

    ಅದನ್ನು ಮಿಕ್ಸಿ ಜಾರಿಗೆ ಹಾಕಿ ತೆಂಗಿನ ತುರಿ, ಉಪ್ಪು, ಹುಣಸೆ ಹಣ್ಣು ಸೇರಿಸಿ

    ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡರೆ ರುಚಿರುಚಿಯಾದ ಚಟ್ನಿ ಸಿದ್ಧವಾಗುತ್ತದೆ.

Instructions
  • ದೋಸೆ, ಚಪಾತಿ, ರೊಟ್ಟಿಯ ಜೊತೆ ಸೇವಿಸಲು ಅತ್ಯುತ್ತಮವಾಗಿರುತ್ತದೆ. ಬಿಸಿಬಿಸಿ ಅನ್ನಕ್ಕೆ ಚಟ್ನಿ ಕಲಸಿ ಮೇಲಿಂದ ಕೊಬ್ಬರಿ ಎಣ್ಣೆ ಹಾಕಿಕೊಂಡು ಈರುಳ್ಳಿ ಕಚ್ಚಿಕೊಂಡು ಸವಿಯೋಕೆ ಬೊಂಬಾಟ್ ಆಗಿರುತ್ತದೆ. ಎರಡು ಮೂರು ನಿಮಿಷದಲ್ಲಿ ತಯಾರಿಸಬಹುದಾದ ಈ ಖಾಧ್ಯವನ್ನು ಮನೆಮಂದಿಯೆಲ್ಲ ಇಷ್ಟ ಪಡುವುದರಲ್ಲಿ ಅನುಮಾನವೇ ಇಲ್ಲ.
Nutritional Information

ಆರೋಗ್ಯ ಲಾಭಗಳು
• ವಾತದ ಸಮಸ್ಯೆಯಿಂದ ಬಳಲುವವರು ಇದನ್ನು ಸೇವಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
• ಅತಿಸಾರ ಸಮಸ್ಯೆಗೂ ಕೂಡ ಪರಿಹಾರ ನೀಡುವ ಸಾಮರ್ಥ್ಯ ಇದಕ್ಕಿದೆ.
• ಮಧುಮೇಹ ಸಮಸ್ಯೆ ಇರುವವರು ಬಿಲ್ವಪತ್ರೆಯ ಸೇವನೆಯಿಂದ ಕಾಯಿಲೆಯನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಡಬಹುದು ಎಂದು ನೀವು ಕೇಳಿರಬಹುದು. ಹಾಗಾಗಿ ಮಧುಮೇಹಿಗಳಿಗೆ ಈ ಚಟ್ನಿ ಹೇಳಿ ಮಾಡಿಸಿದ ಅಡುಗೆ.
• ಜ್ವರದಿಂದ ಬಳಲುವವರು ಇದರ ಸೇವನೆ ಮಾಡಿದರೆ ಒಳ್ಳೆಯದು.
• ಮೂತ್ರ ಸಂಬಂಧಿತ ಯಾವುದೇ ಕಾಯಿಲೆ ಇದ್ದರೂ ಕೂಡ ಅದನ್ನು ಹೊಡೆದೋಡಿಸುವ ಶಕ್ತಿ ಬಿಲ್ವಪತ್ರೆಗಿದೆ. ಹಾಗಾಗಿ ಮೂತ್ರದ ಸೋಂಕು ಸೇರಿದಂತೆ ಯಾವುದೇ ಮೂತ್ರ ಸಂಬಂಧಿ ಕಾಯಿಲೆಯಲ್ಲಿರುವವರು ಈ ಚಟ್ನಿಯನ್ನು ಸೇವಿಸಬಹುದು.
• ಇದು ಉಷ್ಣಗುಣವನ್ನು ಹೊಂದಿರುವ ಕಾರಣದಿಂದಾಗಿ ಜೀರ್ಣಕ್ರಿಯೆ ಅಧಿಕವಾಗುತ್ತದೆ. ಹಾಗಾಗಿ ಅಜೀರ್ಣ ಸಮಸ್ಯೆಯಿಂದ ಬಳಲುವವರು ಈ ಚಟ್ನಿಯನ್ನು ಮನೆಯಲ್ಲಿ ಆಗಾಗ ಮಾಡಿಕೊಂಡರೆ ನಿಮ್ಮ ಅಜೀರ್ಣ ಸಮಸ್ಯೆ ಪರಿಹಾರವಾಗುತ್ತದೆ.
• ಕಣ್ಣಿನ ಕಾಯಿಲೆ, ಕಿವುಡುತನಗಳಿಗೂ ಕೂಡ ಇದು ಪರಿಹಾರ ನೀಡುವ ಸಾಮರ್ಥ್ಯ ಹೊಂದಿದೆ.
• ಕೆಮ್ಮು,ನೆಗಡಿ ಸಮಸ್ಯೆಗಳಿಗೂ ಈ ಚಟ್ನಿಯ ಸೇವನೆ ಒಳ್ಳೆಯದು.
• ಹಲ್ಲುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ, ಹಲ್ಲಿನ ಬೇರುಗಳು ಸೆನ್ಸಿಟೀವ್ ಆಗಿದ್ದಲ್ಲಿ ಬಿಲ್ವದ ಎಲೆಗಳಿಂದ ತಯಾರಿಸಿದ ಈ ಚಟ್ನಿಯ ಸೇವನೆಯಿಂದ ಪರಿಹಾರ ಮಾಡಿಕೊಳ್ಳಬಹುದು.
• ನೋವು ನಿವಾರಕ ಮತ್ತು ನಂಜು ನಿವಾರಕ ಸಾಮರ್ಥ್ಯ ಬಿಲ್ವ ಎಲೆಗಳಲ್ಲಿದೆ. ಹಾಗಾಗಿ ನಿಮಗೆ ಮೈಕೈ ನೋವು, ನಂಜಾಗಿದ್ದಲ್ಲಿ ಬಿಲ್ವದೆಲೆಯ ಚಟ್ನಿಯ ಸೇವನೆಯಿಂದ ಪರಿಹಾರ ಮಾಡಿಕೊಳ್ಳಬಹುದು.
• ಹೈಪರ್ ಥೈರಾಯ್ಡ್ ಸಮಸ್ಯೆ ಇರುವವರು ಈ ಚಟ್ನಿಯ ಸೇವನೆಯಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.

[ 5 of 5 - 112 Users]
X
Desktop Bottom Promotion