Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ರುಚಿ ರುಚಿಯ ರಾಗಿ ರೊಟ್ಟಿ ಮಾಡೋದು ಹೇಗೆ? ಇಲ್ಲಿದೆ ಸುಲಭದ ರೆಸಿಪಿ.!
ರಾಗಿ ಅತ್ಯುತ್ತಮ ಆಹಾರ ಪದಾರ್ಥದಲ್ಲಿ ಒಂದು. ಸಮೃದ್ಧವಾದ ಪೋಷಕಾಂಶವನ್ನು ಹೊಂದಿರುವುದರಿಂದ ಜನರು ಇದನ್ನು ಮುಖ್ಯ ಆಹಾರವಾಗಿಯೂ ಸೇವಿಸುತ್ತಾರೆ. ಇದರಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ರಾಗಿರೊಟ್ಟಿಯೂ ಒಂದು. ಗ್ರಾಮೀಣ ಜನರು ಇದನ್ನು ಕಡ್ಡಾಯವಾದ ಉಪಹಾರವಾಗಿ ಸೇವಿಸುತ್ತಾರೆ. ಇದರಲ್ಲಿ ಪ್ರೋಟೀನ್ ಮತ್ತು ನಾರಿನಂಶ ಅಧಿಕ ಪ್ರಮಾಣದಲ್ಲಿ ಇರುವುದರಿಂದ ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುವುದು.
ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ ತಿನ್ನೋದಕ್ಕೂ ಹಿತ, ಆರೋಗ್ಯಕ್ಕೂ ಒಳ್ಳೇದು. ಇಂದು ನಾವು ಸ್ಪೆಷಲ್ ರಾಗಿ ರೊಟ್ಟಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ. ಏಕೆಂದರೆ ಈ ರಾಗಿ ರೊಟ್ಟಿ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ರಾಗಿಯು ಆಹಾರದ ಫೈಬರ್, ಸಂಕೀರ್ಣ ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ಗಳ ಉತ್ತಮ ಮೂಲವಾಗಿದೆ, ಅದು ನಿಮ್ಮನ್ನು ತೃಪ್ತಿಪಡಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಉತ್ತಮ, ಇದರಿಂದಾಗಿ ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡಲು ಮತ್ತು ತೂಕ ಇಳಿಸಲು ಸಹ ಇದು ಸಹಾಯ ಮಾಡಲಿದೆ.

ಅಲ್ಲದೆ ಇದು ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಳವಾಗುವುದನ್ನು ನಿಯಂತ್ರಿಸಲು ಮತ್ತು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಅಂಶ ಹೊಂದಿರುವ ರಾಗಿಯಿಂದ ಮಾಡಬಹುದಾದ ರೊಟ್ಟಿ ಕುರಿತು ನಾವಿಂದು ತಿಳಿಯೋಣ.
ಹಾಗಾದ್ರೆ ಅತ್ಯುತ್ತಮ ರುಚಿಯ ರಾಗಿ ರೊಟ್ಟಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ರಾಗಿ ರೊಟ್ಟಿ ಮಾಡುವ ವಿಧಾನವೇನು? ಹೇಗೆ ಮಾಡಿದರೆ ಮೃದುವಾಗಿ ರುಚಿಯಾಗಿರುತ್ತೆ ಎಂಬುದನ್ನು ತಿಳಿದುಕೊಳ್ಳಿ.
ರಾಗಿ ರೊಟ್ಟಿ ಮಾಡಲು ಬೇಕಾಗುವ ಪದಾರ್ಥಗಳು
- ರಾಗಿ ಹಿಟ್ಟು- 2 ಕಪ್
- ಈರುಳ್ಳಿ - 2
- ಈರುಳ್ಳಿ-2
- ಜೀರಿಗೆ - 1 ಟೀಸ್ಪೂನ್
- ಶುಂಠಿ - 1 ಟೀಸ್ಪೂನ್
- ಹಸಿರು ಮೆಣಸಿನಕಾಯಿ - 2
- ಕರಿಬೇವಿನ ಎಲೆಗಳು - 1 tbs
- ಕೊತ್ತಂಬರಿ ಸೊಪ್ಪು - 2 tbs
- ತೆಂಗಿನಕಾಯಿ - 2 tbs
- ಸಬ್ಬಸಿಗೆ ಎಲೆಗಳು - 1/2 ಕಪ್
- ಇಂಗು- 1/4 ಟೀಸ್ಪೂನ್
- ಬಿಳಿ ಎಳ್ಳು - 1 ಟೀಸ್ಪೂನ್
- ಅಡುಗೆ ಎಣ್ಣೆ
- ರುಚಿಗೆ ಉಪ್ಪು
ರಾಗಿ ರೊಟ್ಟಿ ಮಾಡುವ ವಿಧಾನವೇನು?
ಒಂದು ಬೌಲ್ನಲ್ಲಿ ರಾಗಿ ಹಿಟ್ಟು ತೆಗೆದುಕೊಳ್ಳಿ, ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿ, ಜೊತೆಗೆ ಇದಕ್ಕೆ ಬಿಳಿ ಎಳ್ಳು, ಜೀರಿಗೆ, ಹಸಿ ಮೆಣಸಿನಕಾಯಿ, ತೆಂಗಿನ ಕಾಯಿ, ಶುಂಠಿ, ಕರಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಸವ್ಸಿಗೆ ಸೊಪ್ಪು, ಇಂಗು, ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಕಲಿಸುವಾಗ ಉಗುರು ಬೆಚ್ಚಗಿನ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟು ಮೆತ್ತಗಾಗುವರೆಗೂ ಕಲಿಸಿಕೊಳ್ಳಿ. ಬಳಿಕ ಪ್ಲಾಸ್ಟಿಕ್ ಅಥವಾ ಬಾಳೆ ಎಲೆ ಕಾಟನ್ ಬಟ್ಟೆ ಬಳಸಿ ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ರಾಗಿ ಹಿಟ್ಟನ್ನು ರೊಟ್ಟಿಯಂತೆ ತಟ್ಟಿಕೊಳ್ಳಬೇಕು. ಈ ವೇಳೆ ಹಿಟ್ಟು ಕೈಗೆ ಹಿಡಿದರೆ ಕೈಗೆ ನೀರು ಹಚ್ಚಿಕೊಂಡು ತಟ್ಟಿಕೊಂಡು ಕಾವಲಿ ಮೇಲೆ ಹಾಕಿ.
ಈ ರೊಟ್ಟಿಯನ್ನು ಎಷ್ಟು ತೆಳು ಸಾಧ್ಯವೋ ಅಷ್ಟು ತೆಳುವಾಗಿ ಮಾಡಿಕೊಳ್ಳಿ, ಏಕೆಂದರೆ ದಪ್ಪವಾದರೆ ರೊಟ್ಟಿ ಬೇಯುವುದು ತಡವಾಗಲಿದೆ. ರೊಟ್ಟಿ ಕಾಯುವಾಗ ಅದರ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿಕೊಳ್ಳಬಹುದು. ಎರಡು ಕಡೆ ಚೆನ್ನಾಗಿ 5 ನಿಮಿಷ ಕಾಯಿಸಿಕೊಂಡ ಬಳಿಕ ಇದನ್ನು ಚಟ್ನಿ ಜೊತೆ ಸವಿಯಬಹುದು.
ರಾಗಿ ರೊಟ್ಟಿಯನ್ನು ತೆಂಗಿನ ಕಾಯಿ ಇಲ್ಲವೆ ಶೇಂಗಾ ಚಟ್ನಿ ಜೊತೆ ಸವಿಯಲು ಬಹಳ ರುಚಿಕರವಾಗಿರುತ್ತೆ. ಜೊತೆಗೆ ಬಿಸಿ ಬಿಸಿ ಇದ್ದಾಗಲೇ ಈ ರೊಟ್ಟಿಯನ್ನು ಸೇವಿಸಬೇಕು. ತಣ್ಣಗಾದ ಬಳಿಕ ಇದು ಗಟ್ಟಿಯಾಗುತ್ತದೆ.



Click it and Unblock the Notifications
