Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
1 ಕಪ್ ರವೆಯಿಂದ ರುಚಿ ರುಚಿ ಸಿಹಿ ತಿಂಡಿ ಮಾಡಿ! ಇಲ್ಲಿದೆ ಸುಲಭದ ತಿಂಡಿ!
ಹಬ್ಬದ ಸಮಯದಲ್ಲಿ ಎಲ್ಲರ ಮನೆಯಲ್ಲಿ ಒಂದಲ್ಲಾ ಒಂದು ಸಿಹಿ ತಿಂಡಿ ಮಾಡಿಯೇ ಮಾಡುತ್ತಾರೆ. ಅದ್ರಲ್ಲೂ ಸಿಹಿ ತಿಂಡಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರೆ ಸಿಹಿ ತಿಂಡಿ ಮಾಡೋದು ಅಂದ್ರೆ ಬಹಳ ಸಮಯ ಹಾಗೆ ಬಹಳ ವಸ್ತುಗಳ ಹಿಡಿಯಲಿದೆ ಎಂದು ಹಲವರು ಸುಮ್ಮನಾಗುತ್ತಾರೆ. ಆದ್ರೆ ಹಬ್ಬಕ್ಕೆ ಸಿಹಿ ಬೇಕಾದಾಗ ಸುಲಭ ದಾರಿಯಾಗಿ ಖರೀದಿಸಿ ತರುವುದು ನೋಡಬಹುದು.
ಆದರೆ ಮನೆಯಲ್ಲೇ ಮಾಡಿದ ತಿಂಡಿಗಳು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ನಾವಿಂದು ಮನೆಯಲ್ಲಿ ಸುಲಭವಾಗಿ ಕೇವಲ 1 ಕಪ್ ರವೆ ಬಳಸಿಕೊಂಡು ಮಾಡುವ ಸುಲಭದ ತಿಂಡಿಯ ಕುರಿತು ತಿಳಿಯೋಣ. ನೀಡಲು ಕಜ್ಜಾಯದಂತೆ ಕಾಣುವ ಈ ತಿಂಡಿ ಸವಿಯಲು ಬಹಳ ರುಚಿ ನೀಡಲಿದೆ. ಹಾಗಾದ್ರೆ ಈ ಸುಲಭದ ತಿಂಡಿ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.

ನೀವು ಹಬ್ಬಕ್ಕಾಗಿ ತಿಂಡಿ ಮಾಡುವ ಆಲೋಚನೆಯಲ್ಲಿದ್ದರೆ ಈ ರವೆಯಿಂದ ಮಾಡುವಂತಹ ರುಚಿ ರುಚಿಯ ತಿಂಡಿ ಮಾಡುವ ಕುರಿತು ತಿಳಿದುಕೊಳ್ಳೋಣ. ರವೆಯಿಂದ ಈ ಸಿಹಿ ತಿಂಡಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನ ನಾವಿಂದು ತಿಳಿದುಕೊಳ್ಳೋಣ.
ರವೆಯಿಂದ ಸಿಹಿ ತಿಂಡಿ ಮಾಡಲು ಬೇಕಾಗುವ ವಸ್ತುಗಳು
ರವೆ
ಸಕ್ಕರೆ
ಏಲಕ್ಕಿ
ಎಣ್ಣೆ
ರವೆಯಿಂದ ಸಿಹಿ ತಿಂಡಿ ಮಾಡುವ ವಿಧಾನವೇನು?
ಮೊದಲು ಒಂದು ಕಪ್ ರವೆ ಹಾಗೂ 1 ಕಪ್ ಸಕ್ಕರೆ ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಕಪ್ ನೀರು ಹಾಕಿ 1 ಸ್ಪೂನ್ ತುಪ್ಪ ಹಾಕಿ. ಹಾಗೆ ಮಿಕ್ಸ್ ಮಾಡಿಕೊಂಡು ನೀರು ಕುದಿಬರಲು ಬಿಡಿ. ಇದಕ್ಕೆ ಏಲಕ್ಕಿ ಪುಡಿ ಹಾಕಿಕೊಳ್ಳಿ. ನಂತರ ನೀರು ಕುದಿಯಲು ಆರಂಭಿಸಿದಾಗ ಇದಕ್ಕೆ ಸಕ್ಕರೆ ಹಾಗೂ ರವೆಯನ್ನು ನಿಧಾನವಾಗಿ ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ.
ಗಂಟುಗಳಿಲ್ಲದಂತೆ ಮಿಕ್ಸ್ ಮಾಡುತ್ತಾ ಇರಿ. ಇದು ಕೇಸರಿಬಾತಿನ ಹದದಂತೆ ಬರಬೇಕು. ನೀರು ಒಣಗಿದ ಬಳಿಕ ಮುಚ್ಚಳ ಮುಚ್ಚಿ 2 ನಿಮಿಷ ಬಿಡಿ, ನಂತರ ಒಲೆ ಆಫ್ ಮಾಡಿ ಮಿಕ್ಸ್ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಸ್ವಲ್ಪ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ. ಈಗ ಸಣ್ಣ ಸಣ್ಣ ಉಂಡೆಯನ್ನು ಮಾಡಿಕೊಳ್ಳಿ.
ಹಾಗೆಯೇ ಇದನ್ನು ಸಣ್ಣ ವಡೆಯಂತೆ ಆಕಾರ ಮಾಡಿಕೊಂಡು ಪ್ಲೇಟ್ನಲ್ಲಿ ಇಟ್ಟುಕೊಳ್ಳಬೇಕು. ಎಲ್ಲಾ ಹಿಟ್ಟನ್ನು ಇದೇ ರೀತಿ ಚೆನ್ನಾಗಿ ತಟ್ಟಿಕೊಂಡು ಇಟ್ಟುಕೊಳ್ಳಿ. ಅನಂತರ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಈಗ ಈ ತಿಂಡಿಯನ್ನು ಎಣ್ಣೆಗೆ ಬಿಡಬೇಕು.
ಹೊರಗೆ ಚೆನ್ನಾಗಿ ಕರಿದುಕೊಳ್ಳಬೇಕು. ಬಣ್ಣ ಬ್ರೌನ್ ಆಗಿ ಬದಲಾಗಬೇಕು. ಇದನ್ನು ಕರಿಯಲು ಕೆಲ ಸಮಯ ಬೇಕಾಗುತ್ತದೆ. ನಿಧಾನಕ್ಕೆ ಕರಿದುಕೊಳ್ಳುತ್ತಾ ಇರಿ. ನಂತರ ತೆಗೆದು ಜರಡಿಯಲ್ಲಿ ಹಾಕಿ ಎಣ್ಣ ಇಳಿಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಈ ರವೆ ತಿಂಡಿ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ. ಎಲ್ಲರಿಗೂ ಇಷ್ಟವಾಗುವಂತಹ ತಿಂಡಿ ಇದಾಗಿರಲಿದೆ. ನೀವು ಸಹ ದೀಪಾವಳಿಯ ಸಮಯದಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications
